ಬೆಂಗಳೂರು: ರಾಜ್ಯದಲ್ಲಿ ಇಂದು ಒಟ್ಟು 55 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಇಂದು ಕೂಡ ಶೂನ್ಯ ಮರಣ ಪ್ರಕರಣ ಮುಂದುವರಿದೆ. ಈ ಮೂಲಕ ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಶೂನ್ಯ ಮರಣ ಪ್ರಕರಣ ವರದಿಯಾಗುತ್ತಿದೆ.ಬೆಂಗಳೂರು ನಗರದಲ್ಲಿ ಇಂದು 46 ಪಾಸಿಟಿವ್ ಕೇಸ್ ಪತ್ತೆಯಾಗಿದೆ. ರಾಜ್ಯದಲ್ಲಿ 0.00% ಮರಣ ಪ್ರಮಾಣ ಮುಂದುವರಿದಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 40,057 ಮರಣ ಪ್ರಕರಣ ಪತ್ತೆಯಾಗಿದೆ. ರಾಜ್ಯದ ಪಾಸಿಟಿವಿಟಿ ರೇಟ್ 0.52% ಮತ್ತು ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,438ಕ್ಕೆ ತಲುಪಿದೆ. ಒಟ್ಟು 62 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಎಸ್ಟೋನಿಯಾ ದೇಶದ ಜೊತೆ ಒಡಂಬಡಿಕೆ: ಸುಧಾಕರ್ಈವರೆಗೆ ರಾಜ್ಯದಲ್ಲಿ ಒಟ್ಟು 39,46,176 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,04,639 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈವರೆಗೆ ಕೊರೊನಾದಿಂದಾಗಿ ರಾಜ್ಯದಲ್ಲಿ 40,057 ಮಂದಿ ಮರಣ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 73,821 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 10,423 ಸ್ಯಾಂಪಲ್ (ಆರ್‌ಟಿಪಿಸಿಆರ್ 3,564 + 777 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಸಪ್ತಪದಿ ಯೋಜನೆಗೆ ಮರುಚಾಲನೆ ನೀಡಿದ ಶಶಿಕಲಾ ಜೊಲ್ಲೆಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬೆಂಗಳೂರು ನಗರ 46, ಬೆಂಗಳೂರು ನಗರ 1, ಚಿತ್ರದುರ್ಗ 1, ದಕ್ಷಿಣಕನ್ನಡ 1, ಧಾರವಾಡ 4, ಮೈಸೂರು 2 ಪಾಸಿಟಿವ್ ಕೇಸ್‍ಗಳನ್ನು ಹೊರತು ಪಡಿಸಿ ಉಳಿದ 24 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ.






 Advertisement 




Sign in to your account
Username or Email Address


Password

 Remember Me


