ಸ್ಯಾಂಡಲ್‍ವುಡ್ ಕ್ಯೂಟ್ ಕಪಲ್‍ಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಕೂಡ ಒಬ್ಬರು. ಮದುವೆಯಾದ ಬಳಿಕ ಸಿನಿಮಾರಂಗದಿಂದ ದೂರ ಉಳಿದಿರುವ ರಾಧಿಕಾ ಪಂಡಿತ್ ಸದ್ಯ ಮಕ್ಕಳ ಪಾಲನೆ, ಪೋಷಣೆಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.  ಸಂಸಾದ ಜವಾಬ್ದಾರಿಯನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ಸೊಸೆ ರಾಧಿಕಾ ಪಂಡಿತ್ ಬಗ್ಗೆ ಯಶ್ ತಂದೆ ಅರುಣ್ ಕುಮಾರ್ ಹಾಗೂ ತಾಯಿ ಪುಷ್ಪ ಹಾಡಿ ಹೊಗಳಿದ್ದಾರೆ.ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನಮ್ಮ ಮನೆಗೆ ಮೊದಲಿಂದಲೂ ಬಂದು ಹೋಗುತ್ತಿದ್ದರಿಂದ ರಾಧಿಕಾ ನಮಗೆ ತುಂಬಾ ಇಷ್ಟ. ಯಶ್ ಹಾಗೂ ರಾಧಿಕಾ ಇಬ್ಬರೂ ಯಾವಾಗಲೂ ಸ್ನೇಹಿತರಂತೆ ಇರುತ್ತಾರೆ. ರಾಧಿಕಾ ಕೂಡ ಬಹಳ ಹೊಂದಿಕೊಂಡು ಹೋಗುವಂತಹ ಹುಡುಗಿ, ನಮ್ಮ ಮಗಳು ನಂದಿನಿಗಿಂತ ರಾಧಿಕಾ ಬಹಳ ಸಾಫ್ಟ್ ಸ್ವಭಾವದವರಾಗಿದ್ದಾರೆ.ಯಶ್ ಮುದ್ದೆ, ರೊಟ್ಟಿ ತಿನ್ನುತ್ತಾನೆ. ಹಾಗಾಗಿ ರಾಧಿಕಾಗೆ ಮುದ್ದೆ ಮಾಡಲು ಬರುವುದಿಲ್ಲ ಆದರೂ ಗಂಡನಿಗೋಸ್ಕರ ಈಗ ಮಾಡಲು ಕಲಿತುಕೊಂಡಿದ್ದಾರೆ. ಯಶ್ ತಂದೆ ಹಾಗೂ ರಾಧಿಕಾ ಇಬ್ಬರೂ ಬಹಳ ಸಾಫ್ಟ್ ನೇಚರ್ ಹೊಂದಿದ್ದಾರೆ. ಹೀಗಾಗಿ ಮನೆಗೆ ಹೋದಾಗಲೆಲ್ಲಾ ರಾಧಿಕಾ ಮಾವನ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ ಎಂದು ಸೊಸೆಯನ್ನು ಕೊಂಡಾಡಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ ಕೆಜಿಎಫ್ 2 ‘ಸುಲ್ತಾನ್’ ಸಾಂಗ್ಇದೇ ವೇಳೆ ಐರಾ, ಯಥರ್ವ್ ಬಗ್ಗೆ ಮಾತನಾಡಿದ ಅವರು, ಮನೆಗೆ ಹೋದಾಗ ಮೊಮ್ಮಕ್ಕಳು ನಮ್ಮ ಜೊತೆ ಮಾತನಾಡುವುದು, ಆಟ ಆಡುವುದು ಎಲ್ಲವನ್ನು ನೋಡಿದರೆ ಬಹಳ ಖುಷಿಯಾಗುತ್ತದೆ. ನಾವು ಏನಾದರೂ ತಿಂಡಿಯನ್ನು ತೆಗೆದುಕೊಂಡು ಹೋದಾಗ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಊರಿಗೆ ಬಂದಾಗ ಕೂಡ ತಾತನ ಜೊತೆ ಐರಾ ಸುತ್ತಾಡುತ್ತಾಳೆ ಎಂದಿದ್ದಾರೆ. ಇದನ್ನೂ ಓದಿ: ಎಲ್ಲೆಲ್ಲೂ ರಾಕಿಂಗ್ ಸ್ಟಾರ್ ಯಶ್ ಹವಾ- ಮಧ್ಯರಾತ್ರಿಯೇ ತೆರೆಗಪ್ಪಳಿಸಿದ KGF ಚಾಪ್ಟರ್-2






 Advertisement 




Sign in to your account
Username or Email Address


Password

 Remember Me


