ವೇದಾ ಶೂಟಿಂಗ್ ವೇಳೆ ನಟ ಶಿವರಾಜ್ ಕುಮಾರ್ ಜ್ವರದಿಂದ ಬಳಲುತ್ತಿದ್ದು ಮೈಸೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಇದಕ್ಕೆ ಸಂಬಂಧ ಪಟ್ಟಂತೆ ವೇದಾ ಸಿನಿಮಾ ನಿರ್ದೇಶಕ ಹರ್ಷಾ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿ, ‘ನಾನು ಈಗ ತಾನೆ ಶಿವಣ್ಣ ಅವರ ಜತೆ ಮಾತನಾಡಿದ್ದೇನೆ. ಅವರು ಆರೋಗ್ಯವಾಗಿಯೇ ಇದ್ದಾರೆ. ಅವರು ಆಗಾಗ್ಗೆ ಜನರಲ್ ಚೆಕಪ್ ಮಾಡಿಸುತ್ತಾರೆ.  ಈ ಬಾರಿಯೂ ಆಸ್ಪತ್ರೆಗೆ ಹೋಗಿದ್ದು ಜನರಲ್ ಚೆಕಪ್ ಮಾಡಿಸಿಕೊಳ್ಳಲು ಅಷ್ಟೆ. ಉಳಿದಂತೆ ಏನೂ ಇಲ್ಲ’ ಎಂದಿದ್ದಾರೆ. ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಹಾರಿದ ಗುಂಡು- ಯುವಕನ ಹೊಟ್ಟೆಗೆ ಗಾಯಸದ್ಯ ಶಿವರಾಜ್ ಕುಮಾರ್ ಅವರು ತಮ್ಮದೇ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ‘ವೇದಾ’ ಸಿನಿಮಾದ ಶೂಟಿಂಗ್ ಗಾಗಿ ಮೈಸೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಹಲವು ದಿನಗಳಿಂದ ವೇದಾ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲೇ ನಡೆಯುತ್ತಿದೆ. ಇದನ್ನೂ ಓದಿ: ಮಗಳ ಮದುವೆಯ ಫೋಟೋ ಶೇರ್ ಮಾಡಿ ಭಾವುಕರಾದ ಆಲಿಯಾ ತಾಯಿನಿನ್ನೆಯಷ್ಟೇ ಮೈಸೂರಿನ ಶಕ್ತಿಧಾಮಕ್ಕೆ ಕುಟುಂಬ ಸಮೇತ ಹೋಗಿದ್ದ ಶಿವರಾಜ್ ಕುಮಾರ್, ಶಕ್ತಿಧಾಮದ ಬೇಸಿಗೆ ಶಿಬಿರ ಉದ್ಘಾಟಿಸಿದ್ದರು. ಮಕ್ಕಳ ಜೊತೆ ಕೆಲ ಗಂಟೆಗಳು ಕಾಲ ಕಳೆದಿದ್ದರು. ಜೊತೆಗೆ ಪತ್ನಿ ಗೀತಾ ಶಿವರಾಜ್ ಕುಮಾರ್ ಕೂಡ ಇದ್ದರು. ವೇದಾ ಸಿನಿಮಾದ ಶೂಟಿಂಗ್ ಗಾಗಿ ಮೈಸೂರಿನಲ್ಲೇ ಇರುವುದರಿಂದ ಆಗಾಗ್ಗೆ ಅವರು ಶಕ್ತಿಧಾಮಕ್ಕೆ ಹೋಗಿ ಬರುತ್ತಿದ್ದಾರೆ.Sign in to your account
Username or Email Address


Password

 Remember Me


