ಬೆಂಗಳೂರು: ಕೊರೊನಾ ನಾಲ್ಕನೇ ಅಲೆ ಈಗಾಗಲೇ ದೇಶದಲ್ಲಿ ಶುರುವಾಗಿದೆ. ಕೋವಿಡ್ ನಾಲ್ಕನೇ ಅಲೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಎಲ್ಲ ರಾಜ್ಯದ ಸಿಎಂಗಳ ಜೊತೆ ವರ್ಚುವಲ್ ಮೀಟಿಂಗ್ ಮಾಡಲು ಸಹ ನಿರ್ಧಾರ ಮಾಡಿದ್ದಾರೆ.ದೆಹಲಿ, ಮುಂಬೈ ಸೇರಿದಂತೆ ಹಲವೆಡೆ ಈಗಾಗಲೇ ನಾಲ್ಕನೇ ಅಲೆಯ ಅಬ್ಬರ ಶುರುವಾದ ಕಾರಣದಿಂದ ರಾಜ್ಯದಲ್ಲೂ ಸಹ ಕಟ್ಟೆಚ್ಚರವಹಿಸಲು ಸರ್ಕಾರ ಮುಂದಾಗಿದೆ. ಇಂದಿನಿಂದ ರಾಜ್ಯದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಅಂತಾ ಆದೇಶವನ್ನು ಸರ್ಕಾರ ನೀಡಿದೆ.ಕೆ.ಆರ್ ಮಾರ್ಕೆಟ್‍ನಲ್ಲಿ ಜನಸಾಗರವೇ ಸೇರುತ್ತೆ. ಬಹುತೇಕ ಜನರು ಕಳೆದ ಮೂರು ತಿಂಗಳಿಂದ ಮಾಸ್ಕ್ ಧರಿಸುವುದನ್ನು ಮರೆತಿದ್ದು ಮಾಸ್ಕ್ ಹಾಕದೇ ವ್ಯಾಪಾರ ವಹಿವಾಟುನಲ್ಲಿ ತೊಡಗಿರುವ ದೃಶ್ಯಗಳು ಸಾಮಾನ್ಯವಾಗಿ ಕಾಣಿಸುತ್ತಿದೆ.Sign in to your account
Username or Email Address


Password

 Remember Me


