– ಸಂಜೆಯೊಳಗೆ ಶರಣಾಗದಿದ್ದರೆ ಮುಂದಿನ ಪರಿಣಾಮಕ್ಕೆ ನೀವೇ ಹೊಣೆಹುಬ್ಬಳ್ಳಿ: ನಾಪತ್ತೆಯಾಗಿರುವ ವಾಸೀಂ ಸೇರಿ 8 ಆರೋಪಿಗಳಿಗೆ ಪೊಲೀಸರು ಡೆಡ್‌ಲೈನ್‌ ನೀಡಿದ್ದಾರೆ. ಇಂದು ಸಂಜೆಯೊಳಗೆ ಶರಣಾಗದಿದ್ದರೆ ಮುಂದಿನ ಪರಿಣಾಮಕ್ಕೆ ನೀವೇ ಹೊಣೆ ಎಂದು ಖಡಕ್‌ ಸಂದೇಶ ರವಾನಿಸಿದ್ದಾರೆ.ಹುಬ್ಬಳ್ಳಿಯಲ್ಲಿ ಶಾಂತಿ ಕದಡಿದ ಆರೋಪಿಗಳ ಪತ್ತೆಗೆ ಪೊಲೀಸರು ಬೆಳಗಾವಿ, ಹಾವೇರಿ, ಹೈದರಾಬಾದ್‌ಗೆ ತೆರಳಿದ್ದಾರೆ. ಗಲಭೆಗೆ 4 ಮಂದಿ ಪ್ರಚೋದನೆ ನೀಡಿದ್ದು ಇವರೇ ಗಲಭೆಗೆ ನೇರ ಕಾರಣ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ.ಹುಬ್ಬಳ್ಳಿ ಗಲಭೆಕೋರರ ಬಂಧನಕ್ಕೆ ಖಾಕಿಪಡೆ ತೀವ್ರಶೋಧಕಾರ್ಯ ನಡೆಸುತ್ತಿದೆ. ದಿನದಿಂದ ದಿನಕ್ಕೆ ಆರೋಪಿಗಳ ಸಂಖ್ಯೆ ಸಹ ಏರಿಕೆಯಾಗುತ್ತಿದೆ. ಇದಕ್ಕೆ ರಾಜಕೀಯ ರೂಪ ಬೆರೆತಿದ್ದು, ಬಂಧಿತರಲ್ಲಿ ಅಮಾಯಕರಿದ್ದಾರೆ ಎಂದು ರಾಜಕೀಯ ನಾಯಕರು ಮತ್ತು ಕುಟುಂಬಸ್ಥರು ಹೇಳುತ್ತಿದ್ದಾರೆ. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಅಮಾಯಕರ ಪತ್ತೆಗೂ ಸಹ ಹಲವಾರು ಮಾರ್ಗಗಳನ್ನು ಪ್ಲಾನ್ ಮಾಡಿದೆ.ಪ್ರಕರಣ ಸಂಬಂಧ ಈವರೆಗೆ 108 ಕಿಡಿಗೇಡಿಗಳನ್ನು ಬಂಧಿಸಲಾಗಿದೆ. 12 ಎಫ್‍ಐಆರ್ ದಾಖಲಾಗಿದೆ. ಇದರಲ್ಲಿ 6 ಮಂದಿ ರೌಡಿಶೀಟರ್‌ಗಳು, 10 ಅಪ್ರಾಪ್ತರು ಸೇರಿದ್ದಾರೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ಹಿನ್ನೆಲೆ ಎಲ್ಲರನ್ನು ಕಲಬುರಗಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲೂ ಪ್ರಾರಂಭವಾಯ್ತು ಬುಲ್ಡೋಜರ್ ಸದ್ದುಬಂಧಿತ ಕುಟುಂಬಸ್ಥರು ತಮ್ಮ ಮನೆಯವರನ್ನು, ಮಕ್ಕಳನ್ನು ಬಿಡುಗಡೆ ಮಾಡುವಂತೆ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ. ಇದಕ್ಕೆ ರಾಜಕೀಯ ನಾಯಕರು ಧ್ವನಿಗೊಡಿಸಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ಭಾಗಿ ಆಗದೇ ವಶದಲ್ಲಿರುವವರ ಬಿಡುಗಡೆಗೆ ಪೊಲೀಸರು ಹೊಸ ಫಾರ್ಮುಲಾ ರಚಿಸಿದ್ದಾರೆ.ಈವರೆಗೆ 108 ಮಂದಿ ಬಂಧಿತರಾಗಿದ್ದು ಅವರಲ್ಲಿ ಅಮಾಯಕರನ್ನು ಬಿಡುಗಡೆ ಮಾಡಲು ಸಿಸಿಟಿವಿ ಮತ್ತು ಮೊಬೈಲ್ ವಿಡಿಯೋ ಮೂಲಕ 4 ಫಾರ್ಮುಲಾವನ್ನು ಪೊಲೀಸರು ಅಳವಡಿಸಿಕೊಂಡಿದ್ದಾರೆ.ಗಲಾಟೆಯ ದಿನ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾದವರು. ಘಟನೆ ನೋಡುತ್ತಾ ನಿಂತವರು, ಪೊಲೀಸರ ಲಾಠಿ ಚಾರ್ಜ್ ವೇಳೆ ಓಡಿಹೋದವರು ಪತ್ತೆಯಾಗಿದ್ದು ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಹೀಗಾಗಿ ಇವರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.ಶನಿವಾರ ರಾತ್ರಿ ಮಸೀದಿಯಿಂದ ನಮಾಜ್‍ಗೆ ಹೋದವರು ಸಹ ಬಂಧನಕ್ಕೊಳಗಾಗಿದ್ದಾರೆ. ಇದರಲ್ಲಿ ನಿಜವಾಗಿಯೂ ಪ್ರಾರ್ಥನೆಗೆ ಬಂದವರು ಯಾರು, ಗಲಾಟೆ ಮಾಡಿ ಮಸೀದಿಯೊಳಗೆ ಪ್ರವೇಶ ಮಾಡಿದವರು ಯಾರು ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.ಘಟನೆ ನೋಡುತ್ತಾ ನಿಂತವರು, ಪ್ರಯಾಣ ಮಾಡುತ್ತಿದ್ದವರು, ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದವರ ಮುಖ ವಿಡಿಯೋದಲ್ಲಿ ಸೆರೆಯಾದ ಹಿನ್ನೆಲೆಯಲ್ಲಿ ಬಂಧನ ಮಾಡಲಾಗಿದೆ. ಇವರನ್ನು ಬಿಡುವ ಸಾಧ್ಯತೆಯಿದೆ. ವೀಡಿಯೋದಲ್ಲಿ ಹಲವು ಮಂದಿ ಪ್ರಚೋದನೆ ನೀಡಿದ್ದಾರೆ. ಪ್ರಚೋದನೆ ನೀಡಿ ಗಲಭೆ ಕಾರಣರಾದ ಮಂದಿಯ ಪತ್ತೆ ಕಾರ್ಯ ಮುಂದುವರಿದಿದೆ.Sign in to your account
Username or Email Address


Password

 Remember Me


