ಕರ್ನಾಟಕ ಮೂಲದ ದಕ್ಷಿಣದ ಚೆಲುವೆ ಪೂಜಾ ಹೆಗ್ಡೆ ಹಾಡೊಂದಕ್ಕೆ ಹೆಜ್ಜೆ ಹಾಕಲು ಬರೋಬ್ಬರಿ ಒಂದು ಕೋಟಿ ಸಂಭಾವನೆ ಪಡೆದುಕೊಂಡ ವಿಚಾರ ವಾರದಿಂದ ಸಿನಿಮಾ ರಂಗದಲ್ಲಿ ಗಿರಿಕಿ ಹೊಡೆಯುತ್ತಿದೆ. ಸಾಲು ಸಾಲು ಸೋಲುಗಳನ್ನೇ ಉಂಡಿರುವ ಪೂಜಾ, ನಿಜಕ್ಕೂ ಅಷ್ಟೊಂದು ಸಂಭಾವನೆ ಪಡೆದರಾ ಅನ್ನುವ ಅನುಮಾನ ಕೂಡ ಮೂಡಿದೆ. ಯಾವುದಕ್ಕೂ ತಲೆಕೆಡಿಸಿಕೊಳ್ಳದ ಪೂಜಾ, ತಮ್ಮ ಪಾಡಿಗೆ ತಾವು ಒಪ್ಪಿಕೊಂಡಿರುವ ಹಾಡಿಗೆ ಹೆಜ್ಜೆ ಹಾಕಿ ಬಂದಿದ್ದಾರೆ. ಇದನ್ನೂ ಓದಿ : ಕೆಜಿಎಫ್-2 : ಎರಡನೇ ದಿನಕ್ಕೆ 240 ಕೋಟಿ ಬಾಚಿದ ರಾಕಿ ಭಾಯ್ : ಗ್ರೌಂಡ್ ರಿಪೋರ್ಟ್ಹೌದು, ಪೂಜಾ ಇದೀಗ ‘ಎಫ್ 3’ ಹೆಸರಿನ ಸಿನಿಮಾವೊಂದರಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಿನ್ನೆಯಷ್ಟೇ ಆ ಸಿನಿಮಾದ ಹಾಡಿನ ಚಿತ್ರೀಕರಣ ನಡೆದಿದೆ. ದಟ್ಟ ಪಿಂಕ್ ಬಣ್ಣದ ತುಂಡುಡುಗೆಯಲ್ಲಿ ಪೂಜಾ ಸೊಂಟ ಬಳುಕಿಸಿದ್ದಾರೆ. ಇದೊಂದು ಪಾರ್ಟಿ ಸಾಂಗ್ ಆಗಿದ್ದು, ಪಡ್ಡೆಗಳಿಗೆ ಕಿಕ್ ಏರಿಸುವಂತಹ ಸಾಹಿತ್ಯ ಈ ಹಾಡಿನಲ್ಲಿ ಇದೆಯಂತೆ. ಇದನ್ನೂ ಓದಿ : ಹನುಮ ಜಯಂತಿ : ದೂರದ ಬೆಟ್ಟ ಸಿನಿಮಾದಲ್ಲಿಯ ಡಾ.ರಾಜ್ ಅವರ ಹನುಮನ ಪಾತ್ರ ಏನಾಯಿತು?‘ಎಫ್ 3’ ಅಂದರೆ ಏನು? ಅನ್ನುವುದರ ಕುರಿತು ಸಿನಿಮಾ ರಂಗವು ಈವರೆಗೂ ಮಾಹಿತಿ ಹಂಚಿಕೊಂಡಿಲ್ಲ. ಆದರೆ, ಫೋಸ್ಟರ್ ನಲ್ಲಿ ಇರುವಂತೆ ‘ಎಫ್’ ಅಂದರೆ ಫನ್, ‘ಎಫ್’ ಅಂದರೆ ಫ್ರಸ್ಟ್ರೇಷನ್. ಇವೆರಡರ ಸಂಗಮವೇ ಈ ಸಿನಿಮಾ ಎನ್ನಬಹುದು. ವಿಕ್ಟರಿ ವೆಂಕಟೇಶ್ ಮತ್ತು ವರುಣ್ ತೇಜ್ ಕಾಂಬಿನೇಷನ್ ನ ಈ ಸಿನಿಮಾಗೆ ಅನಿಲ್ ರವಿಪುಡಿ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರೇ ಪೂಜಾ ಡ್ಯಾನ್ಸ್ ಮಾಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಹಸೆಮಣೆ ಏರಿದ ಆಲಿಯಾ-ರಣಬೀರ್‌ಗೆ ಜೋಡಿ ಕುದುರೆ ಉಡುಗೊರೆಪೂಜಾ ಹೆಗ್ಡೆ ನಟನೆಯ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳು ಅಂದುಕೊಂಡಷ್ಟು ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ. ಪ್ರಭಾಸ್ ಜತೆ ನಟಿಸಿದ್ದ ರಾಧೆ ಶ್ಯಾಮ್ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಲಿದೆ ಎಂದು ನಂಬಲಾಗಿತ್ತು. ಆ ನಂಬಿಕೆ ಹುಸಿ ಆಯಿತು. ಅಲ್ಲದೇ, ಮೊನ್ನೆಯಷ್ಟೇ ರಿಲೀಸ್ ಆಗಿರುವ ದಳಪತಿ ವಿಜಯ್ ಅವರ ಬೀಸ್ಟ್ ನಲ್ಲೂ ಪೂಜಾ ನಟಿಸಿದ್ದಾರೆ. ಈ ಸಿನಿಮಾ ಕೂಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಹಿಂದೆ ಬಿದ್ದಿದೆ.Sign in to your account
Username or Email Address


Password

 Remember Me


