ಬೆಂಗಳೂರು: ಹಿಜಬ್, ಹಲಾಲ್ ಕಟ್, ಜಟ್ಕಾ ಕಟ್, ಆಜಾನ್, ಮುಸ್ಲಿಂ ವ್ಯಾಪಾರಕ್ಕೆ ನಿರ್ಬಂಧ ಆಯ್ತು ಇದೀಗ ಏರಿಯಾ ರಸ್ತೆಗಳ ಹೆಸರಿಗೂ ಬ್ರೇಕ್ ಹಾಕಲು ಒತ್ತಡ ಕೇಳಿಬಂದಿದೆ.ನಗರಕ್ಕೆ ಯಾವುದೇ ಕೊಡುಗೆ ನೀಡದ ವ್ಯಕ್ತಿಗಳ ಹೆಸರನ್ನು ಬದಲಾಯಿಸುವಂತೆ ಆಂದೋಲನ ಶುರುವಾಗಿದೆ. ಬೆಂಗಳೂರಿನ ರಸ್ತೆಗಳು, ಏರಿಯಾ ಹೆಸರು ಬದಲಾಯಿಸುವಂತೆ ಬಿಜೆಪಿ ಮುಖಂಡರು ಅಭಿಯಾನ ಆರಂಭಿಸಿದ್ದಾರೆ. ಇದನ್ನೂ ಓದಿ: ತಾಕತ್ತಿದ್ರೆ ಎಲ್ಲಾ ಮುಸ್ಲಿಂ ಮಹಿಳೆಯರಿಗೂ ಹಿಜಬ್ ತೊಡಿಸಿ – RSS ಮುಖಂಡ ಡಾ.ಹಣಮಂತ ಮಳಲಿ ಸವಾಲುಹಿಂದುಯೇತರ ರಸ್ತೆಗಳು, ಏರಿಯಾಗಳ ಹೆಸರು ಬದಲಾಯಿಸುವಂತೆ ಬಿಬಿಎಂಪಿ ಅಯುಕ್ತರಿಗೆ ಪತ್ರ ಬರೆಯಲಾಗಿದೆ. ನಗರದಲ್ಲಿ ಇರುವ ವಿಕ್ಟೋರಿಯ ರಸ್ತೆ, ಟಿಪ್ಪು ಸುಲ್ತಾನ್ ರಸ್ತೆ, ಟ್ಯಾನಿ ರಸ್ತೆ ಸೇರಿದಂತೆ ಸುಮಾರು 300ರಕ್ಕೂ ಹೆಚ್ಚು ರಸ್ತೆಗಳು ಹಾಗೂ ಬಿಸ್ಮಿಲ್ ನಗರ, ಇಲಿಯಾಸ್ ನಗರ, ಸುಲ್ತಾನ್ ಪಾಳ್ಯ, ಪ್ರೇಜರ್ ಟೌನ್, ಕಾಕ್ಸ್ ಟೌನ ಸೇರಿದಂತೆ ನೂರಾರು ಏರಿಯಾಗಳ ಹೆಸರು ಮರುನಾಮಕಾರಣಕ್ಕೆ ಅಭಿಯಾನ ಆರಂಭವಾಗಿದೆ.ಬೆಂಗಳೂರಿನ ಟಿಪ್ಪುಸುಲ್ತಾನ್ ರಸ್ತೆಯನ್ನೂ ಮರು ನಾಮಕಾರಣ ಮಾಡುವಂತೆ ಪಾಲಿಕೆ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಬೆಂಗಳೂರಿಗೆ ಹೆಸರು ತಂದ ಗಣ್ಯ ವ್ಯಕ್ತಿಗಳ ಹೆಸರು ನಾಮಕರಣಕ್ಕೆ ಬಿಜೆಪಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎನ್.ಆರ್. ರಮೇಶ್ ಅವರು ಆಯುಕ್ತರ ಬಳಿ ಮನವಿ ಮಾಡಿಕೊಂಡಿದ್ದಾರೆ.ಸದ್ಯ ಬೆಂಗಳೂರಿನ ಮುಖ್ಯ ರಸ್ತೆಗಳಲ್ಲಿ ಮುಸ್ಲಿಂ ಹೆಸರು ಬದಲಾವಣೆಗೆ ಸಿದ್ಧತೆ ನಡೆಸಲಾಗುತ್ತಿದೆ. 198 ವಾರ್ಡ್‍ಗಳಲ್ಲಿನ ಮುಸ್ಲಿಂ ರಸ್ತೆಗಳ ಹೆಸರು ಸಂಗ್ರಹ ಮಾಡಲಾಗಿದೆ. ಹಿಂದೂ ಸಂಘಟನೆಗಳು ಆರ್‍ಟಿಐ ಮೂಲಕ ಮಾಹಿತಿ ಕಲೆಹಾಕುತ್ತಿದ್ದು, 100ಕ್ಕೂ ಹೆಚ್ಚು ರಸ್ತೆಗಳಿಗೆ ಮುಸ್ಲಿಂ ಸಮಾಜ ಸೇವಕರ ಹೆಸರಿದೆ. ಮುಸ್ಲಿಮರ ಬದಲಿಗೆ ಹಿಂದೂ ಸಾಧಕರ ಹೆಸರಿಡಲು ಒತ್ತಾಯ ಮಾಡಲಾಗುತ್ತಿದ್ದು, ಹೊಸ ಅಭಿಯಾನಕ್ಕೆ ಪಾಲಿಕೆ ಸೊಪ್ಪು ಹಾಕುತ್ತಾ ಸರ್ಕಾರ ಎಂಬುದನ್ನು ಕಾದುನೋಡಬೇಕಿದೆ.Sign in to your account
Username or Email Address


Password

 Remember Me


