ಕನ್ನಡ ಚಿತ್ರರಂಗದ ಪ್ರೈಡ್ ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ಚಿತ್ರ ರಿಲೀಸ್‍ಗೆ ಕೆಲವೇ ಗಂಟೆಗಳು ಬಾಕಿ. ಈಗಾಗಲೇ ರಾಕಿಭಾಯ್ ಎಂಟ್ರಿಗೆ ಕೌಂಟ್‍ಡೌನ್ ಶುರುವಾಗಿದೆ. `ಕೆಜಿಎಫ್ 2′ ಸಿನಿಮಾದ ಎರಡು ಸಾಂಗ್‍ಗಳು ರಿಲೀಸ್ ಆಗಿ ಧೂಳೆಬ್ಬಿಸಿವೆ. ‘ತೂಫಾನ್’ ಎಬ್ಬಿಸಿದ ಮೇಲೆ ‘ಗಗನ ನೀ’ ಅಂತಾ ಎಮೋಷನ್ ಹಾಡಿನಿಂದ ಸಿನಿರಸಿಕರ ಗಮನ ಸೆಳೆದಿತ್ತು. ಚಿತ್ರದ ಮತ್ತೊಂದು ಪವರ್‍ಫುಲ್ ಸಾಂಗ್ ರಿಲೀಸ್ ಆಗಿದೆ. ಈ ಹಾಡಿನ ಬೀಟು ಅಭಿಮಾನಿಗಳ ಎದೆಯಲ್ಲಿ ತಮ್ಮಟೆ ಬಾರಿಸುತ್ತಿದೆ. ಇದನ್ನೂ ಓದಿ : ವಿಜಯ್ ಕಿರಗಂದೂರು ತವರಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದ ಕೆಜಿಎಫ್ ಟೀಂಮಾಸ್ಟರ್‍ಮೈಂಡ್ ಪ್ರಶಾಂತ್ ನೀಲ್ ನಿರ್ದೇಶನದ `ಕೆಜಿಎಫ್ 2′ ಚಿತ್ರದ 3ನೇ ಲಿರಿಕಲ್ ಸಾಂಗ್ ‘ಸುಲ್ತಾನ್’ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡ್ತಿದೆ. ರಣಧೀರನ ಖಡಕ್ ಎಂಟ್ರಿ ಮೈನವಿರೆಳಿಸುತ್ತಿದೆ. ಜೊತೆ ರವಿ ಬಸ್ರೂರ್ ಅವರ ಪವರ್‍ಫುಲ್ ಸಾಹಿತ್ಯ ಸಿನಿಪ್ರಿಯರನ್ನು ಇಂಪ್ರೈಸ್ ಮಾಡಿದೆ. ಯಶ್ ಗತ್ತು ಸುಲ್ತಾನ್ ಎಂಟ್ರಿಯಲ್ಲಿ ರಾರಾಜಿಸುತ್ತಿದೆ. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2ರಾಕಿಭಾಯ್ ಖಡಕ್ ಎಂಟ್ರಿ, ಪವರ್‍ಫುಲ್ ಸಾಹಿತ್ಯ, ಚಿತ್ರದ ಪ್ಲಸ್ ಪಾಯಿಂಟ್ ಆಗಿದೆ. ಚಿತ್ರದ ಸುಲ್ತಾನ್ ಸಾಂಗ್ ಐದು ಭಾಷೆಯಲ್ಲಿ ರಿಲೀಸ್ ಆಗಿ ಭಾರೀ ಸೌಂಡ್. ಕೆಜಿಎಫ್ 2 ಚಿತ್ರ ಇದೇ ಎಪ್ರಿಲ್ 14ಕ್ಕೆ ತೆರೆಗೆ ಅಬ್ಬರಿಸುತ್ತಿದೆ. ಚಿತ್ರದಲ್ಲಿ ಯಶ್‍ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದು, ಪ್ರಮುಖ ಪಾತ್ರದಲ್ಲಿ ಅರ್ಚನಾ ಜೋಯಿಸ್. ರವೀನಾ ಟಂಡನ್, ಸಂಜಯ್ ದತ್, ವಸಿಷ್ಠ ಸಿಂಹ, ಪ್ರಕಾಶ್ ರಾಜ್ ಮಾಳವಿಕಾ ನಟಿಸಿದ್ದಾರೆ. ತೂಫಾನ್ ನಂತರ ಸುಲ್ತಾನ್ ಸಾಂಗ್ ಕೇಳಿನ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ರಾಕಿಭಾಯ್‍ನ ಕಣ್ತುಂಬಿಕೊಳ್ಳಲು ಕಾಯ್ತಿದ್ದಾರೆ.Sign in to your account
Username or Email Address


Password

 Remember Me


