ದಕ್ಷಿಣದ ಹೆಸರಾಂತ ನಟಿ, ಕನ್ನಡ ಮೂಲದ ಪೂಜಾ ಹೆಗ್ಡೆ ಇದೀಗ ತಮಿಳು ಮತ್ತು ತೆಲುಗು ಸಿನಿಮಾ ರಂಗದ ಬಹುಬೇಡಿಕೆಯ ನಟಿ. ಪ್ರಭಾಸ್ ಜತೆ ನಟಿಸಿದ ರಾಧೆ ಶ್ಯಾಮ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷಿತ ಗೆಲುವು ಸಿಗದೇ ಇದ್ದರೂ, ಪೂಜಾ ಮಾತ್ರ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಅಲ್ಲದೇ, ಮಾದಕ ಗೀತೆಗಳಿಗೆ ಹೆಜ್ಜೆ ಹಾಕಲು ಕೋಟಿ ಕೋಟಿ ಲೆಕ್ಕದಲ್ಲಿ ಸಂಭಾವನೆ ಕೇಳುತ್ತಿದ್ದಾರೆ ಎನ್ನಲಾಗುತ್ತಿದೆ.ಸಿನಿಮಾವೊಂದರಲ್ಲಿ ನಟಿಸಲು  ಪೂಜಾ ಅಂದಾಜು ಮೂರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನುವ ಸುದ್ದಿಯಿದೆ. ಅದರಲ್ಲೂ ಸೂಪರ್ ಸ್ಟಾರ್ ಗಳಿರುವ ಚಿತ್ರಕ್ಕೆ ಸಂಭಾವನೆ ಹೆಚ್ಚು ಕಡಿಮೆ ಆಗುತ್ತಂತೆ. ಆದರೆ, ಐಟಂ ಹಾಡಿಗೆ ಹೆಜ್ಜೆ ಹಾಕಲು ಮಾತ್ರ ಬರೋಬ್ಬರಿ ಒಂದು ಕೋಟಿ ರೂಪಾಯಿ ಕೇಳುತ್ತಾರೆ ಎನ್ನುತ್ತಿವೆ ಆಪ್ತ ಮೂಲಗಳು. ಇದನ್ನೂ ಓದಿ:  ಕೊನೆಗೂ ಮದುವೆಯ ವಿಚಾರ ಖಚಿತಪಡಿಸಿದ ಆಲಿಯಾ!ಸದ್ಯ ಪೂಜೆ ರಾಮ್ ಚರಣ್ ತೇಜ್ ಮತ್ತು ಚಿರಂಜೀವಿ ನಟನೆಯ ಆಚಾರ್ಯ ಚಿತ್ರದಲ್ಲಿ ನಟಿಸಿದ್ದಾರೆ. ಜತೆಗೆ ತೆಲುಗಿನ ‘ಎಫ್ 3’ ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಲು ಒಪ್ಪಿಕೊಂಡಿದ್ದಾರೆ. ಈ ಹಾಡಿಗೆ ಅವರು ಪಡೆದಿರುವ ಸಂಭಾವನೆ ಕೋಟಿ ಎನ್ನಲಾಗುತ್ತಿದೆ. ಕೋಟಿ ಲೆಕ್ಕದ ಹಾಡು ಹೇಗಿರಲಿದೆ ಎನ್ನುವ ಚರ್ಚೆ ಕೂಡ ತೆಲುಗು ಸಿನಿಮಾ ರಂಗದಲ್ಲಿ ನಡೆದಿದೆ. ಇದನ್ನೂ ಓದಿ: ಬೆಂಕಿ ಬಿರುಗಾಳಿ ಎಬ್ಬಿಸಿದ ಕಂಗನಾ ಶೋ: ಪತಿ ಜತೆ ಮಲಗಿದವರ ಲಿಸ್ಟ್ ಹೇಳಿದ ನಟಿ ಮಂದರಾಸ್ಟಾರ್ ನಟಿಯರು ಮಾದಕ ಗೀತೆಗಳಿಗೆ ಹೆಜ್ಜೆ ಹಾಕಿದರೆ, ಸಿನಿಮಾಗೆ ಪ್ರಚಾರ ಮತ್ತು ಬಾಕ್ಸ್ ಆಫೀಸಿನಲ್ಲಿ ಗಳಿಕೆಯೂ ಹೆಚ್ಚಾಗಲಿದೆ ಎನ್ನುವ ಲೆಕ್ಕಾಚಾರವಿದೆ. ಪುಷ್ಪಾ ಸಿನಿಮಾದಲ್ಲಿ ಸಮಂತಾ ಕುಣಿದಿದ್ದೇ ತಡ, ಸಿನಿಮಾದ ನಾಯಕಿಗಿಂತಲೂ ಸಮಂತಾಗೆ ಹೆಚ್ಚಿನ ಮನ್ನಣೆ ಸಿಕ್ಕಿತು. ಮತ್ತು ಪ್ರಚಾರವೂ ಜೋರಾಯಿತು. ಹೀಗಾಗಿ ಐಟಂ ಸಾಂಗ್ ಗಳಿಗೆ ಸ್ಟಾರ್ ನಟಿಯರ ಬೆನ್ನು ಬಿದ್ದಿದ್ದಾರೆ ನಿರ್ದೇಶಕರು.Sign in to your account
Username or Email Address


Password

 Remember Me


