ಬೆಂಗಳೂರು: ರಾಜ್ಯದಲ್ಲಿ ಇಂದು ಒಟ್ಟು 61 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಯಾವುದೇ ಮರಣ ಪ್ರಕರಣ ದಾಖಲಾಗಿಲ್ಲ. ಆದರೆ ಪಾಸಿಟಿವ್ ಪ್ರಕರಣದಲ್ಲಿ ಸಂಖ್ಯೆ ಏರಿಳಿತ ಕಾಣುತ್ತಿದೆ.ಬೆಂಗಳೂರು ನಗರದಲ್ಲಿ ಇಂದು 55 ಪಾಸಿಟಿವ್ ಕೇಸ್ ಪತ್ತೆಯಾಗಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 40,057 ಮರಣ ಪ್ರಕರಣ ಪತ್ತೆಯಾಗಿದೆ. ರಾಜ್ಯದ ಪಾಸಿಟಿವಿಟಿ ರೇಟ್ 0.62% ಮತ್ತು ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,499ಕ್ಕೆ ಏರಿಕೆ ಕಂಡಿದೆ. ಒಟ್ಟು 49 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆಯಲ್ಲಿ ಪೊಲೀಸರ ಹತ್ಯೆಗೆ ಸಂಚು- ಅಟ್ಟಾಡಿಸಿ ಕೊಲ್ಲಲು ಮುಂದಾಗಿದ್ದ ಗಲಭೆಕೋರರುಈವರೆಗೆ ರಾಜ್ಯದಲ್ಲಿ ಒಟ್ಟು 39,46,545 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,04,947 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 62,387 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 9,704 ಸ್ಯಾಂಪಲ್ (ಆರ್​ಟಿಪಿಸಿಆರ್ 7,457 + 2,247 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಮಸೀದಿ ಮೈಕ್ ವಿರುದ್ಧ ಕ್ರಮಕ್ಕೆ ಡೆಡ್‍ಲೈನ್- ರಂಜಾನ್ ಒಳಗೆ ತೆರವಾಗದಿದ್ರೆ ಮಹಾ ಆರತಿ ಎಚ್ಚರಿಕೆಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬೆಂಗಳೂರು ನಗರ 55, ಮೈಸೂರು 3, ಮಂಡ್ಯ, ಉಡುಪಿ ಮತ್ತು ವಿಜಯಪುರದಲ್ಲಿ ತಲಾ 1 ಪಾಸಿಟಿವ್ ಕೇಸ್ ದಾಖಲಾಗಿದೆ.






 Advertisement 




Sign in to your account
Username or Email Address


Password

 Remember Me


