ಕಿರಣ್ ರಾಜ್ ಅಭಿನಯದ ” ಕನ್ನಡತಿ” ಕೂಡ ಒಂದು. ಇಲ್ಲಿ ಅಪಾರ ಮೆಚ್ಚುಗೆ ಪಡೆದಿರುವ ಈ ಧಾರಾವಾಹಿ ಈಗ ಹಿಂದಿಗೆ ಡಬ್ ಆಗಲಿದೆ. “ಅಜ್ನಾಬಿ ಬನೇ ಹಮ್ ಸಫರ್” ಎಂಬ ಹೆಸರಿನಲ್ಲಿ Colors rishtey uk ವಾಹಿನಿಯಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ. ಇದನ್ನೂ ಓದಿ : ಕೆಜಿಎಫ್ 2 : ಕಿಚ್ಚ ಸುದೀಪ್ ಮತ್ತು ಯಶ್ ಮಧ್ಯೆ ತಂದಿಡುತ್ತಿದೆ ವೈರಲ್ ವಿಡಿಯೋಲಾಕ್ ಡೌನ್ ಸಮಯದಲ್ಲಿ ಅಲ್ಲಿನ ಎಷ್ಟೋ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳು ಇಲ್ಲಿ ಡಬ್ ಆಗಿ ಪ್ರಸಾರವಾಗಲು ಆರಂಭವಾದವು. ಆಗ ನಿಜಕ್ಕೂ ಹೀಗೆ ಆದರೆ ಮುಂದೇನು? ಎಂದು ಕೆಲವರಿಗೆ ಅನಿಸಿದು ಸಹಜ. ಈಗ ಇಲ್ಲಿನ ಜನಪ್ರಿಯ ಧಾರಾವಾಹಿ “ಕನ್ನಡತಿ” ಆ ಭಾಷೆಗೆ ಡಬ್ ಆಗಿ ಪ್ರಸಾರವಾಗುತ್ತಿರುವುದು ನಿಜಕ್ಕೂ ಹೆಮ್ಮೆ. ಮರಾಠಿಯಲ್ಲೂ ಕೂಡ ಈ ಧಾರಾವಾಹಿ ರಿಮೇಕ್ ಆಗಿದೆ. ನಟ  ಕಿರಣ್ ರಾಜ್ ಗೆ ಅಪಾರ ಅಭಿಮಾನಿಗಳನ್ನು ತಂದು ಕೊಟ್ಟ ಧಾರಾವಾಹಿ “ಕನ್ನಡತಿ”. ಅದರಲ್ಲೂ‌ ಯುವಪೀಳಿಗೆಯವರಿಗಂತೂ ಕಿರಣ್ ರಾಜ್ ಕಂಡರೆ ಅಪಾರ ಅಭಿಮಾನ. ಅಂತಹ ಮನಮೋಹಕ ನಟ ಕಿರಣ್ ರಾಜ್. ಇವರ ನಟನೆಯ ಧಾರಾವಾಹಿಯೊಂದು ಹಿಂದಿಗೆ ಡಬ್ ಆಗುತ್ತಿರುವುದು ಕಿರಣ್ ರಾಜ್ ಅವರಿಗೂ ಖುಷಿ ತಂದಿದೆಯಂತೆ. ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಹಾರಿದ ಗುಂಡು- ಯುವಕನ ಹೊಟ್ಟೆಗೆ ಗಾಯಹಾಗೆ ನೋಡಿದರೆ ಕಿರಣ್ ರಾಜ್ ಅವರಿಗೆ ಹಿಂದಿ ಕಿರುತೆರೆ ಹೊಸದೇನಲ್ಲ. ಈ ಹಿಂದೆ ಕೂಡ ಹಿಂದಿ ಕಲರ್ಸ್ ವಾಹಿನಿಯ ಸಾಕಷ್ಟು ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಕಿರಣ್ ರಾಜ್ ಅಭಿನಯಿಸಿದ್ದಾರೆ. ಕಿರುತೆರೆಯಷ್ಟೇ ಹಿರಿತೆರೆಯಲ್ಲೂ ಬ್ಯುಸಿಯಾಗಿರುವ ಕಿರಣ್ ರಾಜ್ ಅಭಿನಯದ ಬಹು ನಿರೀಕ್ಷಿತ  ” ಬಡ್ಡೀಸ್” ಚಿತ್ರದ ಟೀಸರ್ ಏಪ್ರಿಲ್ 25 ರಂದು ಬಿಡುಗಡೆಯಾಗಲಿದೆ.Sign in to your account
Username or Email Address


Password

 Remember Me


