ಪುಷ್ಪಾ ಸಿನಿಮಾದ ‘ಹೂಂ ಅಂತೀಮಾ ಮಾವ’ ಹಾಡಿನ ನಂತರ ಸಮಂತಾ ಮೇಲೆ ಕೆಲ ಅಭಿಮಾನಿಗಳು ನಿರಂತರ ಕೆಂಡಕಾರುತ್ತಿದ್ದಾರೆ. ಅವರು ಹಾಗೆ ಮಾಡುವುದಕ್ಕೆ ಕಾರಣವೂ ಇದೆ. ನಟ ನಾಗಚೈತನ್ಯ ಅವರಿಂದ ಸಮಂತಾ ದೂರಾದ ಮೇಲೆ ನಾನಾ ರೀತಿಯ ಅವಮಾನಕ್ಕೆ ತುತ್ತಾಗುತ್ತಿದ್ದಾರೆ. ಅವೆಲ್ಲದಕ್ಕೂ ತಲೆ ಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ ಸಮಂತಾ. ಇದನ್ನೂ ಓದಿ : ಟರ್ಕಿಯಲ್ಲಿ ರಜಾಮಜಾ ಮಾಡುತ್ತಿರೋ ಬ್ಯೂಟಿಫುಲ್‌ ಗರ್ಲ್ ಕಾರುಣ್ಯ ರಾಮ್ಹೂಂ ಅಂತೀಯಾ ಮಾವ ಹಾಡು ಬಂದ ನಂತರ ಇಂಥದ್ದೊಂದು ಹಾಡಿನಲ್ಲಿ ಕಾಣಿಸಿಕೊಳ್ಳಬಾರದಿತ್ತು ಎಂದು ಕೆಲವರು ಕಾಮೆಂಟ್ ಮಾಡಿದರು. ದುಡ್ಡಿಗಾಗಿ ಸಮಂತಾ ಏನು ಬೇಕಾದರೂ ಮಾಡಲು ರೆಡಿ ಎನ್ನುವಲ್ಲಿಗೆ ಕಾಮೆಂಟ್ ಗಳು ಹರಿದಾಡಿದವು. ಅವೆಲ್ಲವಕ್ಕೂ ಡೋಂಟ್ ಕೇರ್ ಅಂದ ಸಮಂತಾ ಇದೀಗ ಮತ್ತೊಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಆ ಹಾಡಿನ ಗ್ಲಿಂಪ್ಸ್ ಇದೀಗ ರಿಲೀಸ್ ಆಗಿದೆ. ಇದನ್ನೂ ಓದಿ : ತಾಳಿಕಟ್ಟಿ ಹೆಂಡತಿಯನ್ನು ಎತ್ತಿಕೊಂಡ ರಣಬೀರ್ ಕಪೂರ್ಸದ್ಯ ನಯನತಾರಾ ಮತ್ತು ವಿಜಯ್ ಸೇತುಪತಿ ಕಾಂಬಿನೇಷನ್ ನಲ್ಲಿ ‘ಕಾದು ವಾಕುಲ ರೆಂಡು ಕಾದಲ್’ ಹೆಸರಿನಲ್ಲಿ ಸಿನಿಮಾವೊಂದು ಮೂಡಿ ಬರುತ್ತಿದೆ. ಬಹುತೇಕ ಸಿನಿಮಾದ ಶೂಟಿಂಗ್ ಕೂಡ ಮುಗಿದಿದೆ. ಈ ಸಿನಿಮಾಗೆ ನಯನತಾರಾ ಬಾಯ್ ಫ್ರೆಂಡ್ ವಿಘ್ನೇಶ್ ಶಿವನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ‘ಟು ಟು ಟು..’ ಹಾಡಿಗೆ ಸಮಂತಾ ನೃತ್ಯ ಮಾಡಿದ್ದಾರೆ. ಇದನ್ನೂ ಓದಿ: ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSSಈ ಹಾಡಿನಲ್ಲಿ ಸಮಂತಾ ಕಾಣಿಸಿಕೊಳ್ಳುತ್ತಿರುವುದಕ್ಕೆ ಬಲವಾದ ಕಾರಣವಿದೆ. ಸಮಂತಾ ಮತ್ತು ನಯನತಾರಾ ಕ್ಲೋಸ್ ಫ್ರೆಂಡ್ಸ್. ಕಷ್ಟದ ಪ್ರತಿಕ್ಷಣದಲ್ಲೂ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡಿದ್ದಾರೆ. ನೈತಿಕವಾಗಿ ಬೆಂಬಲ  ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕಾಗಿಯೇ ನಯನತಾರಾ ನಟನೆಯ ಈ ಸಿನಿಮಾದ ಹಾಡಿಗೆ ಸಮಂತಾ ಕುಣಿದಿದ್ದಾರೆ.ಕಾಡು ವಾಕುಲ ರೆಂಡು ಕಾದಲ್ ಸಿನಿಮಾದ ಪ್ರಮುಖ ಘಟ್ಟದಲ್ಲಿ ಬರುವ ‘ಟು ಟು ಟು’ ಗೀತೆಯಲ್ಲಿ ಸಮಂತಾ ಗುಲಾಬಿ ಬಣ್ಣದ ಶಾರ್ಟ್ ಡ್ರೆಸ್ ಹಾಕಿ ಅಚ್ಚರಿ ಮೂಡಿಸಿದ್ದಾರೆ. ಅನಿರುದ್ಧ ರವಿಚಂದರ್ ಸಂಗೀತ ನಿರ್ದೇಶನದಲ್ಲಿ ಈ ಹಾಡು ಮೂಡಿ ಬಂದಿದ್ದು, ನಯನತಾರಾ ಮತ್ತು ವಿಜಯ್ ಸೇತುಪತಿ ಕೂಡ ಹಾಡಿನಲ್ಲಿದ್ದಾರೆ.Sign in to your account
Username or Email Address


Password

 Remember Me


