ದಕ್ಷಿಣ ಭಾರತದ ಕನ್ನಡದ ನಟಿ ಮಮತಾ ರಾವುತ್ ಮೇ 11ರಂದು ವೈದ್ಯ ಡಾ.ಸುರೇಶ್ ಜತೆ ಸಪ್ತಪದಿ ತುಳಿಯಲಿದ್ದಾರೆ. ಅದಕ್ಕೂ ಮುನ್ನ ಸ್ನೇಹಿತೆಯರ ಜೊತೆ ಖಾಸಗಿ ರೆಸಾರ್ಟ್ ನಲ್ಲಿ ಅವರು ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ. ಈ ಬ್ಯಾಚುಲರ್ ಪಾರ್ಟಿಯಲ್ಲಿ ಬಾಲ್ಯದ ಗೆಳೆತಿಯರು, ಸಿನಿಮಾ ರಂಗದ ಫ್ರೆಂಡ್ಸ್ ಕೂಡ ಭಾಗಿಯಾಗಿದ್ದಾರೆ. ಇದನ್ನೂ ಓದಿ : ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2ಮೊನ್ನೆಯಷ್ಟೇ ಈ ಜೋಡಿಯ ನಿಶ್ಚಿತಾರ್ಥ ನಡೆದಿದದ್ದು ಕುಟುಂಬದ ನಿಶ್ಚಿಯದಂತೆ ಮೇ 10 ಮತ್ತು 11 ರಂದು ಈ ಜೋಡಿ ಹೊಸ ಜೀವನಕ್ಕೆ ಕಾಲಿಡಲಿದೆ. ‘ಇದೊಂದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ಡಾ.ಸುರೇಶ್ ಕೋಟಿಯಾನ್ ಕುಟುಂಬ ಮತ್ತು ನಮ್ಮ ಕುಟುಂಬ ಸೇರಿ ಈ ಮದುವೆಯನ್ನು ನಿಶ್ಚಿಯ ಮಾಡಿದೆ. ಕುಟುಂಬದ ನಿರ್ಧಾರದಂತೆ ನಾವಿಬ್ಬರೂ ಹೊಸ ಬದುಕಿಗೆ ಕಾಲಿಡುತ್ತಿದ್ದೇವೆ. ಒಳ್ಳೆಯ ಹುಡುಗ, ಸಮಾಜದ ಬಗ್ಗೆ ಅವರಿಗೆ ಕಾಳಜಿ ಇದೆ. ಇವೆಲ್ಲ ಕಾರಣಕ್ಕೆ ಸುರೇಶ್ ನನಗೆ ಇಷ್ಟವಾದರು’ ಎಂದರು. ಇದನ್ನೂ ಓದಿ:  ಕೊನೆಗೂ ಮದುವೆಯ ವಿಚಾರ ಖಚಿತಪಡಿಸಿದ ಆಲಿಯಾ!ಡಾ. ಸುರೇಶ್ ಮಂಗಳೂರು ಮೂಲದವರು. ಕರ್ನಾಟಕ ಹೆಲ್ತ್ ಡಿಪಾರ್ಟಮೆಂಟ್ ನಲ್ಲಿ ಅವರು ಮನಶಾಸ್ತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಕೆನಡಾದಲ್ಲಿ ಪಿಎಚ್ಡಿ ಮಾಡಿರುವ ಸುರೇಶ್, ಎರಡೆರಡು ಸಂಶೋಧನಾ ಪ್ರಬಂಧ ಮಂಡಿಸಿರುವುದು ವಿಶೇಷ. ಈ ಜೋಡಿಯ ವಿವಾಹವು ಬೆಂಗಳೂರಿನಲ್ಲಿ ನಡೆಯಲಿದ್ದು, ಸಿನಿಮಾ ರಂಗದ ಅನೇಕ ಗಣ್ಯರು ವಿವಾಹ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ.ಮಮತಾ ಸಹ ನಟಿಯಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟವರು. ಕಾಮಿಡಿ ಪಾತ್ರಗಳಲ್ಲಿ ಮಿಂಚಿದರು. ಆನಂತರ ನಾಯಕಿಯಾಗಿ ಅನೇಕ ಚಿತ್ರಗಳನ್ನು ಮಾಡಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ತೆಲುಗು ಮತ್ತು ತಮಿಳಿನಲ್ಲೂ ಇವರು ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.Sign in to your account
Username or Email Address


Password

 Remember Me


