ಪ್ರಶಾಂತ್ ನೀಲ್ ನಿರ್ದೇಶನದ, ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ಚಿತ್ರ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಸಿನಿಮಾ ಬಿಡುಗಡೆಯ ಬೆನ್ನಲ್ಲೇ ಶ್ರೀಕ್ಷೇತ್ರ ಧರ್ಮಸ್ಥಳ ಸನ್ನಿಧಿಗೆ ನಟ ಯಶ್ ಚಿತ್ರತಂಡದೊಂದಿಗೆ ಭೇಟಿ ನೀಡಿದ್ದಾರೆ.ಯಶ್ ನಟನೆಯ ಬಹುನಿರೀಕ್ಷಿತ ಚಿತ್ರ `ಕೆಜಿಎಫ್ 2′ ಏಪ್ರಿಲ್ 14ಕ್ಕೆ ತೆರೆಗೆ ಅಬ್ಬರಿಸಲಿದೆ. ಈ ಹಿನ್ನಲೆಯಲ್ಲಿ ಯಶ್ ಮತ್ತು ಚಿತ್ರತಂಡ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ದೇವರ ದರ್ಶನ ಪಡೆದಿದ್ದಾರೆ. ಈ ವೇಳೆ ಮಾಧ್ಯಮಕ್ಕೆ ಮಾತಾನಾಡಿದ ನಟ ಯಶ್, ಸಿನಿಮಾ ರಿಲೀಸ್‌ಗೆ ರೆಡಿಯಿದೆ ಹಾಗಾಗಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿರುವುದಾಗಿ ಯಶ್ ತಿಳಿಸಿದ್ದಾರೆ.ನಾನು ಮತ್ತು ನಿರ್ಮಾಪರು ಒಳ್ಳೆಯ ಕೆಲಸ ಶುರು ಮಾಡುವಾಗ ದೇವರ ದರ್ಶನ ಪೆಡೆಯುತ್ತೇವೆ. ನಾವು ಪಟ್ಟ ಶ್ರಮಕ್ಕೆ ದೇವರ ಅನುಗ್ರಹ ಇರಬೇಕು. ಈ ವೇಳೆ ಮಂಜುನಾಥ ಸ್ವಾಮಿ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ದೇವರ ಅನುಗ್ರಹ ಪಡೆದಿದ್ದೇವೆ. ಇದನ್ನು ಓದಿ: ಹಿಜಬ್ ಹಾಕಿ ಅಚ್ಚರಿ ಮೂಡಿಸಿದ ನಟಿ ಶ್ರುತಿ ಈ ಸಂದರ್ಭದಲ್ಲಿ ಹೆಗ್ಗಡೆಯವರ ಜೊತೆ ಮಾತನಾಡಿ ಅವರ ಆಶೀರ್ವಾದ ಪಡೆದಿದ್ದೇವೆ. ಈ ಹಿಂದಿಯೂ ಸಾಕಷ್ಟು ಬಾರಿ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೇನೆ. ವೀರೇಂದ್ರ ಹೆಗ್ಗಡೆಯವರು ಹಿಂದಿನಿಂದಲೂ ನನ್ನ ಬೆಳವಣಿಗೆ ನೋಡ್ತಾ ಬಂದಿದ್ದಾರೆ. ಇಂದು ಹೆಗ್ಗಡೆಯವರು ಅವರು ಖುಷಿ ಪಟ್ಟು ನಮಗೆ, ನಮ್ಮ ಸಿನಿಮಾಗೆ ಆಶೀರ್ವಾದ ಮಾಡಿದ್ರು ಎಂದು ಯಶ್ ತಿಳಿಸಿದ್ದಾರೆ. ಜತೆಗೆ ಬುಕ್ಕಿಂಗ್ ಟಿಕೆಟ್ ಓಪನ್ ಆಗಿದೆ, ಎಲ್ಲರೂ ಸಿನಿಮಾ ಹರಿಸಿ ಎಂದು ಯಶ್ ಮಾತಾಡಿದ್ದಾರೆ.Sign in to your account
Username or Email Address


Password

 Remember Me


