ಕಲಬುರಗಿ: ಹಳೆ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳನ್ನು ಪೊಲೀಸ್ ಬಂದೋಬಸ್ತ್‍ನಲ್ಲಿ ಹುಬ್ಬಳ್ಳಿಯಿಂದ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ.ಗಲಭೆಯಲ್ಲಿ ಭಾಗಿಯಾದ 103 ಜನ ಆರೋಪಿಗಳನ್ನು ಮುಂಜಾಗೃತಾ ಕ್ರಮವಾಗಿ ಹುಬ್ಬಳ್ಳಿಯಿಂದ ಕಲಬುರಗಿಗೆ ಕರೆತರಲಾಗಿದೆ. ಹುಬ್ಬಳ್ಳಿಯಿಂದ ನಾಲ್ಕು ಪೋಲಿಸ್ ವಾಹನಗಳಲ್ಲಿ ಕಲಬುರಗಿಗೆ ಕರೆತರಲಾಗಿದೆ. ಕಾರಾಗೃಹದ ಬಳಿ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಒಳ ಬಿಡಲಾಗಿದೆ. ಕೇಂದ್ರ ಕಾರಾಗೃಹ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.ಹುಬ್ಬಳಿಯಲ್ಲಿ ದೇವಸ್ಥಾನ, ಮನೆ ಹಾಗೂ ಪೋಸ್ಟ್ ಆಫೀಸ್, ಪೊಲೀಸ್ ಸ್ಟೇಷನ್ ಮೇಲೆ ಕಲ್ಲು ತೂರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಆರೋಪಿಗಳು ಇವರಾಗಿದ್ದಾರೆ.Sign in to your account
Username or Email Address


Password

 Remember Me


