ಬೆಂಗಳೂರು: ಈ ಏರಿಯಾದಲ್ಲಿ ನೈಟ್ ಆದ್ಮೇಲೆ ಓಡಾಡೋಕು ಕಷ್ಟ. ಓಡಾಡಿದ್ರು ಅಪ್ಪಿತಪ್ಪಿ ಬಾರು ಬಳಿ ಹೋದ್ರೆ ಪ್ರಾಣಕ್ಕೆ ಆಪತ್ತು ಬರುತ್ತೆ. ಕೈ ಮುಗಿದು ಬೇಡಿದ್ರು ಬಿಡಲ್ಲ, ಕಾಲಿಗೆ ಬಿದ್ರು ಬಿಡಲ್ಲ ಇಲ್ಲಿನ ಪುಂಡರು. ಬಾರ್ ಮುಂದೆ ತನ್ನಪಾಡಿಗೆ ತಾನು ನಿಂತಿದ್ರು ಯುವಕನ ಮೇಲೆ ಇಲ್ಲಿರುವ ಗ್ಯಾಂಗ್ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಬಾರ್ಡರ್ ಏರಿಯಾದಲ್ಲಿ ಗುಂಡಾ ದರ್ಬಾರ್ ಹೆಚ್ಚಾಗಿದೆ.ಮುದ್ದಯ್ಯನಪಾಳ್ಯದ ಎಸ್‍ಆರ್‌ಎಸ್ ಬಾರ್‌ನಲ್ಲಿ ಶುಕ್ರವಾರ ರಾತ್ರಿ ಯುವಕ ಸದಾನಂದನ ಮೇಲೆ ಬಾರ್‌ಗೆ ನುಗ್ಗಿದ ಗ್ಯಾಂಗ್ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ. ಮಂಜೇಶ್ ಅಂಡ್ ಟೀಂ ನಿಂದ ಸದಾನಂದನಿಗೆ ಹಲ್ಲೆ ನಡೆಸಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಒಬ್ಬನ ಮೇಲೆ ಪ್ರಹಾರ ನಡೆಸಿರೊ ಮಂಜೇಶ್ ತಂಡಕ್ಕೆ ಕೈ ಮುಗಿದು ಬೇಡಿದ್ರು ಬಿಡದೆ ಹಲ್ಲೆ ನಡೆಸಿದೆ. ಇದನ್ನೂ ಓದಿ: ಸ್ಮಶಾನದಲ್ಲಿ ಗುಂಡು, ತುಂಡು ಪಾರ್ಟಿ – ಸ್ನೇಹಿತರಿಂದಲೇ ಕೊಲೆಯಾದ ಯುವಕಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮುದ್ದಯ್ಯನ ಪಾಳ್ಯದಲ್ಲಿ ಘಟನೆ ನಡೆದಿದ್ದು, ಗಲಾಟೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.Sign in to your account
Username or Email Address


Password

 Remember Me


