`ಕೆಜಿಎಫ್ 2′ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಹೈಪ್ ಸೃಷ್ಟಿಯಾಗಿದೆ. ದೇಶದ ಮೂಲೆ ಮೂಲೆಯಲ್ಲೂ ರಾಕಿಭಾಯ್ ಮೇನಿಯಾ ಜೋರಾಗಿದೆ. ಎಲ್ಲಾ ಕಡೆ ಕೋಟಿ ಕೋಟಿ ಕಲೆಕ್ಷನ್ ಲೂಟಿ ಮಾಡತ್ತಾ, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೀಗ ರಾಕಿಭಾಯ್ ಸಿನಿಮಾ ನೋಡಲೆಂದೇ ಲಂಡನ್‌ನಿಂದ ಬಂದು ಸಿನಿಮಾ ವೀಕ್ಷಿಸಿರೋ ವಿಷ್ಯ ಸಖತ್ ಸುದ್ದಿಯಾಗುತ್ತಿದೆ.ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ಚಿತ್ರದ ಕ್ರೇಜ್ ಜೋರಾಗಿದೆ ಅನ್ನೋದಕ್ಕೆ ಈ ವಿಚಾರವೇ ಸಾಕ್ಷಿ. ಲಂಡನ್‌ನಲ್ಲಿ ವ್ಯಾಸಂಗ ಮಾಡ್ತಿರೋ ಸ್ಪೂರ್ತಿ, ಯಶ್ ಅಭಿಮಾನಿಯಾಗಿದ್ದು, ಯಶ್ ನಟಿಸಿರೋ ಎಲ್ಲಾ ಚಿತ್ರವನ್ನ ನೋಡಿದ್ದಾರೆ. `ಕೆಜಿಎಫ್ 2′ ಸಿನಿಮಾ ನೋಡುವ ಸಲುವಾಗಿ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರಿಗೆ ಬಂದು `ಕೆಜಿಎಫ್ 2′ ವೀಕ್ಷಿಸಿದ್ದಾರೆ. ಇದನ್ನೂ ಓದಿ:‘ದಿ ಕಾಶ್ಮೀರ್ ಫೈಲ್ಸ್’ ನಂತರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೈಯಲ್ಲಿ ‘ಡೆಲ್ಲಿ ಫೈಲ್ಸ್’ಯಶ್‌ಗೆ ಎಲ್ಲಾ ವರ್ಗದ ಅಭಿಮಾನಿಗಳಿದ್ದಾರೆ. ಅದರಲ್ಲೂ ಮಹಿಳೆಯರ ಫ್ಯಾನ್ ಬೇಸ್ ಜಾಸ್ತಿ. ಇದೀಗ ವಿದ್ಯಾರ್ಥಿನಿ ಸ್ಪೂರ್ತಿ ಕೆಜಿಎಫ್ 2ಗಾಗಿ ಲಂಡನ್‌ನಿಂದ ಬೆಂಗಳೂರಿಗೆ ಬಂದು ಬೆಳಗಿನ ಜಾವ 3 ಗಂಟೆಗೆ ಚಿತ್ರ ನೋಡಿ ಖುಷಿಪಟ್ಟಿದ್ದಾರೆ.Sign in to your account
Username or Email Address


Password

 Remember Me


