ಸ್ಯಾಂಡಲ್‌ವುಡ್ ಲವ್ಲಿ ಸ್ಟಾರ್ ಪ್ರೇಮ್ `ಪ್ರೇಮಂ ಪೂಜ್ಯಂ’ ಚಿತ್ರದ ನಂತರ ಮತ್ತೆ ಸುದ್ದಿಯಲ್ಲಿದ್ದಾರೆ. ಹೊಸ ಸಿನಿಮಾದಲ್ಲಿ ಭಿನ್ನ ಪಾತ್ರದ ಮೂಲಕ ರಂಜಿಸಲು ಅವರು ಸಜ್ಜಾಗಿದ್ದು, ಈ ಹೊಸ ಚಿತ್ರಕ್ಕೆ ಡೈರೆಕ್ಟರ್ ಗುರು ಸಾವನ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.‌`ಪ್ರೇಮಂ ಪೂಜ್ಯಂ’ ಸೂಪರ್ ಸಕ್ಸಸ್ ನಂತರ ಡಿಫರೆಂಟ್ ಗೆಟಪ್‌ನಲ್ಲಿ ರಂಜಿಸಲು ಲವ್ಲಿ ಸ್ಟಾರ್ ಪ್ರೇಮ್ ಸಜ್ಜಾಗಿದ್ದು, ಮನೆಗಳಿಗೆ ಹೋಗಿ ಪೋಸ್ಟ್ ತಲುಪಿಸುವ ಪೋಸ್ಟ್‌ಮ್ಯಾನ್ ಪಾತ್ರದಲ್ಲಿ ನಟ ಪ್ರೇಮ್ ಕಾಣಿಸಿಕೊಳ್ಳುತ್ತಿದ್ದಾರೆ. ಮಲೆನಾಡಿನಲ್ಲಿ ನಡೆಯುವ ಭಿನ್ನ ಕಥೆಯಲ್ಲಿ ಅವರು ರೆಟ್ರೋ ಸ್ಟೈಲಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಹಳೆಯ ಕಾಲದಲ್ಲಿ ಸಂಬಂಧಗಳನ್ನು ಬೆಸೆಯುವ ಕೊಂಡಿಯಾಗಿದ್ದೇ ಪತ್ರಗಳು, ಪತ್ರ ಸಂವಹನದ ಕಾಲದಲ್ಲಿ ಸಂಬಂಧಗಳು ಹೇಗಿದ್ದವು ಅಂತಾ ತೆರೆಯ ಮೇಲೆ ತೋರಿಸಲು ಹೊರಟಿದ್ದಾರೆ ನಿರ್ದೇಶಕ ಗುರು ಸಾವನ್. ಇದನ್ನು ಓದಿ:ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ ಕೆಜಿಎಫ್ 2 ‘ಸುಲ್ತಾನ್’ ಸಾಂಗ್ನಟ ಪ್ರೇಮ್ 20 ವರ್ಷದ ಕೆರಿಯಲ್‌ನಲ್ಲಿ ಎಂದೂ ಮಾಡಿರದ ಪಾತ್ರದಲ್ಲಿ ಕಾಣಸಿಕೊಳ್ಳಲು ತೆರೆಮರೆಯಲ್ಲಿ ಈಗಿಂದಲೇ ಭರ್ಜರಿ ತಯಾರಿ ನಡೆಸಿದ್ದು, ಚಿತ್ರದ ಪ್ರಮುಖ ಪಾತ್ರದಲ್ಲಿ `ಅಮೆರಿಕಾ ಅಮೆರಿಕಾ’ ಖ್ಯಾತಿಯ ಅಕ್ಷಯ್ ಆನಂದ್ ನಟಿಸಿಲಿದ್ದಾರೆ. ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವುದರ ಜೊತೆಗೆ ಗಾಯಕಿ ಅನನ್ಯಾ ಭಟ್ ಡಿಫರೆಂಟ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.Sign in to your account
Username or Email Address


Password

 Remember Me


