ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಚಿತ್ರರಂಗದ ಆಸ್ತಿ. ಅಪ್ಪು ನಿಧನದಿಂದ ಇಡೀ ಚಿತ್ರರಂಗವೇ ತತ್ತರಿಸಿದೆ. ಇನ್ನು ಪುನೀತ್‌ ಅಗಲಿಕೆಯ ನೋವಿನಿಂದ ಚಿತ್ರರಂಗದ ಸ್ನೇಹಿತರು, ಕುಟುಂಬಸ್ಥರು, ನೋವಿನಲ್ಲಿದ್ದಾರೆ. ಈ ವೇಳೆ ನೆನಪಿರಲಿ ಪ್ರೇಮ್ ತಮ್ಮ ಹುಟ್ಟುಹಬ್ಬದ ವಿಚಾರವಾಗಿ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ವ್ಯಕ್ತಿತ್ವದಿಂದ, ಅಮೋಘ ನಟನೆಯಿಂದ ಮನೆಮಾತಾಗಿರೋ ನಟ ಪ್ರೇಮ್‌ಗೆ ಏಪ್ರಿಲ್ 18ರಂದು ಹುಟ್ಟುಹಬ್ಬದ ಸಂಭ್ರಮ. ಇದೀಗ ಒಂದು ದಿನ ಮುಂಚಿತವಾಗಿ ಅಭಿಮಾನಿಗಳಿಗೆ ಮನವಿ ಪತ್ರವೊಂದನ್ನು ತಮ್ಮ ಇನ್ಸ್ಟಾಗಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅಪ್ಪು ಅಗಲಿಕೆಯ ಹಿನ್ನಲೆ ಹುಟ್ಟು ಹಬ್ಬದ ಸೆಲೆಬ್ರೇಶನ್ ಬೇಡ ಅಂತಾ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.  A post shared by Prem Nenapirali (@premnenapirali)ಪ್ರತಿ ವರ್ಷ ನನ್ನ ಹುಟ್ಟು ಹಬ್ಬವನ್ನು ನಿಮ್ಮದೇ ಎಂಬಂತೆ ಸಂಭ್ರಮಿಸುತ್ತಿದ್ದಿರಿ. ನಮ್ಮೆಲ್ಲರ ಪ್ರೀತಿಯ ಅಪ್ಪು ಸರ್, ಹಾಗೂ ನನ್ನ ಜೀವದ ಗೆಳೆಯ ಸುನೀಲ್ ದೂರವಾಗಿದ್ದಾರೆ, ಆದ ಕಾರಣ ಈ ವರ್ಷ ಬರ್ತಡೇ ಸೆಲೆಬ್ರೇಶನ್ ಬೇಡ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಲು ದೇವಸ್ಥಾನಕ್ಕೆ ಹೋಗುತ್ತಿರುವ ಕಾರಣ ಮನೆಯಲ್ಲಿ ಇರುವುದಿಲ್ಲ. ಆದರೆ ನಿಮ್ಮ ಫೋನ್ ಕರೆಗಳಿಗೆ ಕಾಯುತ್ತಿರುತ್ತೇನೆ ಎಂದು ಇನ್ಸ್ಟಾಗಾಂ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ:`ಕೆಜಿಎಫ್ 2′ ಸಕ್ಸಸ್ ಅಲೆಗೆ ಬೆದರಿದ ಬಾಲಿವುಡ್: ಚಿತ್ರರಂಗಕ್ಕೆ ಮತ್ತೆ ಶಕ್ತಿ ತುಂಬಲು ಶಾರುಖ್ ಖಾನ್ ಪ್ಲ್ಯಾನ್‌ನಟ ಪ್ರೇಮ್ ಮತ್ತು ಅಪ್ಪು ಮಧ್ಯೆ ಒಳ್ಳೆಯ ಬಾಂಧವ್ಯವಿತ್ತು. ಅಪ್ಪು ಮತ್ತು ಪ್ರಾಣ ಸ್ನೇಹಿತ ಸುನೀಲ್ ಅಗಲಿಕೆಯ ನೋವಿನಿಂದ ಹೊರಬರಲಾಗುತ್ತಿಲ್ಲ. ಇಡೀ ಚಿತ್ರರಂಗವೇ ಅಪ್ಪು ನಿಧನದ ನೋವಿನಲ್ಲಿರಬೇಕಾದರೆ ನೆನಪಿರಲಿ ಪ್ರೇಮ್ ಸೆಲೆಬ್ರೇಶನ್ ಬೇಡ ಅಂತಾ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ನೀವು ಎಲ್ಲಿದ್ದಿರೋ ಅಲ್ಲಿಂದಲೇ ಶುಭ ಹಾರೈಸಿ ಎಂದು ಕೇಳಿಕೊಂಡಿದ್ದಾರೆ.Sign in to your account
Username or Email Address


Password

 Remember Me


