ಬಾಲಿವುಡ್ ನಟ ಸಂಜಯ್ ದತ್ `ಕೆಜಿಎಫ್ 2′ ಚಿತ್ರದ ಅಧೀರನಾಗಿ ಚಿತ್ರರಂಗದಲ್ಲಿ ಮತ್ತಷ್ಟು ಸೌಂಡ್‌ ಮಾಡ್ತಿದ್ದಾರೆ. ರಾಕಿಭಾಯ್ ಮುಂದೆ ಅಧೀರನಾಗಿ ಮಿಂಚ್ತಿದ್ದಾರೆ. ಅಭಿಮಾನಿಗಳು ಅಧೀರನ ಆರ್ಭಟ ನೋಡಿ ಅಪ್ಪಿ ಒಪ್ಪಿಕೊಂಡಿದ್ದಾರೆ. ಇದರ ಮಧ್ಯೆ ತಮ್ಮ ಕರಾಳ ದಿನಗಳ ಕುರಿತು ಸಂಜಯ್ ಮೆಲುಕು ಹಾಕಿದ್ದಾರೆ. ತನಗೆ ಕ್ಯಾನ್ಸರ್‌ ಇದೆ ಎಂದು ತಿಳಿದಾಗ ಗಂಟೆಗಟ್ಟಲೆ ಅತ್ತಿದ್ರಂತೆ ನಟ ಸಂಜಯ್ ದತ್.`ಕೆಜಿಎಫ್ 2′ ಖ್ಯಾತಿಯ ಸಂಜಯ್ ದತ್‌ಗೆ ಕ್ಯಾನ್ಸರ್‌ ಇದೆ ಎಂದು ತಿಳಿದಾಗ ಗಂಟೆಗಟ್ಟಲೇ ಅತ್ತಿದ್ರಂತೆ. ಆಗಸ್ಟ್ 2020 ಲಾಕ್‌ಡೌನ್ ವೇಳೆಯಲ್ಲಿ 4ನೇ ಹಂತದ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರಂತೆ. ತಮ್ಮ ಕುಟುಂಬದ ಪರಿಸ್ಥಿತಿ ನೋಡಿ ಗಂಟೆಗಟ್ಟಲೆ ಕಣ್ಣೀರು ಹಾಕಿದ್ರಂತೆ. ತನ್ನ ಕ್ಯಾನ್ಸರ್‌ ಸಮಸ್ಯೆಯನ್ನ ಚಾಲೆಂಜ್‌ ಆಗಿ ತೆಗೆದುಕೊಂಡು ತಾನು ಹೇಗೆ ಕ್ಯಾನ್ಸರ್‌ ಗೆದ್ದು ಬಂದೆ ಅಂತಾ ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಲ್ಲಿ ಲವ್ಲಿಸ್ಟಾರ್ ಪ್ರೇಮ್ ಕಳಕಳಿಯ ಮನವಿಸಂಜಯ್‌ ದತ್ ದುಬೈನಲ್ಲಿ ಕೀಮೋಥೆರಪಿ ಚಿಕಿತ್ಸೆ ಪಡೆದುಕೊಂಡಿದ್ದು,‌ ಪ್ರತಿದಿನ ಸತತ ಎರಡು ಗಂಟೆಗಳ ಕಾಲ ಬ್ಯಾಡ್ಮಿಂಟನ್ ಆಡುವುದು, ಒಂದು ಗಂಟೆಗಳ ಕಾಲ ಸೈಕ್ಲಿಂಗ್ ಮಾಡಿದರಿಂದ ಕ್ಯಾನ್ಸರ್ ಮುಕ್ತರಾಗಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲಿ ಗಟ್ಟಿಯಾಗಿ ನಿಂತು ಕ್ಯಾನ್ಸರ್‌ ಎದುರಿಸಿದರು. ಬಳಿಕ ಸಂಜಯ್ ದತ್ ಅವರ ಮಕ್ಕಳ ಹುಟ್ಟುಹಬ್ಬದ ದಿನದೆಂದೇ ಕ್ಯಾನ್ಸರ್‌ನಿಂದ ಗುಣಮುಖರಾಗಿದ್ದರ ಕುರಿತು ವೈದ್ಯರಿಂದ ಗುಡ್ ನ್ಯೂಸ್ ಸಿಕ್ಕಿತ್ತು. ಹೀಗೆ ಕ್ಯಾನ್ಸರ್‌ನಿಂದ ಬಳಲಿದ ಕಷ್ಟದ ದಿನವನ್ನು ಸಂಜಯ್ ದತ್ ಹೇಗೆ ಎದುರಿಸಿದರು ಅಂತಾ ಮೆಲಕು ಹಾಕಿದ್ದಾರೆ.Sign in to your account
Username or Email Address


Password

 Remember Me


