ರಾಯಚೂರು: ಸರ್ಕಾರಿ ಪಬ್ಲಿಕ್ ಶಾಲೆಯ ಹಿಂಭಾಗದಲ್ಲಿ ಮರವೊಂದಕ್ಕೆ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ನಡೆದಿದೆ.ಮಾನ್ವಿ ತಾಲೂಕಿನ ಬ್ಯಾಗವಾಟ ಗ್ರಾಮದ ಮಹಾಂತೇಶ(40) ಮೃತ ವ್ಯಕ್ತಿ. ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ಮಹಾಂತೇಶ ರಾತ್ರಿ ಮನೆಯಲ್ಲಿ ಜಗಳವಾಡಿಕೊಂಡು ಬೈಕ್‍ನಲ್ಲಿ ಹೊರ ಬಂದಿದ್ದರು. ಇದನ್ನೂ ಓದಿ: ಉಪನ್ಯಾಸಕಿಯರ ಜೊತೆ ಅಸಭ್ಯ ವರ್ತನೆ – ಉಪನ್ಯಾಸಕನಿಗೆ ಹಿಗ್ಗಾಮುಗ್ಗ ಥಳಿತಜೀವನದಲ್ಲಿ ಜಿಗುಪ್ಸೆಹೊಂದಿ ಮಸ್ಕಿಯ ಲಿಂಗಸುಗೂರು ರಸ್ತೆಯಲ್ಲಿರುವ ಸರ್ಕಾರಿ ಪಬ್ಲಿಕ್ ಶಾಲೆಯ ಹಿಂಭಾಗದಲ್ಲಿ ಬೈಕ್ ನಿಲ್ಲಿಸಿ ಪಕ್ಕದ ಮರವೊಂದಕ್ಕೆ ನೇಣು ಹಾಕಿಕೊಂಡು ಪ್ರಾಣಬಿಟ್ಟಿದ್ದಾನೆ. ಘಟನೆ ಹಿನ್ನೆಲೆ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜು.1ರಿಂದ ಪ್ರತಿ ಮನೆಗೆ 300 ಯೂನಿಟ್ ಉಚಿತ ವಿದ್ಯುತ್ – ಪಂಜಾಬ್ ಸರ್ಕಾರ ಘೋಷಣೆSign in to your account
Username or Email Address


Password

 Remember Me


