ಬೆಳಗಾವಿ: ಎರಡು ತಿಂಗಳ ಹಿಂದೆ ಅತ್ಯಾಚಾರ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಖಾನಾಪೂರ ಪೊಲೀಸರು ಜಾಂಬೋಟಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಖಾನಾಪೂರ ತಾಲೂಕಿನ ಸಂಗರಗಾಳಿ ಗ್ರಾಮದ ನಿವಾಸಿ ಆಸ್ಟಿನ್ ಡುಮಿಂಗ್ ಮಸ್ಕರೇನ್ ಬಂಧಿತ. ಕಳೆದ ಎರಡು ತಿಂಗಳ ಹಿಂದೆ ಆಸ್ಟಿನ್ ವಿರುದ್ಧ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ವರದಿಯಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಆಸ್ಟಿನ್ ಪರಾರಿಯಾಗಿದ್ದನು. ಆತನ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು ಹರಸಾಹಸಪಟ್ಟಿದ್ದರು. ಇದನ್ನೂ ಓದಿ: ಸಿನಿಮೀಯ ರೀತಿ ದರೋಡೆಕೋರನನ್ನೇ ಹಿಡಿದ ಮನೆಯವರುಜಾಂಬೋಟಿ ಗ್ರಾಮದಲ್ಲಿರುವ ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ಸುರೇಶ್ ನೇತೃತ್ವದಲ್ಲಿ ಖಾನಾಪುರ ಠಾಣೆಯ ಸಿಬ್ಬಂದಿ ಎಸ್.ಎಸ್.ತುರಮುಂದಿ, ಎಸ್.ಎಂ.ಸಾತಪ್ಪ ಅವರ, ಪ್ರಕಾಶ್ ಗಾಡಿವಡ್ಡರ ಮತ್ತು ಮಂಜುನಾಥ್ ಮುಸಳಿ ಅವರಿದ್ದ ಪೊಲೀಸರ ತಂಡ ಆಸ್ಟಿನ್‍ನನ್ನು ಬಂಧಿಸಿದ್ದು, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಆಸ್ಟಿನ್ ವಿರುದ್ಧ ಅತ್ಯಾಚಾರದ ಜೊತೆಗೆ ಒಂದು ಕೊಲೆ ಹಾಗೂ ಅಕ್ರಮ ಗಾಂಜಾ ಸಾಗಾಟ ಪ್ರಕರಣವೂ ದಾಖಲಾಗಿದ್ದರಿಂದ ನ್ಯಾಯಾಧೀಶರು ಆತನಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ಮೂರೂ ಪ್ರಕರಣಗಳ ವಿಚಾರಣೆ ಮುಂದುವರೆದಿದೆ. ಇದನ್ನೂ ಓದಿ: PSI ನೇಮಕಾತಿ ಅಕ್ರಮ – ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ ಮನೆಗೆ ಸಿಐಡಿ ದಾಳಿSign in to your account
Username or Email Address


Password

 Remember Me


