ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ 2 ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನಾಲ್ಕು ದಿನಗಳ ಕಾಲ ರಜೆ ಇರುವ ಕಾರಣದಿಂದಾಗಿ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಲ್ಲದೇ, ಒಂದು ವಾರದ ಟಿಕೆಟ್ ಗಳು ಕೂಡ ಸೋಲ್ಡೌಟ್ ಆಗಿವೆ. ಈ ನಡುವೆ ಕೆಲ ಅಚ್ಚರಿಯ ಸಂಗತಿಗಳು ನಡೆದಿವೆ. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2ಚಿತ್ರ ತಂಡದ ಕೆಲ ಕಲಾವಿದರು ಮಧ್ಯೆ ರಾತ್ರಿಯೇ ಕೆಜಿಎಫ್ ಸಿನಿಮಾ ವೀಕ್ಷಿಸಿದ್ದಾರೆ. ಬೆಂಗಳೂರಿನ ಊರ್ವಶಿ ಥಿಯೇಟರ್ ಗೆ ಆಗಮಿಸಿದ್ದ ಶ್ರೀನಿಧಿ ಶೆಟ್ಟಿ, ಅವಿನಾಶ್, ಗರುಡ, ಮೇಘನಾ ಮತ್ತಿತರು ಅಭಿಮಾನಿಗಳ ಮಧ್ಯೆ ಕೂತು ಸಿನಿಮಾ ನೋಡಿದ್ದಾರೆ. ಅಲ್ಲದೇ, ಡಾ.ರಾಜ್ ಕುಟುಂಬದ ಕುಡಿಗಳಾದ ಯುವರಾಜ್ ಕುಮಾರ್ ಮತ್ತು ವಿನಯ್ ರಾಜ್ ಕುಮಾರ್ ಕೂಡ ಮಧ್ಯೆ ರಾತ್ರಿಯೇ ಚಿತ್ರವನ್ನು ವೀಕ್ಷಿಸಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 ಜೊತೆ ನೋಡಬಹುದು ಹೊಂಬಾಳೆ ಫಿಲ್ಮ್ಸ್ ನ ಮತ್ತೆರಡು ಸಿನಿಮಾ ಟೀಸರ್ಅಷ್ಟೇ ಅಲ್ಲದೇ, ನಿರ್ದೇಶಕರುಗಳಾದ ಪವನ್ ಒಡೆಯರ್, ಮಹೇಶ್ ಕುಮಾರ್, ಸುನಿ, ರಿಷಭ್ ಶೆಟ್ಟಿ ಸೇರಿದಂತೆ ಸಾಕಷ್ಟು ತಂತ್ರಜ್ಞರು ಕೂಡ ರಾತ್ರಿಯೇ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ಕೂಡ ಸಿನಿಮಾ ಮೆಚ್ಚಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.ಈ ರೀತಿಯಾಗಿ ಸೆಲೆಬ್ರಿಟಿಗಳು, ನಾನಾ ಕ್ಷೇತ್ರದ ಗಣ್ಯರು ಕೂಡ ಸಿನಿಮಾ ನೋಡಿ, ಮೆಚ್ಚಿ ಮಾತನಾಡಿದ್ದಾರೆ. ಹಾಗೆಯೇ ಯಶ್ ತಂದೆ ಅರುಣ್ ಕುಮಾರ್ ಕೂಡ ಸಿನಿಮಾ ನೋಡಲು ಹಾಸನದಲ್ಲಿರುವ ಎಸ್.ಬಿ.ಜಿ ಥಿಯೇಟರ್ ಆಗಮಿಸಿದ್ದರು. ಯಶ್ ತಂದೆ ಇದೀಗ ಹಾಸನ ಸಮೀಪದಲ್ಲಿ ತೋಟ ಮಾಡಿಕೊಂಡು ಅಲ್ಲಿಯೇ ವಾಸವಿದ್ದಾರೆ. ಹಾಗಾಗಿ ಹಾಸನಕ್ಕೆ ಬಂದು, ಅಭಿಮಾನಿಗಳ ಜತೆ ಸಿನಿಮಾ ನೋಡಿದ್ದಾರೆ.Sign in to your account
Username or Email Address


Password

 Remember Me


