ಹುಬ್ಬಳ್ಳಿ: ಇಲ್ಲಿನ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಮಾಜ ಘಾತುಕ ಕೆಲಸ ಮಾಡಿಲ್ಲ. ಹಿಂದೂ, ಮುಸ್ಲಿಮರಲ್ಲಿ ವಿಷಬೀಜ ಬಿತ್ತುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಅಲ್ತಾಫ್ ಹಳ್ಳೂರು ತಿಳಿಸಿದರು.ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಮೇಲೆ ನಮಗೆ ಬಹಳ ಗೌರವ ಇದೆ. ಅವರು ಹಿರಿಯ ನಾಯಕರು, ಅವರ ಮೇಲೆ ಎಲ್ಲಾ ಪಕ್ಷದವರಿಗೆ ಗೌರವ ಇದೆ. ಅವರ ಬೆಂಬಲಿಗರು ಹುಬ್ಬಳ್ಳಿಯಲ್ಲಿ ಬಹಳ ಇದ್ದಾರೆ. ಅವರನ್ನು ನನ್ನ ಬಗ್ಗೆ ಕೇಳಬೇಕಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.ಬಿಎಸ್‍ವೈ ಮುಸ್ಲಿಮರ ಬಗ್ಗೆ ಕೂಡಾ ಒಳ್ಳೆಯ ಮಾತನ್ನು ಮಾತನಾಡಿದ್ದರು. ಯಾರೂ ಮುಸ್ಲಿಮರ ಬಗ್ಗೆ ಮಾತನಾಡಬಾರದು ಎಂದಿದ್ದರು. ಅವರು ಈ ರೀತಿ ಹೇಳಿಕೆ ನೀಡಿದ್ದು ದುಃಖ ತಂದಿದೆ. ಈ ನಗರ ಶಾಂತಿ ಇರಬೇಕು ಎಂಬುದು ಕೂಡಾ ಇದೆ. ಪೊಲೀಸರ ತನಿಖೆಯಿಂದ ಎಲ್ಲಾ ಹೊರಬರಲಿದೆ ಎಂದರು. ಇದನ್ನೂ ಓದಿ: ದಿವ್ಯ ಹಾಗರಗಿಗು ಬಿಜೆಪಿಗೂ ಸಂಬಂಧ ಇಲ್ಲ: ಆರ್. ಅಶೋಕ್ನಾನು ಸಮಾಜ ಘಾತುಕ ಕೆಲಸ ಮಾಡಲ್ಲ. ಈ ನಗರ ಶಾಂತಿ ಇರಬೇಕು ಎಂಬುದು ಕೂಡಾ ನನಗೆ ಇದೆ. ನಾನು ಕೂಡಾ ಗಲಾಟೆ ದಿನ ಸಾಕಷ್ಟು ಪ್ರಯತ್ನ ಮಾಡಿ ಜನರನ್ನು ವಾಪಸ್ ಕಳಿಸುವ ಪ್ರಯತ್ನ ಮಾಡಿದ್ದೇನೆ. ಆದರೆ ಹೊಸ ಮುಖ ಹಾಗೂ ಹೊಸಜನ ಅಲ್ಲಿ ಬಂದಿದ್ದರು ಎಂದು ಹೇಳಿದರು. ಇದನ್ನೂ ಓದಿ: ಹುಬ್ಬಳ್ಳಿ ಗಲಾಟೆಗೆ ಕಾಂಗ್ರೆಸ್‍ನವರೇ ಕಾರಣ: ಬಿಎಸ್‍ವೈSign in to your account
Username or Email Address


Password

 Remember Me


