ಮೈಸೂರು: ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 50:50 ಅನುಪಾತದಲ್ಲಿ ಸೈಟ್ ಹಂಚಿಕೆ ವಿಚಾರದಲ್ಲಿ ಅಕ್ರಮ ನಡೆದಿದೆ ಎಂಬ ವಿಚಾರ ದೊಡ್ಡ ಸದ್ದು ಮಾಡ್ತಿರೋ ಬೆನ್ನಲ್ಲೇ 50:50 ಅನುಪಾತದಲ್ಲೇ ಸಿಎಂ (Siddaramaiah) ಪತ್ನಿಗೂ ಭಾರೀ ಪ್ರಮಾಣದ ಭೂಮಿ ದೊರಕಿರುವ ದಾಖಲೆ ಸಿಕ್ಕಿವೆ.ಸಿಎಂ ಪತ್ನಿ ಪಾರ್ವತಿ (Parvathamma) ಅವರ ಹೆಸರಿನಲ್ಲಿ ಇದ್ದ ಜಾಗವನ್ನು 1997 ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಶಕ್ಕೆ ಪಡೆದು, ಆ ಭೂಮಿಗೆ 2021 ರಲ್ಲಿ ಪರಿಹಾರ ಕೊಟ್ಟಿದೆ. ಸಿಎಂ ಪತ್ನಿಗೆ ನೀಡಿರುವ 50:50 ಅನುಪಾತದ ಪರಿಹಾರದ ಸುತ್ತ ಅನುಮಾದ ಹುತ್ತ ಬೆಳೆದಿದೆ. 1997 ರ ಆಗಸ್ಟ್ 20 ರಂದು ಮೈಸೂರು ತಾಲೂಕು ಕೆಸೆರೆ ಗ್ರಾಮದ ಸರ್ವೆ ನಂ.464 ರಲ್ಲಿ 3.16 ಎಕರೆ ಭೂಮಿ ನೋಟಿಫೈ ಮಾಡಲಾಗಿತ್ತು.ದೇವನೂರು ಮೂರನೇ ಹಂತ ಬಡವಾಣೆ ಅಭಿವೃದ್ದಿಗೆ ಅದಿಸೂಚನೆ ಮಾಡಲಾಗಿದ್ದ ಭೂಮಿ ಇದಾಗಿತ್ತು. ಆ ಕಾಲದಲ್ಲೇ 3,24,700 ರೂ. ವೈಯಕ್ತಿಕ ಅವಾರ್ಡ್ ನೀಡಲಾಗಿತ್ತು. 2014ರ ಜೂನ್ 23ರಲ್ಲಿ ಮುಡಾಗೆ ಬದಲಿ ನಿವೇಶನ ನೀಡುವಂತೆ ಸಿಎಂ ಪತ್ನಿ ಪಾರ್ವತಿ ಪತ್ರ ಬರೆದಿದ್ದರು. ಈ ಸಂಬಂಧ 2017 ಡಿಸೆಂಬರ್ 15 ಹಾಗೂ 2014ರ ಡಿಸೆಂಬರ್ 30 ರಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ಅರ್ಜಿದಾರರ ಭೂಮಿಗೆ ಸಮನಾಗಿ ಅಭಿವೃದ್ಧಿಪಡಿಸದ ಜಮೀನನ್ನ ನೀಡಲು ತೀರ್ಮಾನ ಮಾಡಿದ್ದಾರೆ. ಅದಕ್ಕೂ ಒಪ್ಪದ ಸಿಎಂ ಪತ್ನಿ 2021 ರ ಅಕ್ಟೋಬರ್ 25 ರಲ್ಲಿ ಮುಡಾಗೆ ಮತ್ತೊಂದು ಪತ್ರ ಬರೆದು 50:50 ಅನುಪಾತದಲ್ಲಿ ಬದಲಿ ನಿವೇಶನ ನೀಡುವಂತೆ ಕೋರಿ ಸಿಎಂ ಪತ್ನಿ ಪಾರ್ವತಿ ಪತ್ರ ಬರೆದಿದ್ದರು. ಈ ಕೋರಿಕೆಯಂತೆ 2021ರ ಅಕ್ಟೋಬರ್ 29 ರಂದು 50:50 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ 38,284 ಚದರ ಅಡಿ ಅಳತೆಯ ನಿವೇಶನವನ್ನ ಆಯುಕ್ತರು ನೀಡಿದ್ದರು. ಇದರೊಂದಿಗೆ 1997 ರಲ್ಲಿ ಕಳೆದುಕೊಂಡ ಭೂಮಿಗೆ 2021 ರಲ್ಲಿ ಸಿಎಂ ಪತ್ನಿ ಪರಿಹಾರ ಪಡೆದಿರುವು ದಾಖಲೆ ಬಯಲಾಗಿದೆ.Sign in to your account
Username or Email Address


Password

 Remember Me


