`ಕೆಂಡಸಂಪಿಗೆ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಿತರಾದ ನಟಿ ಮಾನ್ವಿತಾ ಹರೀಶ್, ಬಳಿಕ ಸಾಕಷ್ಟು ಚಿತ್ರಗಳ ಮೂಲಕ ಸಂಚಲನ ಮೂಡಿಸಿದ್ರು. ಇದೀಗ ʻರೋಮಿಯೋʼ  ಖ್ಯಾತಿಯ ಪಿ. ಸಿ ಶೇಖರ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟ ನಕುಲ್ ಗೌಡಗೆ ನಾಯಕಿಯಾಗಿ ನಟಿಸಿದ್ದಾರೆ.ಪಿ.ಸಿ ಶೇಖರ್ ನಿರ್ದೇಶನದ ಹೆಸರಿಡದ ಚಿತ್ರದಲ್ಲಿ ಟಗರು ಪುಟ್ಟಿ ಮಾನ್ವಿತಾ ನಾಯಕಿಯಾಗಿ ನಟಿಸಿದ್ದಾರೆ. 2018ರಲ್ಲಿ ತೆರೆಕಂಡ `ಪ್ರೀತಿಯ ರಾಯಭಾರಿ’ ಚಿತ್ರದ ಮೂಲಕ ಪರಿಚಿತರಾದ ನಕುಲ್ ಗೌಡಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಪಿ. ಸಿ ಶೇಖರ್ ಡೈರೆಕ್ಷನ್‌ನಲ್ಲಿ ನಕುಲ್ ಮತ್ತು ಮಾನ್ವಿತಾ ಕಮಾಲ್ ಮಾಡೋಕೆ ರೆಡಿಯಾಗಿದ್ದಾರೆ.ಇದೊಂದು ಪಕ್ಕಾ ಲವ್‌ಸ್ಟೋರಿ ಮತ್ತು ಥ್ರಿಲರ್ ಚಿತ್ರವಾಗಿದ್ದು, ನಟ ನಕುಲ್ ಗೌಡ ಡಿಫರೆಂಟ್ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ರೈತ ಕುಟುಂಬದಿಂದ ಬಂದ ಹಳ್ಳಿ ಹುಡುಗಿಯ ಪಾತ್ರದಲ್ಲಿ ಮಾನ್ವಿತಾ ನಟಿಸಿದ್ದಾರೆ.`ಪ್ರೀತಿಯ ರಾಯಭಾರಿ’ ಚಿತ್ರದ ಮೂಲಕ ಈಗಾಗಲೇ ಪರಿಚಿತರಾಗಿರೋ ನಟ ನಕುಲ್‌ಗೆ ಇದು ಎರಡನೇ ಚಿತ್ರವಾಗಿದ್ದು, ಈ ಚಿತ್ರದ ಮೂಲಕ ನಕುಲ್ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಚಿತ್ರ ಅದ್ದೂರಿಯಾಗಿ ಮೂಡಿ ಬಂದಿದೆ. ಇನ್ನು ಏಪ್ರಿಲ್ ಅಂತ್ಯದಲ್ಲಿ ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡಲಿದೆ ಚಿತ್ರತಂಡ. ಇದನ್ನೂ ಓದಿ:ರಣಬೀರ್ – ಆಲಿಯಾ ಮದುವೆ : ದಿಲ್ಬರೋ ಹಾಡಿಗೆ ಹೆಜ್ಜೆ ಹಾಕಲಿದೆ ಸ್ಟಾರ್ ಜೋಡಿಸದ್ಯ ಮಾನ್ವಿತಾ ಹರೀಶ್ ಕನ್ನಡ ಚಿತ್ರಗಳಲ್ಲಿ ಮಾತ್ರವಲ್ಲದೇ ತೆಲುಗು ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಹೊಸ ಬಗೆಯ ಪಾತ್ರಗಳಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಇದೀಗ ಪಿ.ಸಿ ಶೇಖರ್ ಮತ್ತು ನಕುಲ್ ಕಾಂಬಿನೇಷನ್ ಚಿತ್ರದಲ್ಲಿ ಭಿನ್ನ ಪಾತ್ರದ ಮೂಲಕ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಈ ಸುದ್ದಿ ಕೇಳಿ ಟಗರು ಪುಟ್ಟಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.Sign in to your account
Username or Email Address


Password

 Remember Me


