ಬೆಂಗಳೂರು:  ತಮ್ಮ ಪತ್ನಿಗೆ ಮೂಡಾದಲ್ಲಿ ನೀಡಿರುವ ನಿವೇಶನ ಕಾನೂನು ಪ್ರಕಾರವೇ ನೀಡಲಾಗಿದೆ. ಬಿಜೆಪಿ ಅವಧಿಯಲ್ಲಿ ಈ ನಿವೇಶನ ಹಂಚಿಕೆ ಆಗಿದೆ ಅಂತ ಸಿಎಂ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.
ತಮ್ಮ ಪತ್ನಿ ಹೆಸರಿಗೆ ಮೂಡಾ ನಿವೇಶನ ಹಂಚಿಕೆ ಆಗಿರೋ ವಿಚಾರ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ. ಬಿಜೆಪಿ ಅವಧಿಯಲ್ಲಿ ಕೊಟ್ಟಿರೋ ನಿವೇಶನ ಇದು. ನನ್ನ ಬಾಮೈದ ತನ್ನ ಜಾಗವನ್ನ ನನ್ನ ಹೆಂಡತಿಗೆ ಅರಿಶಿನ-ಕುಂಕುಮಕ್ಕೆ ಅಂತ ಗಿಫ್ಟ್ ಡೀಡ್ ಮಾಡಿದ್ರು. ಈ ಜಾಗವನ್ನ ಮುಡಾದವರು ಯಾವುದೇ ಮಾಹಿತಿ ಇಲ್ಲದೆ ಅಕ್ವೈರ್ ಮಾಡಿಕೊಂಡು ಸೈಟ್ ಮಾಡಿದ್ರು.ಆಗ ನಮ್ಮ ಜಮೀನಿಗೆ ಪರಿಹಾರ ಕೊಡಿ ಅಂತ ನಾವು ಕೇಳಿದಾಗ ಬದಲಿ ನಿವೇಶನ ಕೊಡೋದಾಗಿ ಹೇಳಿದ್ರು.ಅದರಂತೆ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಆಗಿದೆ. ಇದು ತಪ್ಪಾ?ಅಂತ ಪ್ರಶ್ನೆ ಮಾಡಿದ್ರು.ನಿವೇಶನ ಹಂಚಿಕೆಯಲ್ಲಿ ಯಾವುದೇ ಕಾನೂನು ಉಲ್ಲಂಘನೆ ಆಗಿಲ್ಲ.ಕಾನೂನು ‌ಪ್ರಕಾರವೇ ಇದು ಹಂಚಿಕೆ ಆಗಿದೆ. ನಿವೇಶನ ಹಂಚಿಕೆಯಲ್ಲಿ ಯಾವುದೇ ಅಕ್ರಮ ಆಗಿಲ್ಲ ಅಂತ ತಮ್ಮ ಪತ್ನಿಗೆ ಹಂಚಿಕೆ ಆಗಿರೋ ನಿವೇಶನದ ವಿಷಯವನ್ನು ಸಮರ್ಥನೆಯನ್ನ ಸಿದ್ದರಾಮಯ್ಯ ಮಾಡಿಕೊಂಡ್ರು.ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಪತ್ನಿಗೂ ಮುಡಾದಲ್ಲಿ ಬದಲಿ ನಿವೇಶನ!Sign in to your account
Username or Email Address


Password

 Remember Me


