`ನಿನ್ನ ಸನಿಹಕೆ’ ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟ ನಟಿ ಧನ್ಯ ರಾಮ್‌ಕುಮಾರ್. ಮೊದಲ ಚಿತ್ರದಲ್ಲೇ ಭರವಸೆಯ ನಟಿಯಾಗಿ ತಾನೆಂತಹ ಕಲಾವಿದೆ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಬಳಿಕ ಧನ್ಯ ರಾಮ್‌ಕುಮಾರ್ ಮುಂದೆ ಅದ್ಯಾವ ಚಿತ್ರದಲ್ಲಿ ಅಭಿನಯಿಸುತ್ತಾರೆ ಎಂಬ ಪ್ರಶ್ನೆಗೆ ಡಾ.ರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.ವಿಕ್ಕಿ ವರುಣ್ ನಿರ್ದೇಶಿಸಿ, ನಟಿಸುತ್ತಿರುವ `ಕಾಲಾಪತ್ಥರ್’ ಚಿತ್ರದಲ್ಲಿ ಧನ್ಯ ರಾಮ್‌ಕುಮಾರ್ ನಾಯಕಿಯಾಗಿ ನಟಿಸಿದ್ದಾರೆ. ವರನಟ ಡಾ.ರಾಜ್‌ಕುಮಾರ್ ಅವರ ಹುಟ್ಟು ಹಬ್ಬದ ಶುಭಸಂದರ್ಭದಲ್ಲಿ ನಟಿ ಧನ್ಯ ಅವರ ಎರಡನೇ ಚಿತ್ರ `ಕಾಲಾಪತ್ಥರ್’ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ.ಶ್ರೀಮತಿ ಗೀತಾ ಶಿವರಾಜ್‌ಕುಮಾರ್ ಅರ್ಪಣೆಯಲ್ಲಿ, ಭುವನ್ ಮೂವೀಸ್ ಪರ್ಪಲ್ ಫೆದರ್ಸ್ ನಿರ್ಮಾಣದಲ್ಲಿ `ಕಾಲಾಪತ್ಥರ್’ ಸಿನಿಮಾ ಮೂಡಿ ಬಂದಿದ್ದು, ಡಾ.ರಾಜ್‌ಕುಮಾರ್ ಹುಟ್ಟುಹಬ್ಬದಂದು ನಾಯಕಿ ಧನ್ಯ ಅವರ ಗಂಗಾ ಪಾತ್ರದ ಲುಕ್ ರಿವೀಲ್ ಮಾಡಿದೆ ಚಿತ್ರತಂಡ. ಹಳ್ಳಿ ಹುಡುಗಿಯ ಗಂಗಾ ಪಾತ್ರದಲ್ಲಿ ಧನ್ಯ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.ಇದೊಂದು ಪಕ್ಕಾ ಕರ್ಮಷಿಯಲ್ ಆಕ್ಷನ್ ಕಂಟೆಂಟ್ ಜತೆ ಮುದ್ದಾದ ಲವ್ ಸ್ಟೋರಿಯಿರೋ `ಕಾಲಾಪತ್ಥರ್’ ಚಿತ್ರದಲ್ಲಿ ಧನ್ಯ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕನ ಬದುಕಿನಲ್ಲಿ ಗಂಗಾ ಪಾತ್ರ ಎನೆಲ್ಲಾ ತಿರುವು ತಂದು ಕೊಡುತ್ತೆ ಜತೆಗೆ ಮಧ್ಯಮ ವರ್ಗದ ಗಟ್ಟಿ ಹೆಣ್ಣು ಮಗಳಾಗಿ ಧನ್ಯ ರಾಮ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಯಾಕಣ್ಣ ನನ್ನೊಬ್ಬಳನ್ನೇ ಬಿಟ್ಟು ಹೋದೆ: ರಾಜ್‌ ನೆನೆದು ತಂಗಿ ಕಣ್ಣೀರು`ಕಾಲಾಪತ್ಥರ್’ ಸಿನಿಮಾದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಇದೇ ಜೂನ್‌ಗೆ ತೆರೆಗೆ ಅಬ್ಬರಿಸಲಿದೆ. ಸತ್ಯಪ್ರಕಾಶ್ ಬರೆದಿರುವ ಗಟ್ಟಿ ಕಥೆಯ ಮೂಲಕ ಕಮಾಲ್ ಮಾಡಲು ವಿಕ್ಕಿ ವರುಣ್ ಮತ್ತು ಸ್ಯಾಂಡಲ್‌ವುಡ್ ಬ್ಯೂಟಿ ಧನ್ಯ ರಾಮ್‌ಕುಮಾರ್ ಬರುತ್ತಿದ್ದಾರೆ. ಈ ಹೊಸ ಜೋಡಿಯ ಕಥೆ ನೋಡಲು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.Sign in to your account
Username or Email Address


Password

 Remember Me


