ಗುಜರಾತ್ ಜೈಟ್ಸ್ ತಂಡದ ನಾಯಕ, ಟೀಮ್ ಇಂಡಿಯಾ ಆಟಗಾರ ಕೆ.ಎಲ್ ರಾಹುಲ್ ಮತ್ತು ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ ಲವ್ವಿಡ‍ವ್ವಿಗೆ ತೆರೆ ಬೀಳುವ ಸಮಯ ಬಂದಿದೆ. ಮೊನ್ನೆಯಷ್ಟೇ ರಾಹುಲ್ ಜತೆ ಇರುವ ರೋಮ್ಯಾಂಟಿಕ್ ಫೋಟೋ ಶೇರ್ ಮಾಡಿದ್ದ ಅತಿಯಾ ಶೆಟ್ಟಿ, ತಮ್ಮಿಬ್ಬರ ಪ್ರೀತಿಯ ಕುರಿತಾಗಿ ಹಂಚಿಕೊಂಡಿದ್ದರು. ಈ ಮೂಲಕ ರಾಹುಲ್ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆಯನ್ನು ನೀಡಿದ್ದರು. ಇದನ್ನೂ ಓದಿ : ಕೆಜಿಎಫ್ 2 : ಕಿಚ್ಚ ಸುದೀಪ್ ಮತ್ತು ಯಶ್ ಮಧ್ಯೆ ತಂದಿಡುತ್ತಿದೆ ವೈರಲ್ ವಿಡಿಯೋಅಲ್ಲದೇ, ಈ ಹಿಂದೆಯೂ ರಾಹುಲ್ ಜತೆ ಅತಿಯಾ ಓಡಾಡುವ ದೃಶ್ಯಗಳು ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದ್ದವು. ತಡರಾತ್ರಿ ಈ ಜೋಡಿಗಳು ಕಾಣಿಸಿಕೊಂಡು ಕ್ಯಾಮೆರಾಗಳಿಗೆ ಆಹಾರವಾಗಿದ್ದರು. ಇದೀಗ ಈ ಜೋಡಿ ಮದುವೆ ಆಗುವ ಸುದ್ದಿ ಬಿಟೌನ್ ನಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಹಾರಿದ ಗುಂಡು- ಯುವಕನ ಹೊಟ್ಟೆಗೆ ಗಾಯಕ್ರಿಕೆಟಿಗೆ ರಾಹುಲ್ ಜತೆ ಮಗಳ ಮದುವೆಗೆ ಸುನಿಲ್ ಶೆಟ್ಟಿ ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ. ಅಂದುಕೊಂಡಂತೆ ಆದರೆ, ಇದೇ ವರ್ಷದ ಕೊನೆಯಲ್ಲಿ ರಾಹುಲ್ ಮತ್ತು ಅತಿಯಾ ಹಸೆಮಣೆ ಏರಲಿದ್ದಾರೆ. ಇದನ್ನೂ ಓದಿ: ಮಗಳ ಮದುವೆಯ ಫೋಟೋ ಶೇರ್ ಮಾಡಿ ಭಾವುಕರಾದ ಆಲಿಯಾ ತಾಯಿಮೊದ ಮೊದಲ ರಾಹುಲ್ ಮತ್ತು ಅತಿಯಾ ಸ್ನೇಹಿತರು ಎಂದು ಬಿಂಬಿಸಲಾಯಿತು. ರಾಹುಲ್ ಕ್ರಿಕೆಟ್ ಪಂದ್ಯ ಆಡುವಾಗೆಲ್ಲ ಅತಿಯಾ ಕ್ರೀಡಾಂಗಣದಲ್ಲಿ ಹಾಜರಿರುತ್ತಿದ್ದರು. ಅವರನ್ನು ಹುರುದುಂಬಿಸುತ್ತಿದ್ದರು. ಸ್ನೇಹಿತನನ್ನು ಹುರಿದುಂಬಿಸಲು ಅತಿಯಾ ಬರುತ್ತಿದ್ದಾರೆ ಎಂದೇ ಹೇಳಲಾಯಿತು. ಈ ಜೋಡಿ ತಡರಾತ್ರಿಯ ಪಾರ್ಟಿಗಳಲ್ಲಿ ಸಿಗುತ್ತಿದ್ದಂತೆಯೇ ಇಬ್ಬರ ಮಧ್ಯೆ ಏನೋ ನಡೆಯುತ್ತಿದೆ ಎಂದು ಬಿಟೌನ್ ಮಾತಾಡಿಕೊಂಡಿತು. ಆನಂತರ  ತಾವಿಬ್ಬರೂ ಪ್ರೀತಿಸುವ ವಿಷಯವನ್ನು ಬೇರೆ ಬೇರೆ ರೀತಿಯಲ್ಲಿ ಇಬ್ಬರೂ ಹೇಳಿಕೊಂಡರು. ಇದೀಗ ಈ ಪ್ರೇಮಿಗಳು ಹೊಸ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ.Sign in to your account
Username or Email Address


Password

 Remember Me


