ಶುಭ ವಿವಾಹ, ಜೀವನ ಚೈತ್ರ, ಲಕ್ಷ್ಮೀ ಬಾರಮ್ಮ ಸೇರಿದಂತೆ ಹತ್ತಾರು ಧಾರಾವಾಹಿಗಳಲ್ಲಿ ನಟಿಸಿರುವ ರಶ್ಮಿ ಪ್ರಭಾಕರ್ ಇಂದು ಬೆಂಗಳೂರಿನಲ್ಲಿ ನಿಖಿಲ್ ಅವರ ಜತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯ ವಿವಾಹ ಮಹೋತ್ಸವ ಬೆಂಗಳೂರಿನ ಬಸವನಗುಡಿಯಲ್ಲಿ ನೆರವೇರಿತು.  ಹೊಸ ಜೋಡಿಗೆ ಶುಭ ಹಾರೈಸಲು ಕಿರುತೆರೆಯ ಅನೇಕ ಕಲಾವಿದರು ಆಗಮಿಸಿದ್ದರು.  ಇದನ್ನೂ ಓದಿ : ಮಂದಣ್ಣಗಾಗಿ ಮುಂಬೈನಲ್ಲಿ ಮುಗಿಬಿದ್ದ ಫ್ಯಾನ್ಸ್ : ಬಾಲಿವುಡ್ ನಲ್ಲೂ ರಶ್ಮಿಕಾ ಹವಾರಶ್ಮಿ ಪ್ರಭಾಕರ್ ಮಹಾಭಾರತ, ದರ್ಪಣ, ಮನಸೆಲ್ಲ ನೀನೇ ಶುಭಾ ವಿವಾಹ ಹಾಗೂ ತೆಲುಗಿನಲ್ಲಿ ಪೌರ್ಣಿಮಿ, ಕಾವ್ಯಾಂಜಲಿ ಸೇರಿದಂತೆ ಹತ್ತಾರು ಧಾರಾವಾಹಿಗಳಲ್ಲಿ ನಟಿಸಿದ್ದರೆ ನಿಖಿಲ್ ಕೂಡ ಈ ಹಿಂದೆ ಮಾಧ್ಯಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದದ್ರು. ಇದೀಗ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿ ಆಗಿದ್ದಾರೆ. ಮೂರು ವರ್ಷಗಳಿಂದ ಸ್ನೇಹಿತರಾಗಿದ್ದವರು ಇಂದು ಸತಿಪತಿಗಳಾಗಿದ್ದಾರೆ ನಿಖಿಲ್ ಮತ್ತು ರಶ್ಮಿ. ಇದನ್ನೂ ಓದಿ : ಬಾಲಿವುಡ್ ಎಂದರೆ ಭಾರತೀಯ ಸಿನಿಮಾರಂಗವಲ್ಲ: ಮೆಗಾಸ್ಟಾರ್ ಚಿರಂಜೀವಿಗೂ ಆಗಿತ್ತು ಅವಮಾನನವೆಂಬರ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿಯ ವಿವಾಹ ಅಂದುಕೊಂಡಂತೆ ಆಗಿದ್ದರೆ  ಈ ಹಿಂದೆಯೇ ನಡೆಯಬೇಕಿತ್ತು. ಕೊರೊನಾ ಹಾವಳಿ ಕಾರಣದಿಂದಾಗಿ ಮುಂದೂಡಲಾಗಿತ್ತು. ಈಗ ಎರಡೂ ಕುಟುಂಬಗಳ ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದ್ದಾರೆ ಈ ಜೋಡಿ. ಇದನ್ನೂ ಓದಿ : ಕೆಜಿಎಫ್ 2 : ಗೋವಾದಲ್ಲಿ ಸಕ್ಸಸ್ ಪಾರ್ಟಿಈ ಜೋಡಿಯ ಮದುವೆಗೆ  ಬಂದಿದ್ದ ಕಿರುತೆರೆಯ ಕಲಾವಿದರು ಮತ್ತು ತಂತ್ರಜ್ಞರು ನವದಂಪತಿಗಳಿಗೆ ಶುಭ ಹಾರೈಸಿದ್ದಲ್ಲದೇ, ಮದುವೆಯ ನಂತರವೂ ಧಾರಾವಾಹಿ ಕ್ಷೇತ್ರದಲ್ಲಿಯೇ ರಶ್ಮಿ ಉಳಿದುಕೊಳ್ಳಲಿ ಎಂದು ಆಶಿಸಿದ್ದಾರೆ.Sign in to your account
Username or Email Address


Password

 Remember Me


