ನಿಮ್ಮ ಮೊಬೈಲ್ ನಲ್ಲಿ ಸನ್ನಿ ಲಿಯೋನ್ ಅವರ ಹತ್ತು ಫೋಟೋಗಳಿವೆಯಾ? ಸನ್ನಿ ಲಿಯೋನ್ ಫೇಸ್ ಬುಕ್ ಮತ್ತು ಇನ್ಸ್ಟಾ ಪೇಜ್ ಗಳನ್ನು ಫಾಲೋ ಮಾಡುತ್ತೀರಾ? ಸನ್ನಿ ಲಿಯೋನ್ ಅವರ ಎಲ್ಲ ಫೋಟೋಗಳಿಗೂ ಲೈಕ್ ಮತ್ತು ಕಾಮೆಂಟ್ ಮಾಡುತ್ತೀರಾ?ಈ ಎಲ್ಲ ಪ್ರಶ್ನೆಗಳಿಗೆ ನೀವು ಹೌದು ಎನ್ನುವ ಉತ್ತರ ಕೊಟ್ಟರೆ, ಸೀದಾ ಮಂಡ್ಯಗೆ ಹೊರಟು ಬಿಡಿ. ಮಂಡ್ಯದ ಕರ್ನಾಟಕ ಬಾರ್ ವೃತ್ತದಲ್ಲಿ ಒಂದು ಚಿಕನ್ ಅಂಗಡಿಯಿದೆ. ಅಲ್ಲಿ ನಿಮಗಾಗಿ ಸನ್ನಿ ಲಿಯೋನ್ ಅಭಿಮಾನಿ ಪ್ರಸಾದ್ ವಿಶೇಷ ಉಡುಗೊರೆಯನ್ನು ನೀಡುತ್ತಾರೆ. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2ಇದು ತಮಾಷೆಯಲ್ಲ, ಮಂಡ್ಯದಲ್ಲಿರುವ ಸನ್ನಿ ಲಿಯೋನ್ ಅಭಿಮಾನಿಯೊಬ್ಬ ಮೇಲಿನ ಷರತ್ತುಗಳನ್ನು ಹಾಕಿ ಡಿಸ್ಕೌಂಡ್ ನಲ್ಲಿ ಚಿಕನ್ ಕೊಡಲು ಮುಂದಾಗಿದ್ದಾನೆ. ಅದು ವರ್ಷಪೂರ್ತಿ ಎನ್ನುವುದು ಮತ್ತೊಂದು ವಿಶೇಷ. ನೀವು ಈ ಡಿಸ್ಕೌಂಟ್ ಪಡೆಯಲು ಅರ್ಹರಾಗಬೇಕಿದ್ದರೆ ಮತ್ತೊಂದು ಸಲ ಅವನ ಷರತ್ತುಗಳನ್ನು ಓದಿಕೊಂಡು ಬಿಡಿ. ಇದನ್ನೂ ಓದಿ : ಕೆಜಿಎಫ್ 2 ಜೊತೆ ನೋಡಬಹುದು ಹೊಂಬಾಳೆ ಫಿಲ್ಮ್ಸ್ ನ ಮತ್ತೆರಡು ಸಿನಿಮಾ ಟೀಸರ್ಮಾದಕ ಬೆಡಗಿ ಸನ್ನಿ ಲಿಯೋನ್ ಅವರ ಅಪ್ಪಟ ಅಭಿಮಾನಿ ಪ್ರಸಾದ್. ಸನ್ನಿ ಲಿಯೋನ್ ಅವರ ಸಮಾಜಮುಖಿ ಕೆಲಸಗಳನ್ನು ನೋಡಿ, ಪ್ರಸಾದ್ ಅಭಿಮಾನಿಯಾಗಿದ್ದಾರೆ. ಈ ಅಭಿಮಾನಕ್ಕೋಸ್ಕರವಾಗಿ ಅವರು ಶೇ.10 ಪರ್ಸಂಟ್ ರಿಯಾಯತಿಯಲ್ಲಿ ಚಿಕನ್ ಕೊಡಲು ಮುಂದಾಗಿದ್ದಾರೆ.Sign in to your account
Username or Email Address


Password

 Remember Me


