ಬಾಲಿವುಡ್ ನ ಪ್ರಣಯ ಪಕ್ಷಿಗಳಾದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ನಿನ್ನೆ (ಎ.14) ಹಸೆಮಣೆ ಏರಿದ್ದಾರೆ. ಬರೋಬ್ಬರಿ ಆರು ವರ್ಷಗಳಿಂದ ಬಿಟೌನ್ ನ ಕನಸನ್ನು ಈ ಮೂಲಕ ಈಡೇರಿಸಿದ್ದಾರೆ. ಇದೊಂದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಆಗಿದ್ದು, ಎರಡೂ ಕುಟುಂಬಗಳ ಒಪ್ಪಿಗೆ ಪಡೆದುಕೊಂಡೇ ಈ ಜೋಡಿ ಸಪ್ತಪದಿ ತುಳಿದಿದೆ.  ಇದನ್ನೂ ಓದಿ : ಟರ್ಕಿಯಲ್ಲಿ ರಜಾಮಜಾ ಮಾಡುತ್ತಿರೋ ಬ್ಯೂಟಿಫುಲ್‌ ಗರ್ಲ್ ಕಾರುಣ್ಯ ರಾಮ್ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮಧ್ಯೆ ಪ್ರೇಮಾಂಕುರ ಆಗಿದ್ದು, 2017ರಲ್ಲಿ. ಈ ಜೋಡಿಯು ‘ಬ್ರಹ್ಮಾಸ್ತ’ ಸಿನಿಮಾದಲ್ಲಿ ನಟಿಸುತ್ತಿತ್ತು. ಈ ಸಿನಿಮಾದಲ್ಲಿಯ ಸಲುಗೆಯೇ ಪ್ರೇಮಕ್ಕೂ ಕಾರಣವಾಯಿತು. ಅಲ್ಲಿಂದ ಆಲಿಯಾ ಮತ್ತು ರಣಬೀರ್ ಸಾಕಷ್ಟು ಬಾರಿ ಹೋಟೆಲ್, ಪಾರ್ಟಿ, ಪ್ರವಾಸ ಅಂತ ಸುತ್ತಿದ್ದಾರೆ. ಇಬ್ಬರೂ ಪ್ರೇಮಿಗಳು ಅನ್ನುವುದಕ್ಕೆ ಅನೇಕ ಸಾಕ್ಷಿಗಳನ್ನೂ ನೀಡಿದ್ದಾರೆ. ಇದನ್ನೂ ಓದಿ : ತಾಳಿಕಟ್ಟಿ ಹೆಂಡತಿಯನ್ನು ಎತ್ತಿಕೊಂಡ ರಣಬೀರ್ ಕಪೂರ್ಇಬ್ಬರೂ ಪ್ರೇಮಿಗಳಾಗಿದ್ದರೂ, ಯಾವತ್ತೂ ಅವರು ಪ್ರೀತಿಸುತ್ತಿದ್ದ ವಿಷಯವನ್ನು ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಆದರೆ, ಬಿಟೌನ್ ಮಂದಿಗೆ ಮಾತ್ರ ಇವರು ಪ್ರೀತಿಯ ಕುರುಹುಗಳು ಒಂದಿಲ್ಲೊಂದು ರೀತಿಯಲ್ಲಿ ತಿಳಿಯುತ್ತಲೇ ಇದ್ದವು. ಹಾಗಾಗಿ ಆಲಿಯಾ ಮತ್ತು ರಣಬೀರ್ ಸೀರಿಯಸ್ ಆಗಿಯೇ ಪ್ರೀತಿಸುತ್ತಿದ್ದರು ಎಂಬ ನಂಬಿಕೆ ಇತ್ತು. ಅದನ್ನು ಮದುವೆ ಆಗುವ ಮೂಲಕ ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಇದನ್ನೂ ಓದಿ: ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSSನಿನ್ನೆಯಷ್ಟೇ ಈ ಜೋಡಿ ಸತಿ ಪತಿಗಳಾಗಿದ್ದಾರೆ. ಆಲಿಯಾ ಜತೆ ರಣಬೀರ್ ಸಪ್ತಪತಿ ತುಳಿಯುತ್ತಿದ್ದಂತೆಯೇ ಹೆಂಡತಿಯನ್ನು ಎತ್ತಿಕೊಂಡು ಸಂಭ್ರಮಿಸಿದ್ದಾರೆ. ಅಲ್ಲದೇ, ಸಿಹಿ ಮುತ್ತನ್ನೂ ನೀಡಿದ್ದಾರೆ. ಇಂಥದ್ದೊಂದು ಮುತ್ತಿಗೆ ಆರು ವರ್ಷಗಳಿಂದ ಕಾಯುತ್ತಿದ್ದೆ ಎನ್ನುವಂತೆ ಪೋಸ್ ನೀಡಿದ್ದಾರೆ ಆಲಿಯಾ ಭಟ್. ಇದನ್ನೂ ಓದಿ:ಬೀಸ್ಟ್ ಸಿನಿಮಾಕ್ಕೆ ಸೆಡ್ಡು ಹೊಡೆದ ಕೆಜಿಎಫ್-2 – ಕೇರಳ, ತಮಿಳುನಾಡಿನಲ್ಲೂ ರಾಕಿಭಾಯ್ ಹವಾಆಲಿಯಾ ಭಟ್ ಪ್ರೇಮ ಹೊಸದೇನೂ ಅಲ್ಲ. ಕಾಲೇಜು ದಿನಗಳಿಂದಲೂ ಅವರು ಹಲವರನ್ನು ಪ್ರೀತಿಸಿದ್ದೂ ಇದೆ. ಸಿದ್ಧಾರ್ಥ ಮಲ್ಹೋತ್ರ ಜತೆ ಮದುವೆ ಆಗುತ್ತಾರೆ ಎನ್ನುವಲ್ಲಿಗೆ ಪ್ರೇಮ ಮುಂದುವರೆದಿತ್ತು. ಆದರೆ, ಇಬ್ಬರೂ ಬ್ರೇಕ್ ಅಪ್ ಮಾಡಿಕೊಂಡರು. ಕಾಲೇಜಿನಲ್ಲಿರುವಾಗಲೇ ಆಲಿಯಾ ಭಟ್ ಅವರು ರಮೇಶ್ ದೂಬೆ ಅವರನ್ನು ಪ್ರೀತಿಸುತ್ತಿದ್ದರು ಎಂಬ ಸುದ್ದಿಯಿತ್ತು. ಆ ನಂತರ ಬಾಲಿವುಡ್ ಗೆ ಬರುವ ಮುನ್ನ ಅಲಿ ದಾದರ್ಕರ್ ಜತೆ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಗಾಸಿಪ್ ಕೂಡ ಇದೆ. ಸಿನಿಮಾ ರಂಗಕ್ಕೆ ಬಂದ ಮೇಲೆ ಖ್ಯಾತ ಉದ್ಯಮಿ ಪುತ್ರ ಕವಿನ್ ಮಿತ್ತಲ್ ಜತೆಯೇ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ರೂಮರ್ ಕೂಡ ಇತ್ತು. ಈ ಎಲ್ಲ ಪ್ರೇಮಕ್ಕೆ ಇದೀಗ ಅಧಿಕೃತವಾಗಿ ಫುಲ್ ಸ್ಟಾಪ್ ಬಿದ್ದಿದೆ.Sign in to your account
Username or Email Address


Password

 Remember Me


