ಚಂದನವನದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಎಂದರೆ ಕೆಜಿಎಫ್-2. ಈ ಸಿನಿಮಾ ವೀಕ್ಷಿಸಬೇಕು ಎಂದು ಭಾರತೀಯ ಚಿತ್ರತಂಡ ಮಾತ್ರವಲ್ಲ ವಿಶ್ವದಲ್ಲಿರುವ ಸಿನಿಪ್ರಿಯರು ಕಾಯುತ್ತಿದ್ದಾರೆ. ಕರ್ನಾಟಕದಲ್ಲಿ ಸಿನಿಮಾ ಬುಂಕಿಂಗ್ ಪ್ರಾರಂಭವಾಗಿದ್ದು, ಕನ್ನಡಿಗರು ಟಿಕೆಟ್ ಖರೀದಿಸಲು ಪ್ರಾರಂಭಿಸಿದ್ದಾರೆ.ಯಶ್ ಅಭಿಮಾನಿಗಳು ಪೈಪೋಟಿ ಮೇಲೆ ಟಿಕೆಟ್ ಖರೀದಿಸಲು ಮುಂದಾಗಿದ್ದಾರೆ. ಈ ನಡುವೆ ನಾವೇನು ಕಡಿಮೆ ಎಂಬಂತೆ ಅಖಿಲ ಕರ್ನಾಟಕ ಯಶ್ ಮಹಿಳಾ ಅಭಿಮಾನಿಗಳು ಸಹ ಕೆಜಿಎಫ್ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಬುಕ್ ಮಾಡಿದ್ದಾರೆ.  ಇದನ್ನೂ ಓದಿ: ಪತಿ ಹುಟ್ಟುಹಬ್ಬಕ್ಕೆ ಪ್ರಣೀತಾ ಗುಡ್‍ನ್ಯೂಸ್- ಫೋಟೋಶೂಟ್ ಜೊತೆ  ಪ್ರೆಗ್ನೆನ್ಸಿ  ರಿಪೋರ್ಟ್ಯಶ್ ಮಹಿಳಾ ಫ್ಯಾನ್ಸ್ ಗಳು ಬೆಂಗಳೂರಿನ ಕೆಂಗೇರಿಯ ವೆಂಕಟೇಶ್ವರ ಥೀಯೇಟರ್‌ನಲ್ಲಿ ಟಿಕೆಟ್ ಬುಕ್ ಮಾಡಿದ್ದಾರೆ. ಇದರಲ್ಲಿರುವ ವಿಶೇಷ ಸುದ್ದಿ ಎಂದರೆ ಮಹಿಳಾ ಅಭಿಮಾನಿಗಳು ತಮ್ಮ ನೆಚ್ಚಿನ ಹೀರೋ ಮೂವೀ ನೋಡಬೇಕೆಂದು 2,06,500 ರೂ. ಖರ್ಚು ಮಾಡಿ ಟಿಕೆಟ್ ಖರೀದಿಸಿದ್ದಾರೆ.ಈ ಮಹಿಳೆಯವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಒಟ್ಟಾಗಿ ಸೇರಿ ಟಿಕೆಟ್ ಖರೀದಿಸಿದ್ದಾರೆ. ಇವರು ಗುರುವಾರ ಬೆಳಗ್ಗೆ 10 ಗಂಟೆ ಶೋಗೆ ಟಿಕೆಟ್ ಖರೀದಿ ಮಾಡಿದ್ದಾರೆ. ಒಂದು ಟಿಕೆಟ್ 350 ರೂಪಾಯಿಯಂತೆ ಎರಡು ಲಕ್ಷ ಖರ್ಚು ಮಾಡಿದ್ದಾರೆ. ಇದನ್ನೂ ಓದಿ:  ಆಲಿಯಾ, ರಣಬೀರ್ ಮದುವೆ: 200 ಬೌನ್ಸರ್ ನೇಮಕ, ಹೊಸ ಮನೆ ಸೇರಿ RK ಸ್ಟುಡಿಯೋ ಫುಲ್ ಲಕಲಕಮಹಿಳಾ ಫ್ಯಾನ್ಸ್ ಗಳು ಥೀಯೇಟರ್ ಮುಂದೆ ಯಶ್ ಕಟೌಟ್ ನಿಲ್ಲಿಸಿ ಸಂಭ್ರಮಾಚರಣೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೆಜಿಎಫ್ ಚಾಪ್ಟರ್ 2 ರಿಲೀಸ್ ಫಿವರ್ ಜೋರಾಗ್ತಿದೆSign in to your account
Username or Email Address


Password

 Remember Me


