ಕರ್ನಾಟಕದಲ್ಲಿ ಹಿಜಬ್ ಕಾವು ಜೋರಾಗಿದೆ. ಸರಕಾರ ಕೂಡ ಹಿಜಬ್ ಧರಿಸಿದ ಮಕ್ಕಳು ಶಾಲೆಗೆ ಬರಕೂಡದು ಎಂದು ಫಾರ್ಮಾನು ಹೊರಡಿಸಿದೆ. ಈ ಮಧ್ಯೆ ಬಿಜೆಪಿ ನಾಯಕಿ ಶ್ರುತಿ ಹಿಜಬ್ ಹಾಕಿ ಅಚ್ಚರಿ ಮೂಡಿಸಿದ್ದಾರೆ. ಹಾಗಂತ ಅವರು ಸುಖಾಸುಮ್ಮನೆ ಹಿಜಬ್ ಧರಿಸಿಲ್ಲ. ಸಿನಿಮಾವೊಂದರಲ್ಲಿ ಶ್ರುತಿ ಅವರು ಮುಸ್ಲಿಂ ಮಹಿಳೆಯ ಪಾತ್ರ ಮಾಡಿದ್ದಾರೆ. ಆ ಪಾತ್ರಕ್ಕಾಗಿ ಅವರು ಹಿಜಬ್ ಧರಿಸಿದ್ದಾರೆ. ಇದನ್ನು ಓದಿ: ‘ಅಣ್ಣಾವ್ರ ನಾಡು’: ಡಾ.ರಾಜ್ ಕುಮಾರ್ ನೆನೆದ ರಾಕಿಂಗ್ ಸ್ಟಾರ್ ಯಶ್ಶನಿವಾರವಷ್ಟೇ ಆ ಚಿತ್ರಕ್ಕೆ ಮುಹೂರ್ತವಾಗಿದೆ. ಈ ಸಂದರ್ಭದಲ್ಲಿ ಶ್ರುತಿ ಹಿಜಬ್ ಹಾಕಿಯೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಚಿತ್ರಕ್ಕೆ ‘13’ ಎಂದು ಹೆಸರಿಡಲಾಗಿದ್ದು, ರಾಘವೇಂದ್ರ ರಾಜ್ ಕುಮಾರ್ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಅದೂ ಬರೋಬ್ಬರಿ 25 ವರ್ಷಗಳ ಬಳಿಕೆ ಎನ್ನುವುದು ವಿಶೇಷ. ಇದನ್ನೂ ಓದಿ : ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆ ಕಾಣಿಸಿಕೊಂಡ ಮೇಘಾ ಶೆಟ್ಟಿಈ ಹಿಂದೆ ರಾಘವೇಂದ್ರ ರಾಜ್ ಕುಮಾರ್ ಮತ್ತು ಶ್ರುತಿ ‘ಗೆಲುವಿನ ಸರದಾರ’ ಚಿತ್ರದಲ್ಲಿ ಇಪ್ಪತ್ತೈದು ವರ್ಷಗಳ ಹಿಂದೆ ತೆರೆ ಹಂಚಿಕೊಂಡಿದ್ದರು. ಆನಂತರ ಇಬ್ಬರೂ ಒಟ್ಟಿಗೆ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಮತ್ತೆ ಅಂಥದ್ದೊಂದು ಘಳಿಗೆ ಕೂಡಿ ಬಂದಿದೆ. ಹಿಂದೂ ಹುಡುಗ, ಮುಸ್ಲಿಂ ಹುಡುಗಿಯ ಸುತ್ತ ಹೆಣೆದಿರುವ ಕಥಾ ಹಂದರ ಸಿನಿಮಾದಲ್ಲಿದ್ದು, ನರೇಂದ್ರ ಬಾಬು ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದೆ. ಇದನ್ನೂ ಓದಿ : ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ರಾಕಿಂಗ್ ಸ್ಟಾರ್ ಯಶ್ ಭೇಟಿಮುಹೂರ್ತ ಸಮಯದಲ್ಲಿ ಶ್ರುತಿ ಮಾತನಾಡುತ್ತಾ, ಪುನೀತ್ ಅವರ ಜತೆ ನಟಿಸುವ ಅವಕಾಶ ಕೈ ತಪ್ಪಿದ್ದರ ಬಗ್ಗೆ ನೆನಪಿಸಿಕೊಂಡರು. ‘ನಾನು ಪುನೀತ್ ಅವರ ದ್ವಿತ್ವಿ ಸಿನಿಮಾದಲ್ಲಿ ನಟಿಸಬೇಕಿತ್ತು. ಕಥೆ ಕೇಳಿ ಒಪ್ಪಿಕೊಂಡಿದ್ದೆ. ಸಿನಿಮಾ ಒಪ್ಪಿಕೊಂಡ ಕೆಲವೇ ದಿನಗಳಲ್ಲಿ ಪುನೀತ್ ನಿಧನರಾದರು. ಅವರ ಜತೆ ನಟಿಸಬೇಕು ಎನ್ನುವ ಆಸೆ ಹಾಗೆಯೇ ಉಳಿಯಿತು’ ಎಂದು ಪುನೀತ್ ಅವರನ್ನು ನೆನಪಿಸಿಕೊಂಡರು.Sign in to your account
Username or Email Address


Password

 Remember Me


