ಡಾ.ರಾಜ್ ಕುಮಾರ್ ನಟನೆಯ ‘ದೂರದ ಬೆಟ್ಟ’ ಕನ್ನಡದ ಕ್ಲಾಸಿಕ್ ಸಿನಿಮಾಗಳಲ್ಲಿ ಒಂದು. ಡಾ.ರಾಜ್ ಮತ್ತು ಭಾರತಿ ಅವರನ್ನು ಈ ಸಿನಿಮಾದಲ್ಲಿ ನೋಡುವುದೇ ಚಂದ. ಸಿದ್ಧಲಿಂಗಯ್ಯ ಅವರ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾ 1973ರಲ್ಲಿ ಬಿಡುಗಡೆ ಆಯಿತು. ಹತ್ತು ಹಲವು ಕಾರಣಗಳಿಂದಾಗಿ ಈ ಸಿನಿಮಾ ಪ್ರೇಕ್ಷಕರ ಹೃದಯದಲ್ಲಿ ಶಾಶ್ವತವಾಗಿದೆ. ಇದನ್ನೂ ಓದಿ : ಹಸೆಮಣೆ ಏರಿದ ಆಲಿಯಾ-ರಣಬೀರ್‌ಗೆ ಜೋಡಿ ಕುದುರೆ ಉಡುಗೊರೆಈ ಸಿನಿಮಾದ ವಿಶೇಷ ಅಂದರೆ ಬಾಲಿವುಡ್ ನ ಖ್ಯಾತ ಗಾಯಕಿ ಆಶ್ಲಾ ಬೋಂಸ್ಲೆ ‘ಸವಾಲು ಹಾಕಿ ಸೋಲಿಸಿ ಎಲ್ಲರ’ ಗೀತೆಯನ್ನು ಈ ಚಿತ್ರದಲ್ಲಿ ಹಾಡಿದ್ದಾರೆ.  ಇಂತಹ ಸಿನಿಮಾದಲ್ಲಿ ಡಾ.ರಾಜ್ ಕುಮಾರ್ ಅವರು ಹನುಮನ ಪಾತ್ರದಲ್ಲಿ ನಟಿಸಿದ್ದರು. ಆದರೆ, ಆ ಪಾತ್ರವು ಸಿನಿಮಾ ತೆರೆಗೆ ಬಂದಾಗ ಇರಲೇ ಇಲ್ಲ. ಈ ಕುರಿತು ಕನ್ನಡದ ಖ್ಯಾತ ಸ್ಥಿರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ್ ನಾರಾಯಣ್ ಟಿಪ್ಪಣಿ ಬರೆದಿದ್ದಾರೆ. ಇದನ್ನೂ ಓದಿ : ಕೆಜಿಎಫ್-2 ಬಾಲಿವುಡ್ ಮೇಲೆ ಹಾಕಿದ ಅಣುಬಾಂಬ್ : ರಾಮ್ ಗೋಪಾಲ್ ವರ್ಮಾಹನುಮನ ವೇಷದ ಛಾಯಾಚಿತ್ರಗಳನ್ನು ನೋಡಿ, ಅರೇ… ರಾಜಕುಮಾರ್ ರವರು ಯಾವ ಚಿತ್ರದಲ್ಲಿ ಹನುಮನ ಪಾತ್ರ ಮಾಡಿದ್ದಾರೆ ನೋಡೆ ಇಲ್ಲವಲ್ಲ ಎನ್ನುಸುವುದೆ? ಹೌದು ನೀವು ಯಾರೂ ನೋಡಿರಲು ಸಾಧ್ಯವಿಲ್ಲ. ಇದು “ದೂರದ ಬೆಟ್ಟ” ಚಿತ್ರಕ್ಕಾಗಿ ಚಿತ್ರೀಕರಣಗೊಂಡ ದೃಶ್ಯಗಳು. ಅದರೆ ಚಿತ್ರದಲ್ಲಿ ಈ ದೃಶ್ಯಗಳು ಇಲ್ಲ. ಇದನ್ನೂ ಓದಿ : ಕೆಜಿಎಫ್ 2 ಡಿಜಾಸ್ಟರ್ ಸಿನಿಮಾ ಎಂದು ‘ಥೂ… ಥೂ..’ ಉಗಿಸಿಕೊಂಡ ಬಾಲಿವುಡ್ ನಟನಂತರದ ದಿನಗಳಲ್ಲಿ ನಾನು ಒಮ್ಮೆ ರಾಜಕುಮಾರ್ ರವರ ಸಹೋದರ ವರದರಾಜ್ ರವರ ಬಳಿ ಈ ದೃಶ್ಯಗಳನ್ನು ಏಕೆ ಉಪಯೋಗ ಮಾಡಿಲ್ಲ? ಎಂದು ಕೇಳಿದೆ ವರದರಾಜ್ ರವರು ರಾಜಕುಮಾರ್ ರವರು ನಟಿಸುತ್ತಿದ್ದ ಬಹುತೇಕ ಚಿತ್ರಗಳಿಗೆ ಕತೆ, ಹಾಗು ಚಿತ್ರ ಕಥೆಗಳ ಸಲಹೆಗಾರರು ಆಗಿರುತ್ತಿದ್ದರು.  ದೂರದ ಬೆಟ್ಟ ಚಿತ್ರದಲ್ಲಿ ಹಳ್ಳಿಯ ಯುವಕರು ಲಂಕಾ ದಹನ ನಾಟಕ ಮಾಡುತ್ತಾರೆ ಆ ಸಂದರ್ಭದಲ್ಲಿ ಆಗುವ ಅಬಾಸ ಗಳನ್ನು ಹಾಸ್ಯ ಸನ್ನಿವೇಶ ರೂಪದಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಚಿತ್ರ ಪೂರ್ಣಗೊಂಡು ಮೊದಲ ಪ್ರತಿ ನೋಡಿದಾಗ ರಾಜಕುಮಾರ್, ವರದರಾಜ್ ಹಾಗು ನಿರ್ದೇಶಕ ಸಿದ್ದಲಿಂಗಯ್ಯ  ರವರಿಗೆ ಈ ಈ ದೃಶ್ಯಗಳು ಬೇಡ ನಾವು ಬೆಳೆದು ಬಂದಿರುವುದೆ ನಾಟಕದಿಂದ ಹಳ್ಳಿಯ ಯುವಕರ ನಾಟಕ ಪ್ರೇಮವನ್ನು ಪ್ರೋತ್ಸಾಹ ಮಾಡಬೇಕೆ ಹೊರತು ಹಾಸ್ಯಾಸ್ಪದ ಮಾಡುವುದು ಬೇಡ ಎಂದು   ಆ ದೃಶ್ಯಗಳನ್ನು ಕೈ ಬಿಡಲಾಯಿತು ಎಂದು ಹೇಳಿದರು. ಇದನ್ನೂ ಓದಿ : ಕನ್ನಡದಲ್ಲೇ ಕೆಜಿಎಫ್ ನೋಡಿ ಫಿದಾ ಆದ ತಲೈವಾದೂರದ ಬೆಟ್ಟ ಚಿತ್ರದ ಸ್ಥಿರಚಿತ್ರ ಛಾಯಾಗ್ರಾಹಕ ನಾಗಿದ್ದ ನನ್ನಲಿ ಈ ಛಾಯಾಚಿತ್ರಗಳ ಜೊತೆಗೆ ಮತ್ತಷ್ಟು ಛಾಯಾಚಿತ್ರಗಳು ಇವೆ.ಮಾಹಿತಿ ಮತ್ತು ಚಿತ್ರ : ಪ್ರಗತಿ ಅಶ್ವತ್ಥ್ ನಾರಾಯಣ್ ಅವರ ಫೇಸ್ ಬುಕ್ ವಾಲ್ ನಿಂದSign in to your account
Username or Email Address


Password

 Remember Me


