ಚಿತ್ರರಂಗದಲ್ಲಿ ಇದೀಗ ಒಂದೇ ಸುದ್ದಿ, ಸದ್ದು ಅದೇ ಯಶ್ ನಟನೆಯ `ಕೆಜಿಎಫ್ 2′ ಸಿನಿಮಾ. ದೇಶ್ಯಾದಂತ `ಕೆಜಿಎಫ್ 2′ ಚಿತ್ರ ಕೋಟಿ ಕೋಟಿ ಲೂಟಿ ಮಾಡ್ತಿದೆ. ಯಶ್ ಪಾತ್ರ ಮಾತ್ರವಲ್ಲದೇ ಪ್ರತಿಯೊಬ್ಬರ ಪಾತ್ರಗಳಿಗೂ ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅದರಂತೆಯೇ ಅಧೀರ ಪಾತ್ರ ಕೂಡ ಚಿತ್ರದ ಮತ್ತೊಂದು ಹೈಲೆಟ್ ಆಗಿದ್ದು, ಅಭಿಮಾನಿಗಳ ಪ್ರೀತಿಗೆ ಸಂಜಯ್ ದತ್ ಪೋಸ್ಟ್ ಮೂಲಕ ಥ್ಯಾಂಕ್ಯೂ ಹೇಳಿದ್ದಾರೆ.ಪ್ರಶಾಂತ್ ನೀಲ್ ನಿರ್ದೇಶನದ `ಕೆಜಿಎಫ್ 2’ನಲ್ಲಿ ಅಧೀರ ಪಾತ್ರಕ್ಕೆ ಬಾಲಿವುಡ್ ಸ್ಟಾರ್ ಸಂಜಯ್ ದತ್ ಜೀವ ತುಂಬಿದ್ದಾರೆ. ಚಿತ್ರದ ಪ್ರಮುಖ ಹೈಲೆಟ್‌ಗಳಲ್ಲಿ ಅಧೀರ ಪಾತ್ರ ಕೂಡ ಒಂದಾಗಿದೆ. ಅಭಿಮಾನಿಗಳು ಸಿನಿಮಾ ನೋಡಿ ಅಧೀರನಿಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನಟ ಸಂಜಯ್ ದತ್ ಟ್ವಿಟರ್ ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.ಕೆಲವು ಚಿತ್ರಗಳು ಬೇರೆ ಚಿತ್ರಗಳಿಗಿಂತ ವಿಶೇಷವಾಗಿರುತ್ತದೆ. ಪ್ರತಿ ಬಾರಿ ನನ್ನ ಕಂಫರ್ಟ್ ಜೋನ್‌ನಿಂದ ಹೊರ ತಳ್ಳುವ ಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಇಷ್ಟಪಡುತ್ತೇನೆ. ʻಕೆಜಿಎಫ್ 2ʼ ಚಿತ್ರ ಆ ಸಾಲಿಗೆ ಸೇರುತ್ತದೆ, ಜತೆಗೆ ನನ್ನ ಸಾಮರ್ಥ್ಯದ ಅರಿವು ಮೂಡಿಸಿತ್ತು. ಈ ಚಿತ್ರದ ಕೊನೆಯಲ್ಲಿ ಸಿನಿಮಾನೇ ಎಲ್ಲಾ ಅನ್ನೋದನ್ನ ಅರ್ಥ ಮಾಡಿಸಿತ್ತು. ನನ್ನ ನಿರ್ದೇಶಕ ಪ್ರಶಾಂತ್ ನೀಲ್ ನನ್ನಲ್ಲಿ ಅಧೀರ ಪಾತ್ರವನ್ನ ನೋಡಿದ್ದರು. ಈ ಪಾತ್ರದ ಯಶಸ್ಸು ಪ್ರಶಾಂತ್‌ನೀಲ್ ಅವರಿಗೆ ಸಲ್ಲುತ್ತದೆ. ಅವರ ಕನಸನ್ನ ಪಾತ್ರಗಳ ಮೂಲಕ ತೆರೆಯ ಮೇಲೆ ತೋರಿಸಿದ್ದಾರೆ. ಇದನ್ನೂ ಓದಿ:ಮೇ 27ಕ್ಕೆ ಓಟಿಟಿಯಲ್ಲಿ ಕೆಜಿಎಫ್ 2 ? : ಕಸ್ಟಮರ್ ಪ್ರತಿನಿಧಿಯಿಂದ ದಿನಾಂಕ ಬಯಲು ???????? pic.twitter.com/zoLWmEs7EH— Sanjay Dutt (@duttsanjay) April 23, 2022ಕೆಲವೊಂದು ಪಾತ್ರಗಳು ವಿಶೇಷವಾಗಿರುತ್ತದೆ, ಕೆಲವೊಂದು ಚಿತ್ರಗಳು ಇನ್ನು ಉತ್ತಮವಾಗಿ ಮಾಡಬಹುದು ಎಂದು ತೋರಿಸುತ್ತದೆ ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ನೀವೆಲ್ಲರೂ ನನ್ನ ಶಕ್ತಿ ಎಂದು ಭಾವನಾತ್ಮಕಾವಾಗಿ ಸಂಜಯ್ ದತ್ ಬರೆದುಕೊಂಡಿದ್ದಾರೆ. ಅಧೀರನ ಪೋಸ್ಟ್‌ಗೆ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.Sign in to your account
Username or Email Address


Password

 Remember Me


