ಚಾಮರಾಜನಗರ: ಗಸ್ತಿನಲ್ಲಿದ್ದ ವೇಳೆ ಕಾರು ಡಿಕ್ಕಿಯಾಗಿ ಕಾನ್‍ಸ್ಟೇಬಲ್ ಒಬ್ಬರು ಸಾವನ್ನಪ್ಪಿದ್ದು, ಎಎಸ್‍ಐಗೆ ಗಂಭೀರ ಗಾಯವಾದ ಘಟನೆ ಚಾಮರಾಜನಗರ ತಾಲೂಕಿನ ಕೆಂಪನಪುರ ಸಮೀಪ ಮಧ್ಯರಾತ್ರಿ ನಡೆದಿದೆ.ಸಂತೇಮರಹಳ್ಳಿ ಪೊಲೀಸ್ ಠಾಣೆ ಕಾನ್‍ಸ್ಟೇಬಲ್ ಪ್ರಸಾದ್ ಮೃತ ದುರ್ದೈವಿ. ಎಎಸ್‍ಐ ರಾಜು ಅವರಿಗೆ ಗಂಭೀರ ಗಾಯಗಳಾಗಿದ್ದು, ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ವಿದ್ಯುತ್ ತಗುಲಿ ಅಣ್ಣ, ತಮ್ಮ ಧಾರುಣ ಸಾವುಕೆಂಪನಪುರ ಗ್ರಾಮದ ಸಮೀಪ ಗಸ್ತು ನಡೆಸುತ್ತಿರಬೇಕಾದರೇ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಸದ್ಯ ಕಾರಿನ ನೋಂದಣಿ ಸಂಖ್ಯೆ ಪತ್ತೆ ಹಚ್ಚಲಾಗಿದೆ. ಈ ಸಂಬಂಧ ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


