`ಕಿಸ್’ ಚಿತ್ರದ ಮೂಲಕ ಬೆಳ್ಳಿತೆರೆಗೆ ಲಗ್ಗೆಯಿಟ್ಟ ಪ್ರತಿಭಾವಂತ ನಟ ವಿರಾಟ್ ಈಗ ಅದ್ದೂರಿ ಲವರ್ ಆಗಿ ಮಿಂಚಲು ರೆಡಿಯಾಗಿದ್ದಾರೆ. ಈ ಚಿತ್ರಕ್ಕಾಗಿ ತೆರೆಮರೆಯಲ್ಲಿ ಭರ್ಜರಿ ಆಗಿ ವರ್ಕೌಟ್ ಮಾಡ್ತಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗ್ತಿದೆ.ನಟ ವಿರಾಟ್ ಕಿರುತೆರೆ ಟು ಹಿರಿತೆರೆಯವರೆಗೂ ಅಪಾರ ಅಭಿಮಾನಿಗಳ ಬಳಗ ಹೊಂದಿರೋ ನಟ, ಎ.ಪಿ ಅರ್ಜುನ್ ನಿರ್ದೇಶನದ `ಕಿಸ್’ ಸಿನಿಮಾದಿಂದ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ನಟ ಈಗ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ಎ.ಪಿ ಅರ್ಜುನ್ ನಿರ್ದೇಶನದ `ಅದ್ದೂರಿ ಲವರ್’ ಚಿತ್ರದಲ್ಲಿ ಅದ್ದೂರಿಯಾಗಿ ಮಿಂಚಲು ಜಿಮ್‌ನಲ್ಲಿ ಬೆವರಿಳಿಸುತ್ತಿದ್ದಾರೆ. ಸದ್ಯ ವಿರಾಟ್ ವರ್ಕೌಟ್ ಮಾಡ್ತಿರೋ ವಿಡಿಯೋ ಸೋಷಿಯಲ್ ಮೀಡಿಯಾ ತುಂಬೆಲ್ಲಾ ವೈರಲ್ ಆಗ್ತಿದೆ. ಇದನ್ನೂ ಓದಿ:ನಿಮ್ಮ ಹೃದಯವೇ ನನ್ನ ಸಾಮ್ರಾಜ್ಯ: ಅಭಿಮಾನಿಗಳಿಗೆ ಸುಂದರ ಕಥೆ ಹೇಳಿದ ರಾಕಿಭಾಯ್  A post shared by Viraat (@viraat_official)`ಅದ್ದೂರಿ ಲವರ್’ ಕನ್ನಡ ಮತ್ತು ತೆಲುಗಿನಲ್ಲಿ ಮೂಡಿ ಬರುತ್ತಿದ್ದು, ವಿರಾಟ್‌ ಡಿಫರೆಂಟ್ ಶೇಡ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಅದಕ್ಕಾಗಿ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಾ 8 ಪ್ಯಾಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.  ನಟ ವಿರಾಟ್ ಜಬರ್‌ದಸ್ತ್ ವರ್ಕೌಟ್‌ಗೆ ಮತ್ತು ಲುಕ್ಕಿಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಪಾತ್ರಕ್ಕಾಗಿ ಜಿಮ್‌ನಲ್ಲಿ ಬೆವರಿಳಿಸುತ್ತಿರೋ ವಿರಾಟ್ ಶ್ರಮಕ್ಕೆ ಅಭಿಮಾನಿಗಳು ಉಘೇ ಉಘೇ ಅಂದಿದ್ದಾರೆ. ಹೀಗೆ ಚಂದನವನದಲ್ಲಿ ಸಿನಿಮಾಗಳ ಮೂಲಕ ಸೌಂಡ್ ಮಾಡಲಿ ಎಂಬುದೇ ಅಭಿಮಾನಿಗಳ ಆಶಯ.Sign in to your account
Username or Email Address


Password

 Remember Me


