ಬೆಂಗಳೂರು: ಹಿಜಬ್, ಹಲಾಲ್, ಅಜಾನ್ ಬೆನ್ನೆಲೆ ಇದೀಗ ಮುಸ್ಲಿಂ ವ್ಯಾಪಾರಿಗಳ ಬಳಿ ಚಿನ್ನ ಖರೀದಿ ಮಾಡದಂತೆ ಹಿಂದೂ ಪರ ಸಂಘಟನೆಗಳು ಅಭಿಯಾನ ಶುರುವಾಗಿದೆ.ಮೇ 3ರಂದು ಅಕ್ಷಯ ತೃತೀಯ ಹಬ್ಬವಿದ್ದು, ಈ ವಿಶೇಷ ದಿನ ಸಾಮಾನ್ಯವಾಗಿ ಜನರು ಚಿನ್ನ ಖರೀದಿಗೆ ಮುಗಿಬೀಳುತ್ತಾರೆ. ಈ ಹಿನ್ನೆಲೆ ಮುಸ್ಲಿಂ ವ್ಯಾಪಾರಿಗಳ ಬಳಿ ಚಿನ್ನ ಖರೀದಿ ಮಾಡದಂತೆ ಟ್ವಿಟ್ಟರ್‌ನಲ್ಲಿ  ಹಿಂದೂ ಪರ ಸಂಘಟನೆಗಳು ಅಭಿಯಾನ ಪ್ರಾರಂಭವಾಗಿದೆ.ರಾಜ್ಯದಲ್ಲಿ ಸರಿ ಸುಮಾರು ಮೂವತ್ತು ಸಾವಿರ ಚಿನ್ನದಂಗಡಿಗಳಿವೆ. ಅದರಲ್ಲಿ ಶೇಕಡಾ 30 ರಷ್ಟು ಮುಸ್ಲಿಂ ಮಾಲೀಕತ್ವದ ಮಳಿಗೆಗಳಿದ್ದು, ಬಹುತೇಕ ಮುಸ್ಲಿಂ ವ್ಯಾಪಾರಿಗಳು ಕೇರಳ ಮೂಲದ ಮುಸ್ಲಿಂ ವ್ಯಾಪಾರಿಗಳಾಗಿದ್ದಾರೆ. ಕಳೆದ ಎರಡು ವರ್ಷದಿಂದ ಕೊರೊನಾ ಹಿನ್ನೆಲೆ ವ್ಯಾಪಾರ ಡಲ್ ಆಗಿತ್ತು. ಆದರೆ ಈ ವರ್ಷದ ಅಕ್ಷಯ ತೃತೀಯಕ್ಕೆ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿ ಚಿನ್ನದ ಅಂಗಡಿ ಮಾಲೀಕರಿದ್ದಾರೆ. ಇದನ್ನೂ ಓದಿ: ಗೋಡ್ಸೆ ಸಿದ್ಧಾಂತವನ್ನು ಮೋದಿ ಬೆಂಬಲಿಸುತ್ತಿದ್ದಾರೆ: ಕೆಟಿಆರ್ಅಕ್ಷಯ ತೃತೀಯ ದಿನದಂದೇ ರಾಜ್ಯಾದ್ಯಂತ ಬರೋಬ್ಬರಿ ಒಂದು ಸಾವಿರ ಕೋಟಿ ವ್ಯಾಪಾರವಾಗುಚ ನಿರೀಕ್ಷೆಯನ್ನು ಮಾಲೀಕರು ಹೊಂದಿದ್ದಾರೆ. ಸದ್ಯ ಶುರುವಾಗಿರುವ ಅಭಿಯಾನದಿಂದ ಯಾರಿಗೆ ನಷ್ಟ, ಯಾರಿಗೆ ಲಾಭ ಎನ್ನುವ ಲೆಕ್ಕಾಚಾರ ಆರಂಭವಾಗಿದ್ದು, ಒಂದು ವೇಳೆ ಅಭಿಯಾನ ಸಕ್ಸಸ್ ಆದರೆ, ನೂರಾರು ಕೋಟಿ ವ್ಯಾಪಾರಕ್ಕೆ ಕತ್ತು ಬೀಳಲಿದೆ. ಇನ್ನೂ ಈ ಅಭಿಯಾನಕ್ಕೆ ಹಿಂದೂ ಪರ ಸಂಘಟನೆಗಳು ಸಾಥ್ ನೀಡುತ್ತಾರಾ ಕಾದು ನೋಡಬೇಕಾಗಿದೆ.  ಇದನ್ನೂ ಓದಿ: ಪ್ರಧಾನಿ ಮೋದಿಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ






 Advertisement 




Sign in to your account
Username or Email Address


Password

 Remember Me


