ಕೊಪ್ಪಳ: ನಾನು ಲೋಕ ಕಲ್ಯಾಣಕ್ಕಾಗಿ ಹನುಮ ಮಾಲೆ ಹಾಕಿದ್ದೇನೆ. ನನ್ನ ಜೊತೆಗೆ ಸುಮಾರು 50 ರಿಂದ 60 ಜನರು ಹನುಮ ಮಾಲೆ ಧರಿಸಿದ್ದಾರೆ. ನಾನು ರಾಜಕಾರಣಕ್ಕಾಗಿ ಹನುಮ ಮಾಲೆ ಹಾಕಿಲ್ಲ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.ಕೊಪ್ಪಳ ಜಿಲ್ಲೆ ಗಂಗಾವತಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಹನುಮ ಮಾಲೆ ಧರಿಸಿದ ಬಳಿಕ ಮಾತನಾಡಿದ ತಂಗಡಗಿ, ನಾನು ಮೊದಲಿನಿಂದಲೂ ಹನುಮಂತನ ಭಕ್ತ. ಈ ಮೊದಲು ಅಯ್ಯಪ್ಪ ಮಾಲೆ ಹಾಕುತ್ತಿದ್ದೆ. ಈ ಬಾರಿ ಹನುಮ ಮಾಲೆ ಹಾಕಿದ್ದೇನೆ. ಹನುಮಂತನ ಜನ್ಮ ಸ್ಥಳದಲ್ಲೇ ಇರುವುದರಿಂದ ಮಾಲೆ ಹಾಕಿದ್ದೇನೆ. ಇದರಲ್ಲಿ ರಾಜಕಾರಣ ಎಳೆದು ತರುವ ಪ್ರಶ್ನೆಯೇ ಇಲ್ಲ ಎಂದರು. ಇದನ್ನೂ ಓದಿ: ಕೆಪಿಎಸ್‍ಸಿ ಸದಸ್ಯರಾಗಿ ಬಿ.ವಿ ಗೀತಾ ನೇಮಕಕೇಸರಿ ಕಂಡರೆ ಮಾಜಿ ಸಿಎಂ ಸಿದ್ದರಾಮಯ್ಯ ಸಿಡಿಮಿಡಿ ಗೊಳ್ಳುವ ವಿಚಾರದ ಬಗ್ಗೆ ಮಾತನಾಡಿ, ಸಿದ್ದರಾಮಯ್ಯ ಕೂಡ ಒಬ್ಬ ಹಿಂದೂ. ಅವರಿಗೆ ಹಿಂದೂ ಧರ್ಮದ ಮೇಲೆ ಯಾವುದೇ ಸಿಟ್ಟಿಲ್ಲ. ಅವರು ತಮ್ಮ ಊರಿನಲ್ಲಿ ರಾಮ ಮಂದಿರ ಕಟ್ಟಿದ್ದಾರೆ. ನಾನು ಕೂಡಾ ಅವರ ಶಿಷ್ಯ. ಈಗ ನಾನು ಕೇಸರಿ ಬಟ್ಟೆ ಹಾಕಿದ್ದೇನೆ. ಸಿದ್ದರಾಮಯ್ಯ ಕೋಮು ವಾದದ ವಿರೋಧಿಗಳು ಅಷ್ಟೇ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಉತ್ತರಿಸಿದರು. ಇದನ್ನೂ ಓದಿ: ಸದ್ಯವೇ ರಿಕ್ಕಿಕೇಜ್ ಸಂಗೀತ ನಿರ್ದೇಶನದಲ್ಲಿ ಉತ್ತಮ ಚಿತ್ರ: ಲಹರಿ ವೇಲು Sign in to your account
Username or Email Address


Password

 Remember Me


