ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ನಡುರಸ್ತೆಯಲ್ಲೇ ಬೈಕ್‌ನಲ್ಲಿ ರೈಡ್ ಹೋಗುತ್ತಾ ಸಾರ್ವಜನಿಕವಾಗಿ ಲಿಪ್‌ಲಾಕ್ (ಪರಸ್ಪರ ಚುಂಬನ) ಮಾಡಿದ್ದ ಪ್ರೇಮಿಗಳಿಗೆ ಇದೀಗ ಪೊಲೀಸರು ಶಾಕ್ ಕೊಟ್ಟಿದ್ದಾರೆ.ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ, ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ. ಬೈಕ್ ಸವಾರನ ವಿರುದ್ಧ ಚಾಮರಾಜನಗರ ಸಂಚಾರ ಠಾಣೆಯ ಪೊಲೀಸರು ಸಂಚಾರ ನಿಯಮ ಕಾನೂನು ಉಲ್ಲಂಘನೆ ಅಡಿಯಲ್ಲಿ ಸ್ವಪ್ರೇರಿತ ದೂರು ತಯಾರಿಸಿ ಮೊ.ನಂ: 39/2022 ಕಲಂ 279 IPC ಮತ್ತು 184 IMV ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಬೈಕ್ ಟ್ಯಾಂಕ್ ಮೇಲೆ ಕುಳಿತು ಪ್ರೇಮಿಗಳ ಲಿಪ್‍ಲಾಕ್ – ಲವರ್ಸ್ ಜಾಲಿ ರೈಡ್ ವೀಡಿಯೋ ವೈರಲ್
KA-10-EA-5121 ಪಲ್ಸರ್ ಬೈಕ್‌ನ RC ಮಾಲೀಕನಿಂದ ವಿವರ ಪಡೆದು, ಬೈಕ್ ಸವಾರ ಹೆಚ್.ಡಿ.ಕೋಟೆ ತಾಲೂಕಿನ ಶಿವಪುರ ಗ್ರಾಮದ ನಿವಾಸಿ ಎಸ್.ಸಿಸ್ವಾಮಿ ಅನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.  ಇದನ್ನೂ ಓದಿ : ಅಪ್ಪ ಸರಿ, ಮಕ್ಕಳು ತಪ್ಪು ಸರಕಾರಕ್ಕೆ ಟಾಂಗ್ ಕೊಟ್ಟ ನಟ ಉಪೇಂದ್ರಚಾಮರಾಜನಗರದ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ತಿಮ್ಮರಾಜು, ಪಿಎಸ್‌ಐ ನಂದೀಶ್‌ಕುಮಾರ್ ಅವರ ನೇತೃತ್ವದಲ್ಲಿ ಸಿಬ್ಬಂದಿ ಸಿ.ಚಿಕ್ಕಣ್ಣ, ಬಿ.ಕೆ.ಜಯರಾಮು, ಜಿ.ಬಿ.ಮಹದೇವಸ್ವಾಮಿ, ಟಿ.ಕೆ.ಜಗದೀಶ್, ಪಿ.ನವೀನ್‌ಕುಮಾರ್ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ : CFI, PFI ಸಂಘಟನೆಗಳೇ ಮಕ್ಕಳ ಭವಿಷ್ಯ ಹಾಳಾಗೋದಕ್ಕೆ ಕಾರಣ: ಬಿ.ಸಿ.ನಾಗೇಶ್ಲಿಪ್‌ಲಾಕ್ ಸ್ವಾರಸ್ಯವೇನು?: ಇಂದು ಮಧ್ಯಾಹ್ನ ಚಾಮರಾಜನಗರದ ಗುಂಡ್ಲುಪೇಟೆ ರಸ್ತೆಯಲ್ಲಿ ಪ್ರೇಮಿಗಳಿಬ್ಬರು ನಡುರಸ್ತೆಯಲ್ಲಿ ಬೈಕ್ ಮೇಲೆ ರೈಡ್ ಹೋಗುತ್ತಾ, ಸಾರ್ವಜನಿಕವಾಗಿ ಲಿಪ್‌ಲಾಕ್ ಮಾಡಿದ್ದಾರೆ. ಪಲ್ಸರ್ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಎದುರು-ಬದುರಾಗಿ ಕುಳಿತ ಯುವತಿ ತನ್ನ ಪ್ರಿಯಕರನನ್ನು ಬಿಗಿದಪ್ಪಿಕೊಂಡು ಚುಂಬಿಸಿದ್ದಾಳೆ. ಜನರು, ಬಸ್ಸು, ಲಾರಿಗಳ ಸಂಚಾರದ ಪರಿವೇ ಇಲ್ಲದೇ ಹೆದ್ದಾರಿಯಲ್ಲಿ ಪ್ರೇಮಿಗಳು ಹುಚ್ಚಾಟ ನಡೆಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ಆಕ್ಷೇಪ ವ್ಯಕ್ತವಾಗಿತ್ತು.Sign in to your account
Username or Email Address


Password

 Remember Me


