ಮಾಜಿ ಮಂತ್ರಿ ಜನಾರ್ದನ್ ರೆಡ್ಡಿ ಪಾತ್ರ ಕಿರೀಟಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಇನ್ನಷ್ಟೇ ಅವರ ಚೊಚ್ಚಲು ನಟನೆಯ ಸಿನಿಮಾದ ಶೂಟಿಂಗ್ ಶುರುವಾಗಬೇಕು ಅದಕ್ಕೂ ಮುನ್ನ ಮೊದಲ ಸಿನಿಮಾದ ಇಂಟ್ರೂಡಕ್ಷನ್ ಟೀಸರ್ ರಿಲೀಸ್ ಮಾಡಿದ್ದಾರೆ. ಕಿರೀಟಿ ಸ್ಟಂಟ್ಸ್, ಡ್ಯಾನ್ಸ್, ಆಕ್ಷನ್ ಸೀನ್ಸ್ ಕಂಡು ಚಿತ್ರರಸಿಕರು ಹುಬ್ಬೇರಿಸಿದ್ದರು. ಸ್ವತಃ ಚಿತ್ರಬ್ರಹ್ಮ ರಾಜಮೌಳಿಯೇ ಕಿರೀಟಿ ಆಕ್ಟಿಂಗ್ , ಸ್ಟಂಟ್ಸ್ ಗೆ ಬಹುಪರಾಕ್ ಅಂತಾ ಬೆನ್ನುತಟ್ಟಿದ್ದರು. ಇಷ್ಟೆಲ್ಲಾ ಮೆಚ್ಚುಗೆ ಪಡೆದಿರುವ ಕಿರೀಟಿ ಸಾಹಸದ ಹಿಂದೆ ನೋವು, ಕಷ್ಟದ ಪರಿಶ್ರಮ ಅಡಗಿದೆ. ಇದನ್ನೂ ಓದಿ: ತಾಯಿಯಾಗುತ್ತಿದ್ದಾರೆ ಚಂದ್ರನ ರಾಣಿ ಶ್ರಿಯಾ ಸರನ್ ಜನಾರ್ದನ ರೆಡ್ಡಿ ಸುಪುತ್ರ ಕಿರೀಟಿ ಇಂಟ್ರೂಡಕ್ಷನ್  ಬಿಟಿಎಸ್ ಅಂದ್ರೆ ಟೀಸರ್ ಹಿಂದಿನ ಪರಿಶ್ರಮ ಸಣ್ಣದೊಂದು ಝಲಕ್ ನ್ನು ಚಿತ್ರತಂಡ ರಿಲೀಸ್ ಮಾಡಿದೆ.  ಆ ವಿಡಿಯೋ ತುಣುಕಿನಲ್ಲಿ ಕಿರೀಟಿ ಪರಿಶ್ರಮ ಎದ್ದು ಕಾಣ್ತಿದೆ. ಬಿದ್ದು, ಎದ್ದು, ಪೆಟ್ಟು ಮಾಡಿಕೊಂಡರು ಛಲ ಬಿಡದೇ ಕಿರೀಟಿ ಸ್ಟಂಟ್ಸ್ ಗಳನ್ನು ಅದ್ಭುತವಾಗಿ ಮಾಡಿದ್ದಾರೆ. ಖ್ಯಾತ ಸ್ಟಂಟ್ ಮಾಸ್ಟರ್ ಪೀಟರ್ ಹೇನ್ ಸಾರಥ್ಯದಲ್ಲಿ ಮೂಡಿ ಬಂದಿರುವ ಸ್ಟಂಟ್ಸ್ ಮೈ ಜುಮ್ ಎನಿಸುತ್ತವೆ.  ಇದನ್ನೂ ಓದಿ: ಮಗಳ ಮದುವೆಯ ಫೋಟೋ ಶೇರ್ ಮಾಡಿ ಭಾವುಕರಾದ ಆಲಿಯಾ ತಾಯಿಅಂದಹಾಗೇ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ನಡಿ ಅದ್ಧೂರಿ ಬಜೆಟ್ ನಲ್ಲಿ ತಯಾರಾಗ್ತಿರುವ 15 ಸಿನಿಮಾ ಇದಾಗಿದ್ದು, ಮಯಾಬಜಾರ್ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ಓಂಕಾರ ಹಾಕಿರುವ, ಬಾಹುಬಲಿ ಛಾಯಾಗ್ರಾಹಕ ಕೆಕೆ ಸೆಂಥಿಲ್ ಕುಮಾರ್ ಕ್ಯಾಮೆರಾ ಕೈಚಳಕ ಹಾಗೂ ದೇವಿಶ್ರೀಪ್ರಸಾದ್ ಮ್ಯೂಸಿಕ್ ಪುಳಕ ಹಾಗೂ ರವೀಂದರ್ ಕಲಾ ನಿರ್ದೇಶನ ಕಿರೀಟಿ ಸಿನಿಮಾಗಿದೆ. ಕಿರೀಟಿ ತಂದೆ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಬಣ್ಣ ಹಚ್ಚಿದ್ದು, ಶ್ರೀಲೀಲಾ ನಾಯಕನಾಗಿ ನಟಿಸಿದ್ದು, ಜೆನಿಲಿಯಾ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.Sign in to your account
Username or Email Address


Password

 Remember Me


