– ಯಾವುದೇ ಕ್ಷಣದಲ್ಲಿ ಇಡಿ ದಾಳಿ ಸಾಧ್ಯತೆನವದೆಹಲಿ: ಮುಡಾ ಹಗರಣ (MUDA Scam Case) ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಜಾರಿ ನಿರ್ದೇಶನಾಲಯ ಇಸಿಐಆರ್‌ ದಾಖಲಿಸಿದೆ.ಲೋಕಾಯುಕ್ತ ಎಫ್‌ಐಆರ್‌ನಲ್ಲಿ ಉಲ್ಲೇಖವಾದ ಹೆಸರುಗಳ ಮೇಲೆ ಇ.ಡಿ (Enforcement Directorate) ಇಸಿಐಆರ್ ದಾಖಲಿಸಿದೆ. ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಮತ್ತು ದೇವರಾಜು ಅವರ ಹೆಸರುಗಳ ಉಲ್ಲೇಖವಾಗಿದೆ. ಇದನ್ನೂ ಓದಿ: MUDA Case: ಸಿಎಂಗೆ ಮತ್ತೊಂದು ಸಂಕಷ್ಟ – ಸಿದ್ದರಾಮಯ್ಯ ವಿರುದ್ಧ ED ಎಫ್‌ಐಆರ್‌ ಸಾಧ್ಯತೆನಾಲ್ವರನ್ನು ಆರೋಪಿಗಳನ್ನಾಗಿಸಿ ಜಾರಿ ನಿರ್ದೇಶನಾಲಯ ಇಸಿಐಆರ್ ದಾಖಲು ಮಾಡಿದೆ. ಹೀಗಾಗಿ ನಾಲ್ವರ ವಿಚಾರಣೆಗೆ ಸಮನ್ಸ್ ನೀಡಲಿದೆ.ಯಾವುದೇ ಸಂದರ್ಭದಲ್ಲಿ ಇಡಿಯಿಂದ ದಾಳಿಯಾಗುವ ಸಾಧ್ಯತೆ ಇದೆ. ದಾಖಲೆಗಳ ಪರಿಶೀಲನೆಗೆ ದಾಳಿ ಮಾಡಬಹುದು. ಪ್ರಕರಣದ ಪ್ರಮುಖ ಕೇಂದ್ರವಾಗಿರುವ ಮುಡಾ ಕಚೇರಿ ಹಾಗೂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಸಂಬಂಧಿಸಿದ ನಿವಾಸದ ಮೇಲೆ ಸಾಧ್ಯತೆಯಿದೆ. ಇದನ್ನೂ ಓದಿ: ಸಿಎಂ ಮುಡಾ ಸಂಕಷ್ಟದಿಂದ ಪಾರಾಗಲಿ ಎಂದು ದರ್ಗಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರಾರ್ಥನೆSign in to your account
Username or Email Address


Password

 Remember Me


