ಪುನೀತ್ ರಾಜ್ ಕುಮಾರ್ ನಿಧನದ ನಂತರ ಬಹುತೇಕ ಕಲಾವಿದರ ಅಭಿಮಾನಿಗಳು ಒಂದಾಗಿ ‘ನಾವು ಫ್ಯಾನ್ಸ್ ವಾರ್ ಮಾಡಲ್ಲ’ ಎಂದು ಘೋಷಣೆ ಮಾಡಿದ್ದರು. ಈ ಕುರಿತು ಎಲ್ಲ ಸ್ಟಾರ್ ನಟರ ಫೋಟೋ ಒಳಗೊಂಡ ಪೋಸ್ಟರ್ ಕೂಡ ರಿಲೀಸ್ ಮಾಡಿದ್ದರು. ಈ ಪೋಸ್ಟರ್ ಹಂಚಿಕೊಂಡು ಇನ್ನೂ ಆರು ತಿಂಗಳು ಕಳೆದಿಲ್ಲ ಆಗಲೇ ಮತ್ತೆ ಫ್ಯಾನ್ಸ್ ವಾರ್ ಶುರು ಮಾಡಿಕೊಂಡಿದ್ದಾರೆ. ಕಾರಣ ಸುದೀಪ್ ಅವರು ಕೆಜಿಎಫ್ 2 ಚಿತ್ರಕ್ಕೆ ಶುಭ ಹಾರೈಸಿಲ್ಲ ಎನ್ನುವುದು. ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಹಾರಿದ ಗುಂಡು- ಯುವಕನ ಹೊಟ್ಟೆಗೆ ಗಾಯಯಶ್ ನಟನೆಯ ಕೆಜಿಎಫ್ 2 ಸಿನಿಮಾ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ದಕ್ಷಿಣದ ಬಹುತೇಕ ತಾರೆಯರು ಮತ್ತು ಬಾಲಿವುಡ್ ಸಿನಿ ರಂಗ ಕೆಲವು ನಟ ನಟಿಯರು ಸಿನಿಮಾದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾದ ಬಗ್ಗೆ ಅಭಿಮಾನದಿಂದ ಬರೆದುಕೊಂಡಿದ್ದಾರೆ. ಆದರೆ, ಕನ್ನಡದ ಕೆಲ  ನಟರು ಕೆಜಿಎಫ್ 2 ಸಿನಿಮಾದ ಬಗ್ಗೆ ಒಂದು ಪೋಸ್ಟ್ ಕೂಡ ಮಾಡಿಲ್ಲ ಎನ್ನುವುದು ಹಲವು ಅಭಿಮಾನಿಗಳ ತಕರಾರು. ಅದಕ್ಕೆ ಗುರಿಯಾಗಿದ್ದು ಕಿಚ್ಚು ಸುದೀಪ್. ಇದನ್ನೂ ಓದಿ: ತಾಯಿಯಾಗುತ್ತಿದ್ದಾರೆ ಚಂದ್ರನ ರಾಣಿ ಶ್ರಿಯಾ ಸರನ್ ನೆನ್ನೆಯಷ್ಟೇ ಸುದೀಪ್ ಅವರು ಎಂದೋ ಆಡಿದ  ಐದತ್ತು ಸೆಕೆಂಡುಗಳು ವಿಡಿಯೋ ಕ್ಲಿಪ್ ಅನ್ನು ಇಟ್ಟುಕೊಂಡು ಕಿಚ್ಚನ ಬಗ್ಗೆ ಸಲ್ಲದ ಕಾಮೆಂಟ್ ಮಾಡಲಾಗುತ್ತಿದೆ. ಅದಕ್ಕೆ ಪ್ರತಿಯಾಗಿ ಸುದೀಪ್ ಅವರ ಅಭಿಮಾನಿಗಳು ಕೂಡ ಕೌಂಟರ್ ಕಾಮೆಂಟ್ ನೀಡುತ್ತಿದ್ದಾರೆ. ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಫ್ಯಾನ್ಸ್ ವಾರ್ ಶುರು ಮಾಡಿದೆ. ಇದನ್ನೂ ಓದಿ: ಮಗಳ ಮದುವೆಯ ಫೋಟೋ ಶೇರ್ ಮಾಡಿ ಭಾವುಕರಾದ ಆಲಿಯಾ ತಾಯಿಸದ್ಯ ಹರಿದಾಡುತ್ತಿರುವ ವಿಡಿಯೋ ಕ್ಲಿಪ್ ನಲ್ಲಿ ಪತ್ರಕರ್ತರೊಬ್ಬರು ‘ಕೆಜಿಎಫ್’ ಬಗ್ಗೆ ಹೇಳಿ ಎಂದು ಕೇಳುತ್ತಾರೆ. ‘ನಾನು ಆ ಸಿನಿಮಾದಲ್ಲಿ ಇಲ್ಲ’ ಎಂದಷ್ಟೇ ಚುಟುಕಾಗಿ ಸುದೀಪ್ ಉತ್ತರ ಕೊಟ್ಟಿದ್ದಾರೆ. ಅದನ್ನೇ ಹಿಡಿದುಕೊಂಡು ಕೆಲವರು ಕಿಚ್ಚನ ತೇಜೋವಧೆ ಮಾಡುತ್ತಿದ್ದಾರೆ. ಅದಕ್ಕೆ ಉತ್ತರವಾಗಿ ಸುದೀಪ್ ಅಭಿಮಾನಿಗಳು ಕೂಡ ಅಷ್ಟೇ ಖಡಕ್ಕಾಗಿಯೇ ಉತ್ತರ ನೀಡಿದ್ದು, ಈ ಹಿಂದೆ ಸುದೀಪ್ ಅವರು ಕೆಜಿಎಫ್ 1 ಸಿನಿಮಾ ರಿಲೀಸ್ ಆದಾಗ ಟ್ವಿಟ್ ಮಾಡಿರುವ ಸ್ಕ್ರೀನ್ ಶಾಟ್ ಹಾಕಿದ್ದಾರೆ ಅಲ್ಲದೇ ಈ ಹಿಂದೆ ಮತ್ತೊಬ್ಬ ಕನ್ನಡದ ಸ್ಟಾರ್ ನಟನ ಚಿತ್ರಕ್ಕೆ ಸುದೀಪ್ ಶುಭ ಹಾರೈಸಿದಾಗ, ಆ ನಟ ನಡೆದುಕೊಂಡ ರೀತಿಯ ಕುರಿತು ಅಭಿಮಾನಿಗಳು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.  ಇದನ್ನೂ ಓದಿ : ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಪುತ್ರನ ಸಾಹಸವಿದುಸುದೀಪ್ ಕೂಡ ಭಾರತೀಯ ಸಿನಿಮಾ ರಂಗದ ನಟ. ಅವರಿಗೂ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಅಲ್ಲದೇ, ಗೌರವ ಇಲ್ಲದೇ ಇರುವ ಕಡೆ ಸುದೀಪ್ ಇರುವುದಿಲ್ಲ. ಅದು ಅವರ ಗುಣ. ಪ್ರೀತಿಯಿಂದಲೇ ಎಲ್ಲರನ್ನೂ ಅವರು ಕಾಣುತ್ತಾರೆ. ಸುಮ್ಮನೆ ಕಲಾವಿದರ ಮಧ್ಯೆ ತಂದಿಡುವ ಕೆಲಸ ನಡೆಯುತ್ತಿದೆ ಎಂದು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ ಡಾ.ವಿಷ್ಣು ಸೇನಾಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್. ಅಲ್ಲದೇ ಅನೇಕರು ಈ ಕುರಿತು ಬೇಸರ ವ್ಯಕ್ತ ಪಡಿಸಿದ್ದಾರೆ. ಫ್ಯಾನ್ಸ್ ನಿಂದಾಗಿ ಕಲಾವಿದರಿಗೆ ಮುಜಗರ ಆಗಬಾರದು ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.Sign in to your account
Username or Email Address


Password

 Remember Me


