ಸೌಂದರ್ಯದ ಜೊತೆ ಪ್ರತಿಭೆಯಿರೋ ಸ್ಯಾಂಡಲ್‌ವುಡ್ ಮುದ್ದು ನಟಿ ರಾಗಿಣಿ ದ್ವಿವೇದಿ, ಕಿಚ್ಚ ಸುದೀಪ್‌ಗೆ ನಾಯಕಿಯಾಗುವ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ್ರು. ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಕಲರ್‌ಫುಲ್ ಫೋಟೋಶೂಟ್‌ನಿಂದ ಗಮನ ಸೆಳೆಯುತ್ತಿದ್ದಾರೆ. ಸದ್ಯ ರಾಗಿಣಿ ನಯಾ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗ್ತಿದೆ.`ತುಪ್ಪ ಬೇಕಾ ತುಪ್ಪ’ ಅಂತಾ ಗಂಡ್ ಹೈಕ್ಳ ಹಾರ್ಟಿಗೆ ಲಗ್ಗೆಯಿಟ್ಟ ಸುಂದರಿ ರಾಗಿಣಿ ಮತ್ತೆ ಸಿನಿಮಾಗಳತ್ತ ಆಕ್ಟೀವ್ ಆಗಿದ್ದಾರೆ. ರಾಗಿಣಿ ಲಿಸ್ಟ್ನಲ್ಲಿ ಕೈತುಂಬಾ ಚಿತ್ರಗಳಿವೆ. ಶೂಟಿಂಗ್ ಮಧ್ಯೆ ಸ್ವಲ್ಪ ಫ್ರೀ ಮಾಡಿಕೊಂಡು, ಇದೀಗ ನಟಿ ಬೋಲ್ಡ್ ಲುಕ್ಕಿನಲ್ಲಿ ಕಣ್ಣು ಕುಕ್ಕುವಂತೆ ಫೋಟೋಶೂಟ್ ಮಾಡಿಸಿದ್ದಾರೆ.ಕಲರ್‌ಫುಲ್ ಲುಕ್ಕಿನಲ್ಲಿ ಬೋಲ್ಡ್ ಅವತಾರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಾಗಿಣಿ ನ್ಯೂ ಲುಕ್ ನೋಡಿ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಇದನ್ನೂ ಓದಿ:‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS A post shared by Ragini dwivedi (@rraginidwivedi)ಸದ್ಯ ರಾಗಿಣಿ ಕೈಯಲ್ಲಿ `ಸಾರಿ ಕರ್ಮ ರಿಟನ್ಸ್’, `ಒನ್ ಟು ಒನ್’,`ಜಾನಿವಾಕರ್’, ಮತ್ತು `ಕರ್ವ 3′ ಚಿತ್ರಗಳಿವೆ. ಕನ್ನಡ ಮಾತ್ರವಲ್ಲದೇ ಪರಭಾಷಾ ಚಿತ್ರಗಳಲ್ಲೂ ಬ್ಯುಸಿಯಾಗಿದ್ದಾರೆ. ರಾಗಿಣಿ ನಟನೆಯ ಚಿತ್ರಗಳಿಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.Sign in to your account
Username or Email Address


Password

 Remember Me


