ಬಾಲಿವುಡ್ ನ ಪ್ರಣಯ ಪಕ್ಷಿಗಳಾದ ಆಲಿಯಾ ಭಟ್ ಮತ್ತು ರಣವೀರ್ ಕಪೂರ್ ಎಪ್ರಿಲ್ 15 ರಂದು ಹಸಮಣೆ ಏರಲಿದ್ದಾರೆ. ನಾಳೆಯಿಂದಲೇ ಮದುವೆಗೆ ಸಂಬಂಧಿಸಿದ ಕಾರ್ಯಗಳು ನಡೆಯುತ್ತಿದ್ದು, ಬಾಲಿವುಡ್ ನಲ್ಲಿ ಈ ಜೋಡಿಯ ಮದುವೆ ಗಪ್ ಚುಪ್ ಎನ್ನುವಂತಾಗಿದೆ. ಇದನ್ನೂ ಓದಿ : ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2ಮಾಧ್ಯಮಗಳಲ್ಲಿ ಮದುವೆ ಬಗ್ಗೆ ಪ್ರಸ್ತಾಪವಾಗುತ್ತಿದ್ದರೂ, ಅಧಿಕೃತವಾಗಿ ಬಾಲಿವುಡ್ ಅನೇಕ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಇವರ ಮದುವೆ ಮಾಹಿತಿ ಗೊತ್ತಿಲ್ಲ. ಕೇವಲ 28 ಜನರಿಗೆ ಮಾತ್ರ ಮದುವೆಗೆ ಆಹ್ವಾನ ನೀಡಲಾಗಿದೆ ಎನ್ನುವ ಸುದ್ದಿಯಿದೆ. ಅದೂ ಖಚಿತವಾಗಿಲ್ಲ. ‘ನಾವು ಮದುವೆ ಆಗುತ್ತಿದ್ದೇವೆ’ ಎಂದು ಈ ಜೋಡಿ ಹೇಳಿದ್ದರೂ, ಮದುವೆ ಕುರಿತಾದ ಯಾವುದೇ ಮಾಹಿತಿಯನ್ನು ಎರಡೂ ಕುಟುಂಬಗಳು ಬಿಟ್ಟು ಕೊಟ್ಟಿಲ್ಲ. ಹಾಗಾಗಿ ಮದುವೆಯ ಫೋಟೋ ಆಚೆ ಬಂದ ನಂತರವೇ ಅಧಿಕೃತಗೊಳ್ಳಲಿದೆ. ಹಾಗಾಗಿ ಕೆಲವರಿಗೆ ಮದುವೆ ವಿಚಾರವೇ ಗೊತ್ತಿಲ್ಲ. ಇದನ್ನೂ ಓದಿ:  ಕೊನೆಗೂ ಮದುವೆಯ ವಿಚಾರ ಖಚಿತಪಡಿಸಿದ ಆಲಿಯಾ!ಸದ್ಯ ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ‘ಕೆಜಿಎಫ್ 2’ ಸಿನಿಮಾದ ಪ್ರಚಾರದ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪ್ರಚಾರ ಕೈಗೊಂಡ ಸಂದರ್ಭದಲ್ಲಿ ಮಾಧ್ಯಮಗಳು ಆಲಿಯಾ-ರಣಬೀರ್ ಮದುವೆ ಬಗ್ಗೆ ಸಂಜಯ್ ದತ್ ಅವರನ್ನು ಪ್ರಶ್ನೆ ಮಾಡಿವೆ. ಅದಕ್ಕೆ ಅಚ್ಚರಿ ಎನ್ನುವಂತೆ ಪ್ರತಿಕ್ರಿಯೆ ನೀಡಿದ್ದಾರೆ ಸಂಜಯ್ ದತ್. ‘ಅವರಿಬ್ಬರೂ ಮದುವೆ ಆಗುತ್ತಿದ್ದಾರಾ? ಒಂದು ವೇಳೆ ಅವರು ಮದುವೆ ಆಗುತ್ತಿದ್ದರೆ, ಅವರಿಗೆ ಒಳ್ಳೆಯದಾಗಲಿ. ಆಲಿಯಾ ನನ್ನ ಮುಂದೆ ಬೆಳೆದಿರುವ ಹುಡುಗಿ. ಆಕೆಗೂ ಒಳ್ಳೆದಾಗಲಿ’ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಬೆಂಕಿ ಬಿರುಗಾಳಿ ಎಬ್ಬಿಸಿದ ಕಂಗನಾ ಶೋ: ಪತಿ ಜತೆ ಮಲಗಿದವರ ಲಿಸ್ಟ್ ಹೇಳಿದ ನಟಿ ಮಂದರಾಆಲಿಯಾ ಭಟ್ ಮತ್ತು ರಣಬೀರ್ ಮದುವೆ ಇಡೀ ಬಾಲಿವುಡ್ ನಲ್ಲೇ ಸೌಂಡ್ ಮಾಡುತ್ತಿದ್ದರೂ, ಈ ಕೆಜಿಎಫ್ 2 ಅಧೀರನಿಗೆ ಮದುವೆ ವಿಚಾರವೇ ಗೊತ್ತಿಲ್ಲವಾ? ಎನ್ನುವ ಅನುಮಾನ ಮಾಧ್ಯಮಗಳಿಗೆ ಮೂಡಿತ್ತು. ಸುದ್ದಿ ಗೊತ್ತಿದ್ದರೆ, ಸಂಜಯ್ ದತ್ ಅವರ ಉತ್ತರವೇ ಬೇರೆಯಾಗಿರುತ್ತಿತ್ತು.Sign in to your account
Username or Email Address


Password

 Remember Me


