ಮಡಿಕೇರಿ: ರಾಜ್ಯದಲ್ಲಿ ಸಾಮರಸ್ಯ ಬೇಕು ಅಂದ್ರೆ ಆಜಾನ್ ಸೌಂಡ್ ಕಡಿಮೆ ಮಾಡಿ ಎಂದು ಮಸೀದಿಗಳಿಗೆ ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಎಚ್ಚರಿಕೆ ನೀಡಿದ್ದಾರೆ.ಮಡಿಕೇರಿಯಲ್ಲಿ ಮಾತಾನಾಡಿದ ಅವರು, ಈ ಹಿಂದೆಯೇ ಮಸೀದಿ ಆಗಲಿ, ಮಂದಿರ ಆಗಲಿ ಮೈಕ್ ಬಳಸದಂತೆ ಸುಪ್ರೀಂಕೋರ್ಟ್ ಹೇಳಿದೆ. ಆದರೆ ಇದುವರೆಗೆ ಆ ಕಾನೂನನ್ನು ಯಾರು ಪಾಲನೆ ಮಾಡಿಲ್ಲ. ಈಗ ಅಂತಿಮ ಸಮಯ ಅಂತ ಬಂದಿದೆ .ಹೀಗಾಗಿ ಕಾನೂನು ಮುಂದಿನ ದಿನಗಳಲ್ಲಿ ಅದರ ಕೆಲಸ ಮಾಡುತ್ತದೆ ಎಂದರು.  ಇದನ್ನೂ ಓದಿ: ಧರ್ಮ ಸಂಸತ್‍ನಲ್ಲಿ ದ್ವೇಷ ಭಾಷಣ – ದೆಹಲಿ ಪೊಲೀಸ್ ಸಲ್ಲಿಸಿದ್ದ ಅಫಿಡವಿಟ್‍ಗೆ ಸುಪ್ರೀಂ ಅಸಮಾಧಾನಈಗಾಗಲೇ ಅಜಾನ್ ಶಬ್ಧದಿಂದ ಹಾರ್ಟ್ ಪೇಷೆಂಟ್ಸ್ ಸಾಯುವಂತಾಗಿದೆ. ಬೆಳಗ್ಗೆ ಐದು ಗಂಟೆ ಆಗಿತ್ತೆಂದರೆ ಮತ್ತೆ ಮಲಗುವಂತಿಲ್ಲ ಎನ್ನುವಂತಾಗಿದೆ. ಮಸೀದಿಗಳಲ್ಲಿ ಎಷ್ಟು ಎತ್ತರಲ್ಲಿ ಮೈಕ್ ಕಟ್ಟಬೇಕು ಎಂಬ ಹಠಕ್ಕೆ ಬಿದ್ದು ಕಟ್ಟುತ್ತಿದ್ದಾರೆ. ಈಗಾಲದರೂ ಸಾಮರಸ್ಯ ಬೇಕು ಎನ್ನುವವರು ಮೈಕ್ ಸೌಂಡ್ ಕಡಿಮೆ ಮಾಡಿ ಎಂದು ಶಾಸಕ ಹೇಳಿದ್ದಾರೆ.  Sign in to your account
Username or Email Address


Password

 Remember Me


