ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾ ಗುರುವಾರ ರಾಷ್ಟ್ರಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ತಮಿಳುನಾಡು, ಕೇರಳ ಸೇರಿದಂತೆ ಇತರೆ ರಾಜ್ಯಗಳಲ್ಲಿಯೂ ಹೌಸ್ ಫುಲ್ ಪ್ರದರ್ಶನ ಕಾಣುವ ಮೂಲಕ ಕೆಜಿಎಫ್-2 ಸಿನಿಮಾ ಅಬ್ಬರಿಸುತ್ತಿದೆ. ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿರುವ ಯಶ್ ಇದೀಗಾ ಇತರೆ ರಾಜ್ಯಗಳ ಸ್ಟಾರ್ ನಟರ ಸಿನಿಮಾಗಳಿಗೂ ಸೆಡ್ಡು ಹೊಡೆದಿದ್ದಾರೆ.For yesterday, April 14th #KGFChapter2 has opened at No.1 Position in every state of India ????????, except TNIn TN, it’s Box office performance was way higher than expectedTheatres have arranged special shows for #KGFChapter2 between 12 mid-night and 7 AM due to ticket pressure..— Ramesh Bala (@rameshlaus) April 15, 2022ಹೌದು, ಕಾಲಿವುಡ್ ನಟ ದಳಪತಿ ವಿಜಯ್ ಅಭಿನಯದ ಬೀಸ್ಟ್ ಸಿನಿಮಾ ಏಪ್ರಿಲ್ 13ರಂದು ಬಿಡುಗಡೆಯಾಗಿತ್ತು. ಇದೀಗ ಬೀಸ್ಟ್ ಸಿನಿಮಾ ಕೆಜಿಎಫ್-2 ಸಿನಿಮಾದ ಮುಂದೆ ಮಕ್ಕಾಡೆಯಾಗಿ ಮಲಗಿದೆ. ಹೆಚ್ಚಾಗಿ ತಮಿಳಿಗರೇ ಇರುವ ಮಲೇಷ್ಯಾದಲ್ಲಿ ಬೀಸ್ಟ್ ಸಿನಿಮಾವನ್ನು ಬದಿಗೊತ್ತಿ ಕೆಜಿಎಫ್-2 ಟಾಪ್ 1 ಪಟ್ಟವನ್ನು ಅಲಂಕರಿಸಿದೆ. ಇನ್ನೂ ಬೀಸ್ಟ್ ಸಿನಿಮಾ 3ನೇ ಸ್ಥಾನಕ್ಕೆ ಇಳಿದಿದೆ. ಇದನ್ನೂ ಓದಿ: ಅಮೆರಿಕಾದಲ್ಲೂ ರಾಕಿಭಾಯ್ ಹವಾ:`ಕೆಜಿಎಫ್ 2′ ಟಿಕೆಟ್ ಸೋಲ್ಡ್ ಔಟ್In a Shocking development, #KGFChapter2 (Tamil) is at No.1 in #Malaysia ‘s Golden Screen Cinemas Chain.. For Apr 14th.. #Beast is at No.3..This is something unprecedented.. #Malaysia is as good as TN in Overseas.. pic.twitter.com/LhAsJvSSrw— Ramesh Bala (@rameshlaus) April 15, 2022ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬಂದಿರುವ ಕೆಜಿಎಫ್-2 ಸಿನಿಮಾವನ್ನು ಪಂಚ ಭಾಷೆಗಳಲ್ಲಿ ಬಿಡುಗಡೆಗೊಳಿಸಲಾಗಿದ್ದು, ಇದೀಗ ತಮಿಳು ನಾಡು ಸೇರಿದಂತೆ ಭಾರತಾದ್ಯಂತ ಈ ಸಿನಿಮಾ ಟಾಪ್-1 ಸ್ಥಾನದಲ್ಲಿದೆ. ತಮಿಳುನಾಡಿನಲ್ಲಿ ನಿರೀಕ್ಷೆಗೂ ಮೀರಿದಂತೆ ಬಾಕ್ಸ್ಆಫೀಸ್ ಕಲೆಕ್ಷನ್ ಆಗಿದೆ. ಅಲ್ಲದೇ ಟಿಕೆಟ್ ಕೊರತೆಯಿಂದಾಗಿ ಮಧ್ಯರಾತ್ರಿ 12 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೂ ಕೆಜಿಎಫ್-2 ಸ್ಪೆಷಲ್ ಶೋ ಏರ್ಪಡಿಸಲಾಗಿದೆ. ಇದನ್ನೂ ಓದಿ: ಹಾಸನದಲ್ಲಿ ‘ಕೆಜಿಎಫ್ 2’ ಸಿನಿಮಾ ವೀಕ್ಷಿಸಿದ ಯಶ್ ತಂದೆAt the #Kerala Box Office, as per early estimates, #KGFChapter2 has taken All-time No.1 opening for Day 1 yesterday..Waiting for final numbers.. pic.twitter.com/CC0G4tQn0s— Ramesh Bala (@rameshlaus) April 15, 2022ಮತ್ತೊಂದೆಡೆ ಕೇರಳದಲ್ಲಿ ಮೊದಲ ದಿನವೇ ಇದೇ ಮೊದಲ ಬಾರಿಗೆ ಭರ್ಜರಿ ಓಪನಿಂಗ್ ಪಡೆದ ಸಿನಿಮಾ ಕೆಜಿಎಫ್-2 ಆಗಿದ್ದು, ಮೊದಲ ದಿನವೇ ಗಲ್ಲಾ ಪಟ್ಟಿಗೆಯಲ್ಲಿ ಭಾರೀ ಸದ್ದು ಮಾಡಿದೆ. ಒಟ್ಟಾರೆ ರಾಕಿ ಭಾಯ್ ಅಭಿನಯಕ್ಕೆ ಪ್ರೇಕ್ಷಕ ಮಹಾಪ್ರಭುಗಳು ಫುಲ್ ಮಾಕ್ರ್ಸ್ ಕೊಟ್ಟಿದ್ದು, ಸಿನಿಮಾಕ್ಕೆ ಎಲ್ಲೆಡೆ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗುತ್ತಿದೆ.Sign in to your account
Username or Email Address


Password

 Remember Me


