ಏಪ್ರಿಲ್ 14 ರಂದು ಸಪ್ತಪದಿ ತುಳಿದಿರುವ ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್, ಸ್ಟಾರ್ ನಟಿ ಆಲಿಯಾ ಭಟ್ ಅವರಿಗೆ ಅನೇಕ ಉಡುಗೊರೆಗಳು ಬಂದಿವೆ. ಅದರಲ್ಲಿ ಒಂದು ಅಪರೂಪದ ಉಡುಗೊರೆಯನ್ನು ನೀಡಿದೆ ಎನ್.ಜಿ.ಓ. ಇದನ್ನೂ ಓದಿ : ಕೆಜಿಎಫ್-2 ಬಾಲಿವುಡ್ ಮೇಲೆ ಹಾಕಿದ ಅಣುಬಾಂಬ್ : ರಾಮ್ ಗೋಪಾಲ್ ವರ್ಮಾಸಾಮಾನ್ಯವಾಗಿ ಮದುವೆಗೆ ಉಡುಗೊರೆ ಎಂದರೆ ನಾನಾ ರೀತಿಯ ವಸ್ತುಗಳು, ಬಂಗಾರ, ಬೆಳ್ಳಿ, ಫ್ಲ್ಯಾಟ್ ಹೀಗೆ ಏನೆಲ್ಲ ಕೊಡುತ್ತಾರೆ. ಆದರೆ, ಮುಂಬೈ ಮೂಲದ ಎನ್.ಜಿ.ಓ ವೊಂದು ಸ್ಟಾರ್ ದಂಪತಿಗಳಿಗೆ ವಿಶೇಷ ಉಡುಗೊರೆ ನೀಡಿ ಶುಭ ಹಾರೈಸಿದೆ. ಆ ಉಡುಗೊರೆ ಪಡೆದಿರುವ ಸ್ಟಾರ್ ಜೋಡಿಯು ಸಖತ್ ಖುಷಿ ಕೂಡ ಆಗಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 ಡಿಜಾಸ್ಟರ್ ಸಿನಿಮಾ ಎಂದು ‘ಥೂ… ಥೂ..’ ಉಗಿಸಿಕೊಂಡ ಬಾಲಿವುಡ್ ನಟಮುಂಬೈ ಮೂಲದ ಎನ್.ಜಿ. ಓ ಸಂಸ್ಥೆಯು ಕೆಲ ತಿಂಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾದ ಎರಡು ಕುದುರೆಗಳನ್ನು ಆರೈಕೆ ಮಾಡಿದ್ದರು. ಈಗ  ಆ ಎರಡೂ ಕುದುರೆಗಳು ಆರೋಗ್ಯವಾಗಿವೆ. ಹೆಚ್ಚು ಚುರುಕಾಗಿವೆ. ಆ ಎರಡೂ ಕುದುರೆಗಳನ್ನು ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಯ ಉಡುಗೊರೆಯಾಗಿ ನೀಡಲಾಗಿದೆ. ಇದನ್ನೂ ಓದಿ : ಕನ್ನಡದಲ್ಲೇ ಕೆಜಿಎಫ್ ನೋಡಿ ಫಿದಾ ಆದ ತಲೈವಾಇಂಥದ್ದೊಂದು ಉಡುಗೊರೆಯನ್ನು ಈ ಸ್ಟಾರ್ ಜೋಡಿಗೆ ಕೊಡುವುದಕ್ಕೂ ಕಾರಣವಿದೆ. ರಣಬೀರ್ ಮತ್ತು ಆಲಿಯಾ ಇಬ್ಬರೂ ಪ್ರಾಣಿಪ್ರಿಯರು. ಹಲವಾರು ಪ್ರಾಣಿಗಳನ್ನು ಸಾಕಿದ್ದಾರೆ ಮತ್ತು ಮೃಗಾಲಯದಲ್ಲಿ ದತ್ತು ಪಡೆದಿದ್ದಾರೆ. ಅಲ್ಲದೇ, ಪ್ರಾಣಿ ದಯಾ ಸಂಘಗಳ ರಾಯಭಾರಿಯಾಗಿಯೂ ಕೆಲಸ ಮಾಡಿದ್ದಾರೆ. ಹಾಗಾಗಿ ಕುದುರೆಗಳನ್ನು ಉಡುಗೊರೆಯಾಗಿ ನೀಡಲಾಗಿದೆ ಎಂದಿದೆ ಎನ್.ಜಿ.ಓ.Sign in to your account
Username or Email Address


Password

 Remember Me


