ಕೆಲವು ದಿನಗಳ ಹಿಂದೆಯಷ್ಟೇ ಉತ್ಸುಕರಾಗಿದ್ದ ವಿವಾದಿತ ತಾರೆ ರಾಕಿ ಸಾವಂತ್, ತಾವು ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಯಲ್ಲಿ ಅವರ ಶೂಗಳನ್ನು ಬಚ್ಚಿಟ್ಟು ಒಂದು ಕೋಟಿ ರೂಪಾಯಿ ಕೇಳುತ್ತೇನೆ ಎಂದು ಹೇಳಿದ ವಿಡಿಯೋವನ್ನು ರಿಲೀಸ್ ಮಾಡಿದ್ದರು. ವಧು ವರರ ಶೂ ಮತ್ತು ಚಪ್ಪಲಿಗಳನ್ನು ಬಚ್ಚಿಟ್ಟು ಅವರಿಂದ ಹಣ ಪಡೆಯುವ ಸಂಪ್ರದಾಯವು ಹಲವು ಮದುವೆಗಳಲ್ಲಿದೆ. ಹಾಗಾಗಿ ರಣಬೀರ್ ಶೂ ಮರೆಮಾಚಿ, ಒಂದು ಕೋಟಿ ಹಣಕ್ಕೆ ಬೇಡಿಕೆ ಇಡುವುದಾಗಿ ಅವರು ಹೇಳಿದ್ದರು. ಆದರೆ, ರಾಕಿಗೆ ಮದುವೆಯ ಆಹ್ವಾನವೇ ಹೋಗಿಲ್ಲ. ಇದನ್ನೂ ಓದಿ : ಪೂಜಾ ಹೆಗ್ಡೆ 1 ಕೋಟಿ ಸಂಭಾವನೆ ಪಡೆದ ಹಾಡಿನಲ್ಲಿ ಏನಿದೆ?: ಫನ್ ಅಂಡ್ ಫ್ರಸ್ಟ್ರೇಷನ್ರಣಬೀರ್ ಮತ್ತು ಆಲಿಯಾ ಜೋಡಿ ಕೆಲವೇ ಕೆಲವು ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಿದ್ದರು. ಹೆಸರಾಂತ ನಟ ನಟಿಯರಿಗೂ ಆ ಮದುವೆಗೆ ಆಹ್ವಾನವಿರಲಿಲ್ಲ. ಇಂತಹ ಸನ್ನಿವೇಶದಲ್ಲಿ ತನ್ನನ್ನು ಆ ಸ್ಟಾರ್ ಜೋಡಿ ಮದುವೆಗೆ ಕರೆಯುತ್ತಾರೆ ಎಂದು ರಾಕಿ ಹೇಗೆ ಅಂದುಕೊಂಡಿದ್ದರೋ ಗೊತ್ತಿಲ್ಲ. ಮದುವೆಗೆ ಎರಡು ದಿನ ಮುಂಚಿತವಾಗಿಯೇ ವಿಡಿಯೋವೊಂದನ್ನು ಹಾಕಿದ್ದರು. ಜತೆಗೆ ಡಿಡಿಎಲ್‍ಜಿ ಸಿನಿಮಾದ ‘ಮೆಹಂದಿ ಲಗಾ ಕೇ ರಖ್ನಾ, ಡೋಲಿ ಸಜಾ ಕೇ ರಖ್ನಾ..’ ಹಾಡನ್ನು ಹೇಳಿದ್ದರು. ಇದನ್ನೂ ಓದಿ : ಕೆಜಿಎಫ್-2 : ಎರಡನೇ ದಿನಕ್ಕೆ 240 ಕೋಟಿ ಬಾಚಿದ ರಾಕಿ ಭಾಯ್ : ಗ್ರೌಂಡ್ ರಿಪೋರ್ಟ್ಎರಡು ದಿನಗಳ ಹಿಂದೆಯೇ ಈ ಸ್ಟಾರ್ ಜೋಡಿ ಹಸೆಮಣೆ ಏರಿದೆ. ಸದ್ಯಕ್ಕೆ ಆರತಕ್ಷತೆ ಕಾರ್ಯಕ್ರಮವನ್ನೂ ಆಯೋಜನೆ ಮಾಡುವುದಿಲ್ಲ ಎಂದು ಕಪೂರ್ ಕುಟುಂಬ ಹೇಳಿಕೊಂಡಿದೆ. ಅಲ್ಲದೇ, ಆಲಿಯಾ ಮತ್ತು ರಣಬೀರ್ ಬೇರೆ ಬೇರೆ ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿ ಆಗಿರುವುದರಿಂದ ಹನಿಮೂನ್ ಕೂಡ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಬಿಟೌನ್ ನಲ್ಲಿ ಹರಿದಾಡುತ್ತಿದೆ.Sign in to your account
Username or Email Address


Password

 Remember Me


